'ಹೇಗಾದರೂ ಮಾಡಿ ಪಾಕಿಸ್ತಾನ ಎದುರು ಈತನಿಗೆ ಚಾನ್ಸ್ ಕೊಡಿ': ಇರ್ಫಾನ್ ಪಠಾಣ್ ಹೀಗೆ ಹೇಳಿದ್ದು ಯಾರಿಗೆ?

Published : Sep 21, 2025, 05:41 PM IST

ದುಬೈ: ಏಷ್ಯಾಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಈ ಆಟಗಾರನಿಗೆ ಛಾನ್ಸ್ ಕೊಡಿ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಮನವಿ ಮಾಡಿಕೊಂಡಿದ್ದಾರೆ. 

PREV
18
ಇಂದು ಇಂಡೋ-ಪಾಕ್ ಫೈಟ್

ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇಂದು 8 ಗಂಟೆಯಿಂದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಡಲಿವೆ.

28
ಗ್ರೂಪ್ ಹಂತದಲ್ಲಿ ಭಾರತ ಎದುರು ಪಾಕ್‌ಗೆ ಸೋಲು

ಈ ಮೊದಲು ಸೆಪ್ಟೆಂಬರ್ 14ರಂದು ಗ್ರೂಪ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲೇ ಮುಖಾಮುಖಿಯಾಗಿದ್ದವು. ಆಗ ಪಾಕಿಸ್ತಾನವನ್ನು ಭಾರತ ಅನಾಯಾಸವಾಗಿ ಸೋಲಿಸಿತ್ತು.

38
ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ

ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಇಂದು ನಡೆಯಲಿರುವ ಪಂದ್ಯವು ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಆದರೆ ಇಂದಿನ ಪಂದ್ಯದಲ್ಲಿ ಭಾರತ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

48
ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದ ಭಾರತ

ಒಮಾನ್ ಎದುರು ಭಾರತ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಬುಮ್ರಾ, ವರುಣ್ ಚಕ್ರವರ್ತಿಗೆ ವಿಶ್ರಾಂತಿ ನೀಡಿ, ಹರ್ಷಿತ್ ರಾಣಾ ಹಾಗೂ ಅರ್ಶದೀಪ್‌ ಸಿಂಗ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಇಂದು ಬುಮ್ರಾ ಹಾಗೂ ವರುಣ್ ಚಕ್ರವರ್ತಿ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿದೆ.

58
ಇರ್ಫಾನ್ ಪಠಾಣ್ ವಿಶೇಷ ಮನವಿ

ಇನ್ನು ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಪಾಕಿಸ್ತಾನ ಎದುರು ಇಂದು ನಡೆಯಲಿರುವ ಪಂದ್ಯದಲ್ಲಿ ಹೇಗಾದರೂ ಮಾಡಿ ಆಡುವ ಹನ್ನೊಂದರ ಬಳಗದಲ್ಲಿ ಅರ್ಶದೀಪ್ ಸಿಂಗ್‌ಗೆ ಸ್ಥಾನ ನೀಡಿ ಎಂದು ಟೀಮ್ ಮ್ಯಾನೇಜ್‌ಮೆಂಟ್ ಬಳಿ ಮನವಿ ಮಾಡಿಕೊಂಡಿದ್ದಾರೆ.

68
ಅರ್ಶದೀಪ್-ಬುಮ್ರಾ ಒಟ್ಟಿಗೆ ಆಡಬೇಕು

ನಾನು ಏಷ್ಯಾಕಪ್ ಆರಂಭದಿಂದಲೂ ಹೇಳುತ್ತಲೇ ಬಂದಿದ್ದೇನೆ. ಅರ್ಶದೀಪ್ ಸಿಂಗ್ ಅವರನ್ನು ಬುಮ್ರಾ ಜತೆಗೆ ಆಡಿಸಬೇಕು.

78
ಎರಡು ತಜ್ಞ ವೇಗಿಗಳ ಅಗತ್ಯವಿದೆ

ಯಾಕೆಂದರೆ ಕೆಲವೊಮ್ಮೆ ಎರಡು ತಜ್ಞ ವೇಗದ ಬೌಲರ್‌ಗಳು ಬಳಸಬೇಕಾದ ಸಂದರ್ಭ ಬಂದು ಬಿಡುತ್ತದೆ. ಚೆಂಡು ಹಿಡಿತಕ್ಕೆ ಸಿಗದಿದ್ದಾಗ ಹಾರ್ದಿಕ್ ಪಾಂಡ್ಯ ಅಥವಾ ಶಿವಂ ದುಬೆ ಅವರಿಂದ ಓವರ್‌ನಲ್ಲಿ ಆರು ಯಾರ್ಕರ್‌ ಬಾಲ್ ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.

88
100 ವಿಕೆಟ್‌ ಕಬಳಿಸಿದ ವೇಗಿ

ಏಷ್ಯಾಕಪ್ ಟೂರ್ನಿಯಲ್ಲಿ ಓಮಾನ್ ಎದುರು ಕಣಕ್ಕಿಳಿದಿದ್ದ ಅರ್ಶದೀಪ್ ಸಿಂಗ್ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಎನಿಸಿಕೊಂಡಿದ್ದರು.

Read more Photos on
click me!

Recommended Stories