ನನ್ನ ಕುಟುಂಬ ಎರಡು ತಂಡಗಳನ್ನು ಬೆಂಬಲಿಸಬೇಕು : ಹೀಗೆಂದ ಭಾರತೀಯ ಮೂಲದ ಒಮನ್ ಆಟಗಾರ ಯಾರು?

First Published Oct 20, 2021, 8:07 PM IST

ವಿಶ್ವಕಪ್‌ನ ಮೊದಲ ಪಂದ್ಯಾವಳಿಯಲ್ಲಿ ಓಮನ್(Oman) ಹಾಗೂ ಪಪುವಾ ನ್ಯೂಗಿನಿಯಾ(Papua New Guinea) ಮುಖಾಮುಖಿಯಾಗಿತ್ತು ಈ ಹೋರಾಟದಲ್ಲಿ ಓಮನ್ 10 ವಿಕೆಟ್ ಭರ್ಜರಿ ಗೆಲುವು ಕಂಡಿತ್ತು. 42 ಎಸೆತೆಗಳಲ್ಲಿ 73 ರನ್‌ ಗಳಿಸಿ ಒಮನ್‌ಗೆ ಜಯಗಳಿಸಿಕೊಟ್ಟ ಭಾರತೀಯ ಮೂಲದ ಜತಿಂದರ್‌ ಸಿಂಗ್‌ (Jatinder Singh)ಯಾರು ಗೊತ್ತಾ? 
 

ICC T20 ವಿಶ್ವಕಪ್ ನಲ್ಲಿ ಮಿಂಚುತ್ತಿರುವ ಜತಿಂದರ್  ಇತ್ತೀಚೆಗೆ ಭಾರತದ  ತಂಡದ ಆರಂಭಿಕ ಆಟಗಾರ ಶಿಕರ್‌ ಧವನ್‌ರ (Shikhar Dhawan)  ʼthigh-fiveʼ ಸಂಭ್ರಾಮಚರಣೆ ಶೈಲಿಯನ್ನು ನಕಲು ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದರು 

ಜತಿಂದರ್ ತಂದೆ ಗುರ್ಮೇಲ್‌ ಸಿಂಗ್‌ 1975 ರಲ್ಲಿ ಉದ್ಯೋಗದ ನಿಮಿತ್ತ ಒಮನ್‌ಗೆ ವಲಸೆ ಹೋಗಿದ್ದರು. ಗುರ್ಮೇಲ್‌ ರಾಯಲ್‌ ಪೋಲಿಸ್‌ ಫೋರ್ಸ್‌ನಲ್ಲಿ  (Royal Police Force) ಬಡಗಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. 

ಜತಿಂದರ್‌ ಸಿಂಗ್‌ ತಾಯಿ ಪರಮ್‌ಜೀತ್ ಕೌರ್‌ ತನ್ನ ಮೂವರು ಒಡ ಹುಟ್ಟಿದವರ ಜತೆ 2003ರಲ್ಲಿ ಮಧ್ಯ ಪೂರ್ವದ ದೇಶಗಳಿಗೆ ವಲಸೆ ಹೋಗಿದ್ದರು

ಸಿದ್ದಿಕ್‌ ಜ್ವೆಲರ್ಸ್‌ನಂತಹ ಸಣ್ಣ ಕ್ರಿಕೆಟ್‌ ತಂಡಗಳಿಗೆ ಆಡುವ ಮೂಲಕ  ಜತಿಂದರ್‌  ಕ್ರಿಕೆಟ್‌ ಜರ್ನಿ ಆರಂಭವಾಗಿತ್ತು. ಸಣ್ಣ ಕ್ರಿಕೆಟ್‌ ಪಂದ್ಯಾವಳಿಗಳ ಆರಂಭ ಮಾಡಿದ್ದ ಜಿತೆಂದರ್‌ ಇಂದು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಆಡುತ್ತಿದ್ದಾರೆ.

ಜನವರಿ 2011 ರಲ್ಲಿ ತನ್ನ 20ನೇ ವಯಸ್ಸಿನಲ್ಲಿ ಒಮನ್‌ ತಂಡಕ್ಕೆ ಆಡುವ ಮೂಲಕ ಕ್ರಿಕೆಟ್‌ ಲೋಕಕ್ಕೆ ಪದಾರ್ಪಣೆ ಮಾಡಿದರು ಜತಿಂದರ್‌!

2012 ರಲ್ಲಿ  ICC league 2 ಪಂದ್ಯಾವಳಿಗಳನ್ನಾಡಿ 2015 ರಲ್ಲಿ ದುಬೈನಲ್ಲಿ ನಡೆದ ಪಂದ್ಯಾವಳಿಯಲ್ಲಿ ಅಫಘಾನಿಸ್ತಾನ್‌ ವಿರುದ್ದದ ಪಂದ್ಯದಲ್ಲಿ T20 ಯಲ್ಲಿ ಪದಾರ್ಪಣೆ ಮಾಡಿದರು

ನಂತರ ಹಲವಾರು ಚುಟುಕು ಪಂದ್ಯಾವಳಿಗಳಲ್ಲಿ ಜತಿಂದರ್‌ ಸಿಂಗ್‌ ಒಮನ್ ಪರ ಬ್ಯಾಟ್‌ ಬೀಸಿದ್ದಾರೆ. ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

ಸಚಿನ್‌ ತೆಂಡೂಲ್ಕರ್‌ (Sachin Tendulkar) ಮತ್ತು ವೀರೆಂದ್ರ ಸೆಹ್ವಾಗ್‌ (Virendra Sehwag) ರನ್ನು ಅನುಸರಿಸಿತ್ತಾ ಕ್ರಿಕೆಟ್‌ ಜಗತ್ತಿನಲ್ಲಿ ಬೆಳೆದು ನಿಂತಿದ್ದಾರೆ ಜತಿಂದರ್‌ 

ಒಮನ್ ಜರ್ಸಿಯನ್ನು ಹಾಕಿಕೊಂಡು ನಾನು ಆಟವಾಡುವಾಗ ಎರಡು ತಂಡಗಳನ್ನು ನೀವು ಈಗ ಬೆಂಬಲಿಸಬೇಕು (ಭಾರತ ಮತ್ತು ಒಮನ್) ಎಂದು ತನ್ನ ಪಾಲಕರಿಗೆ ಜತಿಂದರ್‌ ಸಿಂಗ್‌ ಹೇಳಿದ್ದಾರೆ.

ಕ್ರಿಕೆಟ್‌ ಆಡುವುದರ ಹೊರತಾಗಿ ಜತಿಂದರ್‌ ಸಿಂಗ್‌ ಖಿಮ್ಜಿ ರಾಮ್‌ದಾಸ್ (Khimji Ram das) ಎಂಬ ಕಂಪನಿಯಲ್ಲಿ ಕೂಡ ಕೆಲಸ ಮಾಡುತ್ತಾರೆ.

click me!