ಅಲ್ಲಿಯೂ ಇಲ್ಲ, ಇಲ್ಲಿಯೂ ಬೇಡ; ಯಾರಿಗೂ ಬೇಡವಾದ ಹಾರ್ದಿಕ್? CSK & MIನಿಂದ ಹೇಳಿಕೆ

Published : Jul 02, 2026, 06:18 PM IST

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಕೈಬಿಡಲಿದೆಯೇ? ಕಳಪೆ ಪ್ರದರ್ಶನದ ನಂತರ ತಂಡದ ಅಚ್ಚರಿಯ ಹೇಳಿಕೆ ಮತ್ತು ಇತರ ತಂಡಗಳ ಸ್ಪಷ್ಟನೆ ಬಗ್ಗೆ ಸಂಪೂರ್ಣವಾಗಿ ತಿಳಿಯಿರಿ.

PREV
15
ಹಾರ್ದಿಕ್ ಪಾಂಡ್ತ

ಈ ಬಾರಿ ಕಳಪೆ ಪ್ರದರ್ಶನದಿಂದಾಗಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡದಿಂದ ಕೈಬಿಡಲಾಗುತ್ತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮುಂಬೈ ಇಂಡಿಯನ್ಸ್ ತಂಡದಿಂದ ಅಚ್ಚರಿ ಹೇಳಿಕೆಯೊಂದು ಹೊರ ಬಂದಿದೆ. ಮತ್ತೊಂದೆಡೆ ಇನ್ನೊಂದು ತಂಡವೂ ಹಾರ್ದಿಕ್ ಪಾಂಡ್ಯ ಆಯ್ಕೆ ಕುರಿತು ಸ್ಪಷ್ಟನೆ ನೀಡಿರುವ ಬಗ್ಗೆ ವರದಿಯಾಗಿದೆ.

25
2026ರ ಪಂದ್ಯದ ಬಗ್ಗೆ ವಿಮರ್ಶೆಗಳು

ಕ್ರಿಕ್‌ಬಜ್ ವರದಿ ಪ್ರಕಾರ, ಹಾರ್ದಿಕ್ ಪಾಂಡ್ಯ ಜೊತೆಗಿನ ಟ್ರೇಡ್ ಡೀಲ್ ಸಂಬಂಧ ಯಾವುದೇ ನಿರ್ಧಾರಗಳನ್ನು ಮುಂಬೈ ಇಂಡಿಯನ್ಸ್ ತಂಡ ತೆಗೆದುಕೊಂಡಿಲ್ಲ. ಸದ್ಯ ಐಪಿಎಲ್ 2026ರ ಪಂದ್ಯದ ಬಗ್ಗೆ ವಿಮರ್ಶೆಗಳು ನಡೆಯುತ್ತಿವೆ. ಟ್ರೇಡ್ ನಡೆಯುತ್ತಾ ಅಥವಾ ಇಲ್ಲವಾ ಎಂಬುವುದು ವಿಮರ್ಶೆ ಬಳಿಕವೇ ನಿರ್ಧಾರವಾಗಲಿದೆ ಎಂದು ಮುಂಬೈ ಇಂಡಿಯನ್ಸ್ ಹೇಳಿದೆ ಎಂದು ವರದಿಯಾಗಿದೆ.

35
ಚೆನ್ನೈ ತಂಡದ ಹೇಳಿಕೆ

ಇತ್ತ ಚೆನ್ನೈ ಸೇರಿದಂತೆ ಏಳು ತಂಡಗಳು ಹಾರ್ದಿಕ್ ಪಾಂಡ್ಯ ಖರೀದಿಗೆ ಒಲವು ತೋರಿಸಿವೆ ಎಂಬ ಮಾತುಗಳ ಸಹ ಕೇಳಿ ಬಂದಿದ್ದವು. ಈ ಊಹಾಪೋಹಕ್ಕೆ ಪ್ರತಿಕ್ರಿಯಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡ, ನಮಗೆ ಎಲ್ಲಾ ವಿಷಯಗಳು ಗೊತ್ತಿವೆ. ಯಾವ ಆಟಗಾರ ಟ್ರೇಡ್‌ಗೆ ಲಭ್ಯವಿದ್ದಾರೆ ಅಥವಾ ಇಲ್ಲ ಎಂಬುವುದು ಎಂದು ತಿಳಿದಿದೆ. ಯಾರನ್ನು ಖರೀದಿ ಮಾಡಬೇಕು ಎಂಬುದರ ಬಗ್ಗೆ ಫ್ರಾಂಚೈಸಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕ್ರಿಕ್‌ಬುಜ್ ವರದಿ ಮಾಡಿದೆ.

45
ಯಾಕೆ ಈ ಊಹಾಪೋಹ?

2024ರಲ್ಲಿ ಕರೆದುಕೊಂಡ ಬಂದ ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ ಅವರನ್ನು ಟೀಂ ನಾಯಕನನ್ನಾಗಿ ಮಾಡಿತ್ತು. 2026 ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪ್ರದರ್ಶನ ತೀರಾ ಕಳಪೆಯಾಗಿತ್ತು. ಸೀಸನ್ ಮುಗಿಯುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಸೋಲಿನ ಪರಾಮರ್ಶೆಯನ್ನು ನಡೆಸುತ್ತಿದೆ. ಸಾಲು ಸಾಲು ಸಭೆಗಳ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ನಿಂದ ಕೈ ಬಿಡಲಾಗುತ್ತೆ ಎಂಬ ಮಾತುಗಳು ಕೇಳಿ ಬಂದಿವೆ.

55
ಆಲ್‌ರೌಂಡರ್‌ ಆಗಿರುವ ಹಾರ್ದಿಕ್ ಪಾಂಡ್ಯ

ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಅಥವಾ ರಾಜಸ್ಥಾನ ರಾಯಲ್ಸ್ ತಂಡಗಳು ಹಾರ್ದಿಕ್ ಪಾಂಡ್ಯ ಖರೀದಿಗೆ ಆಸಕ್ತಿ ತೋರಿವೆ ಅಂತ ಹೇಳಲಾಗುತ್ತಿದೆ. ಇತ್ತ ಕೃನಾಲ್ ಪಾಂಡ್ಯ ಅವರು ಸೋದರ ಹಾರ್ದಿಕ್ ಪಾಂಡ್ಯ ಅವರನ್ನು ಬೆಂಗಳೂರು ತಂಡಕ್ಕೆ ಕರೆದುಕೊಂಡು ಬರಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಆಲ್‌ರೌಂಡರ್‌ ಆಗಿರುವ ಹಾರ್ದಿಕ್ ಪಾಂಡ್ಯ ಬೇಡಿಕೆಯ ಆಟಗಾರರಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories