ಭಾರತವು ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದಿದ್ದು, ಈ ಲೇಖನವು ಭಾರತದ ಪರ ಅತಿ ಹೆಚ್ಚು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿದ ಟಾಪ್-7 ಆಟಗಾರರ ಪಟ್ಟಿಯನ್ನು ನೀಡುತ್ತದೆ. ಸಚಿನ್ ತೆಂಡೂಲ್ಕರ್ 6 ವಿಶ್ವಕಪ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಬೆಂಗಳೂರು: ಭಾರತ ತಂಡವು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮೊದಲ ಬಾರಿಗೆ 1983 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಗೆದ್ದರೆ, 2011 ರಲ್ಲಿ ಎಂ.ಎಸ್. ಧೋನಿ ನಾಯಕತ್ವದಲ್ಲಿ ಎರಡನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಆದರೆ ಭಾರತದ ಪರ ಅತಿ ಹೆಚ್ಚು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಕೀರ್ತಿ ಯಾರಿಗೆ ಸಲ್ಲುತ್ತದೆ ಗೊತ್ತಾ? ಈ ಪಟ್ಟಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಪರ ಅತಿ ಹೆಚ್ಚು ವಿಶ್ವಕಪ್ ಆಡಿದ ಟಾಪ್-7 ಆಟಗಾರರ ವಿವರ ಇಲ್ಲಿದೆ.
28
1. ಸಚಿನ್ ತೆಂಡೂಲ್ಕರ್ (Sachin Tendulkar)
ಭಾರತದ ಪರ ಅತಿ ಹೆಚ್ಚು ವಿಶ್ವಕಪ್ ಆಡಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಬರೋಬ್ಬರಿ 6 ಏಕದಿನ ವಿಶ್ವಕಪ್‌ಗಳನ್ನು ಆಡಿದ್ದಾರೆ. 1992 ರಲ್ಲಿ ತಮ್ಮ ಮೊದಲ ವಿಶ್ವಕಪ್ ಆಡಿದ್ದ ಸಚಿನ್, 2011 ರಲ್ಲಿ ಕೊನೆಯ ವಿಶ್ವಕಪ್ ಆಡಿದರು. ಅದೇ ವರ್ಷ ಭಾರತ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು ವಿಶೇಷ.
38
2. ಕಪಿಲ್ ದೇವ್ (Kapil Dev)
ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ಯಶಸ್ವಿ ನಾಯಕ ಕಪಿಲ್ ದೇವ್ ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 4 ವಿಶ್ವಕಪ್‌ಗಳನ್ನು ಆಡಿದ್ದಾರೆ. ಇವರು 1979 ರಲ್ಲಿ ಮೊದಲ ವಿಶ್ವಕಪ್ ಆಡಿದ್ದರೆ, 1992 ರಲ್ಲಿ ಕೊನೆಯ ವಿಶ್ವಕಪ್ ಪಂದ್ಯವನ್ನು ಆಡಿದ್ದರು.
ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೂಡ 4 ವಿಶ್ವಕಪ್ ಆಡಿದ ಭಾರತೀಯ ಆಟಗಾರರ ಪಟ್ಟಿಯಲ್ಲಿದ್ದಾರೆ. 1987 ರಲ್ಲಿ ಇವರು ಮೊದಲ ವಿಶ್ವಕಪ್ ಆಡಿದ್ದರೆ, 1999 ರಲ್ಲಿ ತಮ್ಮ ಕೊನೆಯ ವಿಶ್ವಕಪ್ ಪಂದ್ಯವನ್ನಾಡಿದರು.
