ಟೀಂ ಇಂಡಿಯಾಗೆ ಆಯ್ಕೆಯಾದ ವೈಭವ್ ಸೂರ್ಯವಂಶಿ ಆಟ ನೋಡಲು ಅಭಿಮಾನಿಗಳು ಕಾದು ಕುಳಿತರೆ, ಇತ್ತ ಯುವ ಬ್ಯಾಟರ್‌ಗೆ ಪ್ಲೇಯಿಂಗ್ 11ನಲ್ಲೇ ಸ್ಥಾನ ಸಿಕ್ಕಿಲ್ಲ. 2ನೇ ಪಂದ್ಯದಲ್ಲೂ ಬ್ಯಾಟರ್ ಬೆಂಚ್‌ನಲ್ಲೇ ಉಳಿಯಬೇಕಾಗಿದೆ.
ವೈಭವ್ ಸೂರ್ಯವಂಶಿ ಕೇವಲ 15ನೇ ವಯಸ್ಸಿನಲ್ಲಿ ಟೀಂ ಇಂಡಿಯಾಗೆ ಆಯ್ಕೆಯಾಗೋ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಆದರೆ ಟೀಂ ಇಂಡಿಯಾ ಆಡೋ ಹನ್ನೋಂದರಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ ಸಿಕಿಲ್ಲ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ವೈಭವ್ ಇದೀಗ 2ನೇ ಪಂದ್ಯದಲ್ಲೂ ಸ್ಥಾನ ಸಿಗದೆ ಬೆಂಚ್‌ನಲ್ಲೇ ಕುಳಿತಕೊಳ್ಳಬೇಕಾಗಿದೆ.
25
ಗೆಲ್ಲಲೇಬೇಕಾದ ಪಂದ್ಯದಲ್ಲೂ ಸ್ಥಾನ ಇಲ್ಲ
ಐರ್ಲೆಂಡ್ ವಿರುದ್ದದ ಮೊದಲ ಪಂದ್ಯದಲ್ಲಿ ಭಾರತ ಮುಗ್ಗರಿಸಿತು. ಇಂದು 2ನೇ ಹಾಗೂ ಕೊನೆಯ ಟಿ20 ಪಂದ್ಯ. ಹೀಗಾಗಿ ಗೆಲ್ಲಲೇಬೇಕಾದ ಟಿ20 ಪಂದ್ಯ ಇದು. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡುವ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ವೈಭವ್ ಸೂರ್ಯವಂಶಿಗೆ ಸ್ಥಾನ ಸಿಕ್ಕಿಲ್ಲ. ಇದು ಅಭಿಮಾನಿಗಳು ಬೇಸರ ತರಿಸಿದೆ. ಕೆಲ ಮಾಜಿ ಕ್ರಿಕೆಟಿಗರು ಈ ನಿರ್ಧಾರ ಸರಿಯಲ್ಲ ಎಂದಿದ್ದಾರೆ.
35
ವಾಟರ್ ಬಾಯ್ ಆದ ಸ್ಫೋಟಕ ಬ್ಯಾಟರ್
ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗದ ವೈಭವ್ ಸೂರ್ಯವಂಶಿ ವಾಟರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ನೀರು ಹಿಡಿದು ಮೈದಾನದ ಬೌಂಡರಿ ಲೈನ್ ಬಳಿ ಕಾಣಿಸಿಕೊಂಡ ವೈಭವ್ ಸೂರ್ಯವಂಶಿಗೆ ಅಭಿಮಾನಿಗಳು ಜಯಘೋಷ ಮೊಳಗಿಸಿದ್ದಾರೆ. ವೈಭವ್, ವೈಭವ್ ಎಂದು ಕೂಗಿದ್ದಾರೆ. ಇತ್ತ ವೈಭವ್ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಾಟರ್ ನೀಡುವ ಮೂಲಕ ತಂಡ ವಹಿಸಿದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಸೂರ್ಯಾಂಶ್ ಶೆಗ್ಡೆ ಹಾಗೂ ಪ್ರಿನ್ಸ್ ಯಾದವ್ ಇಬ್ಬರು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ ವೈಭವ್ ಸೂರ್ಯವಂಶಿ ಸರದಿ ಬರಲೇ ಇಲ್ಲ. ಕಳೆದ ಪಂದ್ಯದಲ್ಲಿ ದುಬಾರಿಯಾದ ವಾಶಿಂಗ್ಟನ್ ಸುಂದರ್ ಹಾಗೂ ಪ್ರಸಿದ್ಧ್ ಕೃಷ್ಣ ಇಬ್ಬರಿಗೂ ವಿಶ್ರಾಂತಿ ನೀಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.