ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು ಕೆಲ ದಿನ ಮಾತ್ರ. ಬಲಿಷ್ಠ ತಂಡವನ್ನು ಕಣಕ್ಕಿಳಿಸುವ ಟೀಂ ಇಂಡಿಯಾದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಪ್ರಮುಖ ಆಟಗಾರ ತಂಡದಿಂದ ಔಟ್ ಆಗಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ನಡುವಿನ 2 ಟೆಸ್ಟ್ ಪಂದ್ಯಗಳ ಸರಣಿ ಆಗಸ್ಟ್ 15 ರಿಂದ ಆರಂಭಗೊಳ್ಳುತ್ತಿದೆ. ಟೀಂ ಇಂಡಿಯಾ ತಯಾರಿ ನಡುವೆ ಅತೀ ದೊಡ್ಡ ಹಿನ್ನಡೆಯಾಗಿದೆ. ಟೀಂ ಇಂಡಿಯಾ ಕೀ ಪ್ಲೇಯರ್, ಬೌಲಿಂಗ್ ವಿಭಾಗದ ಶಕ್ತಿಯಾಗಿ ಗುರುತಿಸಿಕೊಂಡಿರುವ ವೇಗಿ ಜಸ್‌ಪ್ರೀತ್ ಬುಮ್ರಾ ಗಾಯಗೊಂಡಿದ್ದಾರೆ. ಪರಿಣಾಮ ಬುಮ್ರಾ ಬಹುತೇಕ ಟೂರ್ನಿಯಿಂದ ಔಟ್ ಆಗಿದ್ದಾರೆ.
26
ಬುಮ್ರಾಗೆ ಇಂಜುರಿ ಸಮಸ್ಯೆ
ಜಸ್ಪ್ರೀತ್ ಬುಮ್ರಾ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಮೊಣಕಾಲು ನೋವಿನಿಂದ ಬಳಲುತ್ತಿರುವ ಬುಮ್ರಾ ಈಗಾಗಲೇ ಪುನವರ್ತಸಿ ಕೇಂದ್ರದಿಂದ ನೇರವಾಗಿ ಟೀಂ ಇಂಡಿಯಾ ಜೊತೆ ಪ್ರವಾಸ ಕುರಿತು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬುಮ್ರಾ ಮೊಣಕಾಲಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಅನ್ನೋದು ಸ್ಪಷ್ಟವಾಗಿದೆ. ಹೀಗಾಗಿ ಟೀಂ ಇಂಡಿಯಾ ಜೊತೆ ಬುಮ್ರಾ ಶ್ರೀಲಂಕಾ ಪ್ರವಾಸ ಅಸಾಧ್ಯ ಎಂದು ಟೀಂ ಇಂಡಿಯಾ ಮೂಲಗಳು ಹೇಳಿವೆ.
36
ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದ ಬುಮ್ರಾ
ಟೀಂ ಇಂಡಿಯಾ ಆಯ್ಕೆ ಸಮಿತಿ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು. ಆದರೆ ಬುಮ್ರಾ ಲಭ್ಯತೆ ಕುರಿತು ಹಲವು ಅನುಮಾನಗಳು ಮೂಡಿತ್ತು. ಜಸ್ಪ್ರೀತ್ ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಆಯ್ಕೆ ಸಮಿತಿ ಬುಮ್ರಾ ಆಯ್ಕೆ ಮಾಡಿ ಅಚ್ಚರಿ ನೀಡಿತ್ತು. ಸದ್ಯಕ್ಕೆ ಬುಮ್ರಾ ಟೀಂ ಇಂಡಿಯಾ ಸೇರಿಕೊಳ್ಳುತ್ತಿಲ್ಲ ಅನ್ನೋದು ಬಹುತೇಕ ಖಚಿತಗೊಂಡಿದೆ.
ಗಾಯ ಸಂಪೂರ್ಣವಾಗಿ ಚೇತರಿಸಿಕೊಳ್ಳದೆ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಪರಿಪಾಠವಿಲ್ಲ. ಈ ಹಿಂದೆ ಹಲವು ಕ್ರಿಕೆಟಿಗರು ಈ ರೀತಿ ಮಾಡಿ ಪ್ರಮುಖ ಘಟ್ಟದಲ್ಲಿ ಅಲಭ್ಯರಾಗಿದ್ದಾರೆ. ಜೊತೆಗೆ ಇಂಜುರಿ ಸಮಸ್ಯೆಗಳಿಂದ ಬಹುತೇಕ ಕರಿಯರ್‌ನಲ್ಲಿ ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ಸಂಪೂರ್ಣ ಫಿಟ್ ಆದ ಬಳಿಕವಷ್ಟೇ ಆಟಗಾರರ ತಂಡಕ್ಕೆ ಮರಳಲು ಸಾಧ್ಯ ಎಂದು ಬಿಸಿಸಿಐ ಮೂಲಗಳು ಹೇಳಿವೆ.
56
ಏಕದಿನ ವಿಶ್ವಕಪ್ ದೃಷ್ಠಿಯಿಂದ ಎಚ್ಚರಿಕೆ ಹೆಜ್ಜೆ
ಶ್ರೀಲಂಕಾದ 2 ಟೆಸ್ಟ್ ಪಂದ್ಯದ ಸರಣಿಗೆ ಬುಮ್ರಾ ಆಯ್ಕೆ ಮಾಡಿ ಮುಂಬರುವ ಪ್ರಮುಖ ಟೂರ್ನಿಗಳಲ್ಲಿ ಅಲಭ್ಯರಾದರೆ ಸಮಸ್ಯೆಗಳು ತೀವ್ರಗೊಳ್ಳಲಿದೆ. ಹೀಗಾಗಿ ಬುಮ್ರಾಗೆ ಸಂಪೂರ್ಣ ವಿಶ್ರಾಂತಿ ನೀಡಿ ಸಂಪೂರ್ಣ ಫಿಟ್ ಆಗಲು ಅವಕಾಶ ನೀಡಲಾಗುತ್ತದೆ. ಇದರಿಂದ ಸುದೀರ್ಘ ಕರಿಯರ್ ಹಾಗೂ ಟೀಂ ಇಂಡಿಯಾಗೂ ನೆರವಾಗಲಿದೆ ಎಂದು ಬಿಸಿಸಿಐ ಹೇಳಿದೆ.
66
ಲಂಕಾದಲ್ಲಿ ಟೀಂ ಇಂಡಿಯಾ ಬೌಲಿಂಗ್ ಜವಾಬ್ದಾರಿ ಯಾರಿಗೆ
ಬುಮ್ರಾ ಅಲಭ್ಯತೆ ಕುರಿತು ಬಿಸಿಸಿಐ ಅಥವಾ ಜಸ್ಪ್ರೀತ್ ಬುಮ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಬುಮ್ರಾ ಅಲಭ್ಯತೆ ಬಹುತೇಕ ಖಚಿತ ಅನ್ನೋ ಸುಳಿವು ನೀಡಿದೆ. ಇದೀಗ ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಬುಮ್ರಾ ಅಲಭ್ಯತೆಯಲ್ಲಿ ಬೌಲಿಂಗ್ ಮಾಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.