ಬೆಂಗಳೂರು: ಇತ್ತೀಚೆಗಷ್ಟೇ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಟಿ20 ತಂಡವು ಕ್ರಿಕೆಟ್ ಶಿಶು ಐರ್ಲೆಂಡ್ ಎದುರು ಟಿ20 ಸರಣಿ ವೈಟ್‌ವಾಷ್ ಅನುಭವಿಸಿತ್ತು. ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ಹೆಡ್ ಕೋಚ್ ಮೈಕ್ ಹೆಸ್ಸನ್, ಟೀಂ ಇಂಡಿಯಾ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ.
ಭಾರತ ತಂಡವು ಕಳೆದ ಮೂರು ವರ್ಷಗಳಲ್ಲಿ ಸತತ ಮೂರು ಐಸಿಸಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. 2024ರಲ್ಲಿ ಟಿ20 ವಿಶ್ವಕಪ್, 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2026ರಲ್ಲಿ ಮತ್ತೊಮ್ಮೆ ಐಸಿಸಿ ಟಿ20 ಟ್ರೋಫಿ ಜಯಿಸಿದೆ. ಇದರ ಹೊರತಾಗಿ ಇತ್ತೀಚೆಗಷ್ಟೇ ಭಾರತ ತಂಡವು ಕ್ರಿಕೆಟ್ ಶಿಶು ಐರ್ಲೆಂಡ್ ಎದುರು ಮೊದಲ ಸಲ ಟಿ20 ಸರಣಿ ವೈಟ್‌ವಾಷ್ ಮುಖಭಂಗ ಅನುಭವಿಸಿತ್ತು.
26
ಭಾರತದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಪಾಕ್ ಹೆಡ್ ಕೋಚ್
ಇದೆಲ್ಲದರ ಹೊರತಾಗಿಯೂ ಪಾಕಿಸ್ತಾನ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ಹೆಡ್ ಕೋಚ್ ಮೈಕ್ ಹೆಸ್ಸನ್, ಟೀಂ ಇಂಡಿಯಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತ ತಂಡವು ಜಗತ್ತಿನ ಅತ್ಯುತ್ತಮ ತಂಡಗಳಲ್ಲಿ ಒಂದು. ಭಾರತ ತಂಡವನ್ನು ಸೋಲಿಸಲು ಎಲ್ಲಾ ತಂಡಗಳು ಸಾಕಷ್ಟು ಕಷ್ಟಪಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
36
ಭಾರತ ಎದುರು ಪಾಕಿಸ್ತಾನ ಪ್ರದರ್ಶನದ ವಿಶ್ಲೇಷಣೆ ಮಾಡಿದ ಹೆಸ್ಸನ್
ಆರ್‌ಸಿಬಿಯ ಮಾಜಿ ಕೋಚ್ ಆಗಿದ್ದ ನ್ಯೂಜಿಲೆಂಡ್ ಮೂಲದ ಮೈಕ್ ಹೆಸ್ಸನ್, 2025ರಲ್ಲಿ ಪಾಕಿಸ್ತಾನ ಸೀಮಿತ ಓವರ್‌ಗಳ ತಂಡದ ಹೆಡ್‌ಕೋಚ್ ಆಗಿ ನೇಮಕವಾಗಿದ್ದಾರೆ. ಭಾರತದ ಇತ್ತೀಚಿನ ಪ್ರಾಬಲ್ಯವು ಪಾಕಿಸ್ತಾನ ತನ್ನ ಬದ್ದವೈರಿಗಳ ವಿರುದ್ದ ಅನುಭವಿಸಿದ ಸೋಲುಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.
ಕಳೆದೊಂದು ದಶಕದಿಂದ ಭಾರತ-ಪಾಕ್ ನಡುವೆ ದ್ವಿಪಕ್ಷೀಯ ಸರಣಿ ಇಲ್ಲ
ರಾಜತಾಂತ್ರಿಕ ಬಿಕ್ಕಟ್ಟು ಹಾಗೂ ಭದ್ರತೆಯ ಕಾರಣದಿಂದಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಳೆದೊಂದು ದಶಕದಿಂದಲೂ ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಂಡಿಲ್ಲ. ಉಭಯ ತಂಡಗಳು ಐಸಿಸಿ ಹಾಗೂ ಏಷ್ಯಾಕಪ್ ಟೂರ್ನಿಗಳಂತಹ ಬಹುಪಕ್ಷೀಯ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಭಾರತ ತಂಡವು 2022ರಿಂದೀಚೆಗೆ, 2025ರ ಏಷ್ಯಾಕಪ್ ಹ್ಯಾಟ್ರಿಕ್ ಗೆಲುವು ಸೇರಿದಂತೆ ಎಲ್ಲಾ ಮುಖಾಮುಖಿಯಲ್ಲೂ ಪಾಕಿಸ್ತಾನವನ್ನು ಭಾರತ ಹೀನಾಯವಾಗಿ ಸದೆ ಬಡೆದಿದೆ.
56
ಭಾರತ ತಂಡವನ್ನು ಸೋಲಿಸಲು ಉಳಿದ ತಂಡಗಳು ಒದ್ದಾಡುತ್ತಿವೆ
ಈ ಬಗ್ಗೆ ಮಾತನಾಡಿರುವ ಮೈಕ್ ಹೆಸ್ಸೆನ್, 'ಕಳೆದ ವರ್ಷ ನಡೆದ ಏಷ್ಯಾಕಪ್ ಟೂರ್ನಿಯನ್ನೇ ಉದಾಹರಣೆಯನ್ನಾಗಿ ನೋಡುವುದಾದರೇ, ನಾವು ಭಾರತವನ್ನು ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳನ್ನು ಗೆದ್ದಿದ್ದೇವೆ. ಇದರರ್ಥ ಪಾಕಿಸ್ತಾನ ಮಾತ್ರವಲ್ಲ ಜಗತ್ತಿನ ಪ್ರತಿಯೊಂದು ತಂಡವು ಭಾರತವನ್ನು ಸೋಲಿಸಲು ಒದ್ದಾಡುತ್ತಿವೆ' ಎಂದು ಹೇಳಿದ್ದಾರೆ.
66
ಭಾರತ ಜಗತ್ತಿನ ಉಳಿದ ತಂಡಗಳಿಗಿಂತ ಮೈಲುಗಟ್ಟಲೇ ಮುಂದಿದೆ
'ಅದು ಸರಿಯೋ, ತಪ್ಪೋ, ಪಾಕಿಸ್ತಾನದ ಸಾಮರ್ಥ್ಯವನ್ನು ಭಾರತದ ವಿರುದ್ದದ ಅವರ ಪ್ರದರ್ಶನದ ಆಧಾರದಲ್ಲಿ ಅಳೆಯಲಾಗುತ್ತದೆ. ಸದ್ಯದ ಮಟ್ಟಿಗಂತೂ ಟೀಂ ಇಂಡಿಯಾ ಕೇವಲ ಜಗತ್ತಿನ ಅತ್ಯುತ್ತಮ ತಂಡ ಮಾತ್ರವಲ್ಲ, ಇತರ ತಂಡಗಳಿಗಿಂತ ಮೈಲುಗಟ್ಟಲೇ ಮುಂದಿದೆ' ಎಂದು ಪಾಕಿಸ್ತಾನದ ಕೋಚ್ ಅಚ್ಚರಿಯ ಮಾತುಗಳನ್ನಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.