ಐರ್ಲೆಂಡ್‌ ಎದುರು ಒಮ್ಮೆಯೂ ಸೋತಿಲ್ಲ ಈ ಮೂರು ತಂಡಗಳು..! ಲಿಸ್ಟ್‌ನಲ್ಲಿದೆ ಭಾರತದ ಒಂದು ನೆರೆಯ ದೇಶ

Published : Jun 27, 2026, 02:12 PM IST

Teams Unbeaten Against Ireland: ಭಾರತ ಹಾಗೂ ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಭಾರತಕ್ಕೆ ಮುಖಭಂಗವಾಗಿದೆ. ಇದರ ಬೆನ್ನಲ್ಲೇ ಐರ್ಲೆಂಡ್ ಎದುರು ಸೋಲದ ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ಮೂರು ತಂಡಗಳು ಯಾವುವು ನೋಡೋಣ ಬನ್ನಿ. 

PREV
16
ಐರ್ಲೆಂಡ್ ಎದುರು ಭಾರತಕ್ಕೆ 34 ರನ್‌ಗಳ ಸೋಲು

ಕ್ರಿಕೆಟ್‌ನಲ್ಲಿ ಯಾವ ತಂಡವನ್ನೂ ಲಘುವಾಗಿ ಪರಿಗಣಿಸಬಾರದು ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆಯೆಂದರೆ ಅದು, ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ. ಬೆಲ್ಫಾಸ್ಟ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ಎದುರು ಭಾರತ 34 ರನ್‌ಗಳ ಆಘಾತಕಾರಿ ಸೋಲು ಅನುಭವಿಸಿದೆ.

26
ಹಾಲಿ ಚಾಂಪಿಯನ್ನರಿಗೆ ಹೀನಾಯ ಸೋಲು

2026ರ ಐಸಿಸಿ 20 ವಿಶ್ವಕಪ್ ಚಾಂಪಿಯನ್ ಆದ ಬಳಿಕ ಭಾರತ ತಾನಾಡಿದ ಮೊದಲ ಪಂದ್ಯದಲ್ಲೇ ಅವಮಾನಕಾರಿ ಸೋಲು ಅನುಭವಿಸಿದೆ. ಶ್ರೇಯಸ್ ಅಯ್ಯರ್ ಪೂರ್ಣಪ್ರಮಾಣದ ಟಿ20 ನಾಯಕನಾದ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸುವ ಮೂಲಕ ಕ್ರಿಕೆಟ್‌ ಶಿಶುಗಳು ಎದುರು ಹಾಲಿ ಚಾಂಪಿಯನ್ನರು ಮಂಡಿಯೂರಿದ್ದಾರೆ.

36
ಐರ್ಲೆಂಡ್ ಎದುರು ಸೋಲದ ಮೂರು ತಂಡಗಳಿವು

ಐರ್ಲೆಂಡ್ ತಂಡವು ಈಗಾಗಲೇ ಹಲವು ಪಂದ್ಯಗಳಲ್ಲಿ ಬಲಿಷ್ಠ ತಂಡಗಳಿಗೆ ಸೋಲಿನ ರುಚಿ ತೋರಿಸುವ ಮೂಲಕ ದೈತ್ಯಸಂಹಾರ ಎನಿಸಿಕೊಂಡಿದೆ. ಈ ಪಟ್ಟಿಗೆ ಭಾರತ ಇದೀಗ ಸೇರ್ಪಡೆಯಾಗಿದೆ. ಆದರೆ ಐಸಿಸಿ ಪೂರ್ಣ ಸದಸ್ಯತ್ವ ಪಡೆದಿರುವ ಟೆಸ್ಟ್‌ ಪಂದ್ಯವನ್ನಾಡುವ ಮೂರು ತಂಡಗಳು ಇದುವರೆಗೂ ಐರ್ಲೆಂಡ್ ಎದುರು ಸೋತಿಲ್ಲ. ಅಷ್ಟಕ್ಕೂ ಆ ಮೂರು ತಂಡಗಳು ಯಾವುವು ನೋಡೋಣ ಬನ್ನಿ.

46
1. ಆಸ್ಟ್ರೇಲಿಯಾ:

ಆಸ್ಟ್ರೇಲಿಯಾ ತಂಡವು ಐರ್ಲೆಂಡ್ ಎದುರು ಈವರೆಗೆ ಏಕದಿನ ಹಾಗೂ ಟಿ20 ಪಂದ್ಯಗಳನ್ನು ಅಡಿದೆ. ಒಟ್ಟು 8 ಪಂದ್ಯಗಳ ಪೈಕಿ ಒಂದು ಪಂದ್ಯ ಮಳೆಯಿಂದ ರದ್ದಾದರೇ, ಇನ್ನುಳಿದ ಏಳು ಪಂದ್ಯಗಳಲ್ಲೂ ಆಸ್ಟ್ರೇಲಿಯಾ ತಂಡವು ಐರ್ಲೆಂಡ್ ಎದುರು ಗೆದ್ದು ಬೀಗಿದೆ.

56
2. ಶ್ರೀಲಂಕಾ:

ಭಾರತದ ನೆರೆಯ ರಾಷ್ಟ್ರವಾಗಿರುವ ಶ್ರೀಲಂಕಾ ಕೂಡಾ, ಐರ್ಲೆಂಡ್ ಎದುರು ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಐರ್ಲೆಂಡ್ ಎದುರು 11 ಪಂದ್ಯಗಳನ್ನಾಡಿರುವ ಶ್ರೀಲಂಕಾ ತಂಡವು ಎಲ್ಲಾ ಪಂದ್ಯಗಳಲ್ಲೂ ಗೆದ್ದು ಬೀಗಿದೆ.

66
3. ನ್ಯೂಜಿಲೆಂಡ್:

ಐರ್ಲೆಂಡ್ ಎದುರು ಅತಿಹೆಚ್ಚು ಗೆಲುವು ಕಂಡ ತಂಡವೆಂದರೆ, ಅದು ನ್ಯೂಜಿಲೆಂಡ್. ಕಿವೀಸ್ ಪಡೆ ಐರ್ಲೆಂಡ್ ಎದುರು ಒಟ್ಟು 13 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಎಲ್ಲಾ 13 ಪಂದ್ಯಗಳಲ್ಲೂ ನ್ಯೂಜಿಲೆಂಡ್ ತಂಡವು ಗೆಲುವು ಸಾಧಿಸುವ ಮೂಲಕ ಸಂಪೂರ್ಣ ಮೇಲುಗೈ ಸಾಧಿಸಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories