ಅಥಿಯಾ ಶೆಟ್ಟಿ ಜೊತೆ ಹೊಸ ವರ್ಷ ಆಚರಿಸಿದ ಕೆಎಲ್ ರಾಹುಲ್ ಕಾಲೆಳೆದ ನೆಟ್ಟಿಗರು!

First Published Jan 2, 2023, 4:21 PM IST

ದುಬೈನಲ್ಲಿ ಕ್ರಿಕೆಟಿಗ ಕೆಎಲ್ ರಾಹುಲ್ (K L Rahul) ಅವರ ಗರ್ಲ್‌ಫ್ರೆಂಡ್‌ ಬಾಲಿವುಡ್‌ ನಟಿ  ಅಥಿಯಾ ಶೆಟ್ಟಿ (Athiya Shetty) ಅವರೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದರು. ಈ ಸಮಯದ ಪಾರ್ಟಿಯ ಕೆಲವು ಫೋಟೋಗಳನ್ನು ರಾಹುಲ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ರಾಹುಲ್‌ ಅವರ ಫೋಟೋಳಿಗೆ ನೆಟಿಜನ್ಸ್‌ ತೀವ್ರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ. 

2022 ರ ಅಂತ್ಯವನ್ನು ಆಚರಿಸುತ್ತಾ, ಕೆ ಎಲ್‌ ರಾಹುಲ್‌ ಮತ್ತು ಅಥಿಯಾ ಶೆಟ್ಟಿ ತನ್ನ ಸ್ನೇಹಿತರ ಜೊತೆಗೆ ಇರುವ ಫೋಟೋಗಳನ್ನು Instagramನಲ್ಲಿ ಹಂಚಿಕೊಂಡಿದ್ದಾರೆ. 

ಫೋಟೋಗಳಲ್ಲಿ ಅಥಿಯಾ ಸ್ಟ್ರಾಪ್‌ಲೆಸ್ ಕಪ್ಪು ಕಾರ್ಸೆಟ್ ಮತ್ತು ಪ್ಯಾಂಟ್ ಧರಿಸಿದ್ದರೆ, ರಾಹುಲ್ ಕಪ್ಪು ಪ್ಯಾಂಟ್‌ನೊಂದಿಗೆ ಕಪ್ಪು ಶರ್ಟ್ ಧರಿಸಿದ್ದಾರೆ.

ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರು ಈ ಹೊಸ ವರ್ಷದ ಆರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ನಿರೀಕ್ಷೆಯಿದೆ. ಈ ನಡುವೆ ರಾಹುಲ್‌ ಅವರ ಹೊಸ ವರ್ಷದ ಆಚರಣೆಯ ಫೋಟೋ ಮಾಡಿದ ನಂತರ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಭಾರತದ ಓಪನರ್ ಕೆಎಲ್ ರಾಹುಲ್ ಗೆಳತಿ ಆಥಿಯಾ ಶೆಟ್ಟಿ ಅವರೊಂದಿಗಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ ನಂತರ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ  ಟ್ರೋಲ್ ಮಾಡಲಾಗಿದೆ.
 

ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 14.25 ರ ಸರಾಸರಿಯೊಂದಿಗೆ ಸೀಸನ್‌ ಕೊನೆಗೊಳಿಸಿದ ಟೀಮ್ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಅವರು2022 ರಲ್ಲಿ ಹೆಚ್ಚಿನ ಪ್ರದರ್ಶನ ನೀಡಲಿಲ್ಲ.
 

ಬಾಂಗ್ಲಾ ತಂಡದ ವಿರುದ್ಧ ಭಾರತವನ್ನು 2-0 ಸರಣಿ ವೈಟ್‌ವಾಶ್‌ಗೆ ಮುನ್ನಡೆಸಿದರೂ,ರಾಹುಲ್‌ ನಾಯಕ ಬ್ಯಾಟ್‌ಗಳಿಂದ ಗಳಿಸಿದ್ದು ಕೇವಲ 22 ರನ್ ಮಾತ್ರ. ಈ ಕಾರಣದಿಂದಾಗಿಯೇ ಗೆಳತಿ ಅಥಿಯಾ ಶೆಟ್ಟಿ ಅವರೊಂದಿಗಿನ ಫೋಟೋಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ  ಕ್ರಿಕೆಟ್ ಅಭಿಮಾನಿಗಳಿಂದ  ಟ್ರೋಲ್ ಆಗಿದೆ.
 

ರಾಹುಲ್ ಈ ತಿಂಗಳ ಕೊನೆಯಲ್ಲಿ ಅಥಿಯಾ ಅವರನ್ನು ಮದುವೆಯಾಗಬಹುದು ಎಂದು ವದಂತಿಗಳಿವೆ ಮತ್ತು ಅದಕ್ಕಾಗಿಯೇ ಮಂಗಳವಾರ (ಜನವರಿ 3) ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ T20I ಸರಣಿಯಿಂದ ಅವರಿಗೆ ವಿರಾಮ ನೀಡಲಾಗಿದೆ.

'ಸಹೋದರ, ನೀವು ಈಗ ನಿಮ್ಮ ಹೆಂಡತಿಯೊಂದಿಗೆ ಇರಿ ಮತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ಹಿಂದಿರುಗಬೇಡಿ ಏಕೆಂದರೆ ನೀವು ಇನ್ನು ಮುಂದೆ #TeamIndia ಗೆ ಅಗತ್ಯವಿಲ್ಲ. ನೀವು ತಂಡದಲ್ಲಿ ಹೊರೆಯಾಗಿದ್ದೀರಿ' ಎಂದು ಒಬ್ಬ ಟ್ವಿಟ್ಟರ್ ಬಳಕೆದಾರರು  ಬರೆದಿದ್ದಾರೆ. 'ಪ್ಲೀಸ್ 4-5 ವರ್ಷಗಳವರೆಗೆ ಹಿಂದಿರುಗಬೇಡ.ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಲು ಇದು ನಿಮಗೆ ಉತ್ತಮ ಅವಕಾಶ,' ಎಂದು ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ.
 

click me!