58
4. ಜವಗಲ್ ಶ್ರೀನಾಥ್ (Javagal Srinath)
ಕರ್ನಾಟಕದ ಹೆಮ್ಮೆ ಹಾಗೂ ಭಾರತದ ಮಾಜಿ ವೇಗಿ ಜವಗಲ್ ಶ್ರೀನಾಥ್ ಕೂಡ ಭಾರತದ ಪರ 4 ಏಕದಿನ ವಿಶ್ವಕಪ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. ಶ್ರೀನಾಥ್ ಅವರ ಮೊದಲ ವಿಶ್ವಕಪ್ 1992 ರದ್ದಾಗಿದ್ದರೆ, 2003 ರಲ್ಲಿ ಕೊನೆಯ ವಿಶ್ವಕಪ್ ಆಡಿದ್ದರು.
68
5. ಎಂ.ಎಸ್. ಧೋನಿ (MS Dhoni)
ಭಾರತಕ್ಕೆ 28 ವರ್ಷಗಳ ಬಳಿಕ 2011 ರಲ್ಲಿ ಎರಡನೇ ವಿಶ್ವಕಪ್ ಗೆದ್ದುಕೊಟ್ಟ ಯಶಸ್ವಿ ನಾಯಕ ಎಂ.ಎಸ್. ಧೋನಿ ಕೂಡ 4 ವಿಶ್ವಕಪ್‌ಗಳನ್ನಾಡಿದ್ದಾರೆ. 2007 ರಲ್ಲಿ ತಮ್ಮ ಚೊಚ್ಚಲ ವಿಶ್ವಕಪ್ ಆಡಿದ್ದ ಧೋನಿ, 2019 ರಲ್ಲಿ ಕೊನೆಯ ವಿಶ್ವಕಪ್ ಆಡಿದರು.
78
6. ವಿರಾಟ್ ಕೊಹ್ಲಿ (Virat Kohli)
ಈ ಪಟ್ಟಿಯಲ್ಲಿ ರನ್ ಮಷೀನ್ ವಿರಾಟ್ ಕೊಹ್ಲಿ ಕೂಡ ಇದ್ದಾರೆ. ಸದ್ಯ ಸಕ್ರಿಯ ಆಟಗಾರರಾಗಿರುವ ಕೊಹ್ಲಿ ಈಗಾಗಲೇ 4 ಏಕದಿನ ವಿಶ್ವಕಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. 2011 ರಲ್ಲಿ ಮೊದಲ ವಿಶ್ವಕಪ್ ಆಡಿದ್ದ ಅವರು, ಕಳೆದ 2023 ರಲ್ಲಿ ತಮ್ಮ 4ನೇ ವಿಶ್ವಕಪ್ ಆಡಿದ್ದರು. ಮುಂಬರುವ 5ನೇ ವಿಶ್ವಕಪ್‌ನಲ್ಲೂ ಅವರು ಆಡುವ ನಿರೀಕ್ಷೆಯಿದೆ.
88
7. ರೋಹಿತ್ ಶರ್ಮಾ (Rohit Sharma)
ಭಾರತ ತಂಡದ ಹಿರಿಯ ಆಟಗಾರ ರೋಹಿತ್ ಶರ್ಮಾ ಕೂಡ ಈ ಪಟ್ಟಿಯಲ್ಲಿದ್ದಾರೆ. ಹಿಟ್‌ಮ್ಯಾನ್ ಈಗಾಗಲೇ 3 ಏಕದಿನ ವಿಶ್ವಕಪ್‌ಗಳನ್ನು ಆಡಿದ್ದಾರೆ. ರೋಹಿತ್ ತಮ್ಮ ಮೊದಲ ವಿಶ್ವಕಪ್ ಅನ್ನು 2015 ರಲ್ಲಿ ಮತ್ತು ಕೊನೆಯ ವಿಶ್ವಕಪ್ ಅನ್ನು 2023 ರಲ್ಲಿ ಆಡಿದ್ದರು. ಸದ್ಯ ಸಕ್ರಿಯ ಆಟಗಾರರಾಗಿರುವ ರೋಹಿತ್ ಶರ್ಮಾ ಅವರು ಮುಂದಿನ ದಿನಗಳಲ್ಲಿ ತಮ್ಮ 4ನೇ ವಿಶ್ವಕಪ್ ಆಡುವ ಅವಕಾಶ ಹೊಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.