ಈ ಪ್ಲಾಟ್‌ಫಾರಂನಲ್ಲಿ ಫ್ರೀ ಆಗಿ ಭಾರತ-ಪಾಕಿಸ್ತಾನ ಮ್ಯಾಚ್ ನೋಡಿ! ಒಂದು ಕ್ಲಿಕ್‌ನಲ್ಲಿ ಕಂಪ್ಲೀಟ್ ಡೀಟೈಲ್ಸ್‌

Published : Sep 21, 2025, 02:54 PM IST

ಬೆಂಗಳೂರು: ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇದೀಗ ಸೂಪರ್-4 ಪಂದ್ಯಗಳ ಆರಂಭವಾಗಿವೆ. ಇನ್ನು ಇವತ್ತು ಭಾರತ-ಪಾಕಿಸ್ತಾನ ಮ್ಯಾಚ್ ನಡೆಯಲಿದೆ. ಈ ಪಂದ್ಯವನ್ನು ನೀವು ಉಚಿತವಾಗಿ ವೀಕ್ಷಿಸಬಹುದು. ಅದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
16
ಇಂದು ಭಾರತ-ಪಾಕಿಸ್ತಾನ ಫೈಟ್

ಏಷ್ಯಾಕಪ್ ಟೂರ್ನಿಯ ಗ್ರೂಪ್‌ ಸ್ಟೇಜ್‌ನಲ್ಲಿ ಮುಖಾಮುಖಿಯಾಗಿದ್ದ ಭಾರತ ಹಾಗೂ ಪಾಕಿಸ್ತಾನ ತಂಡಗಳು, ಇದೀಗ ಸೂಪರ್-4 ಹಂತದಲ್ಲಿ ಮತ್ತೊಮ್ಮೆ ಸೆಣಸಾಡಲು ಸಜ್ಜಾಗಿವೆ. ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ.

26
ಕಳೆದ ಮುಖಾಮುಖಿಯಲ್ಲಿ ಭಾರತಕ್ಕೆ ಸುಲಭ ಗೆಲುವು

ಮೊದಲ ಮುಖಾಮುಖಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, 7 ವಿಕೆಟ್ ಅಂತರದ ಸುಲಭ ಗೆಲುವು ದಾಖಲಿಸಿತ್ತು. 

36
ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಇದೀಗ ಭಾರತ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದ್ದು, ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ.

46
ನೇರ ಪ್ರಸಾರದ ಮಾಹಿತಿ

ಇವತ್ತು ಸಂಜೆ 8 ಗಂಟೆಯಿಂದ ಆರಂಭವಾಗಲಿರುವ ಈ ಹೈವೋಲ್ಟೇಜ್ ಪಂದ್ಯವನ್ನು ಸೋನಿ ಸ್ಪೋರ್ಟ್ಸ್‌ ಟಿವಿ ಚಾನೆಲ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದಾಗಿದೆ. ಇನ್ನು ಓಟಿಟಿ ಫ್ಲಾಟ್‌ಫಾರಂನಲ್ಲಿ ಸೋನಿ ಲೈವ್ ಹಾಗೂ ಫ್ಯಾನ್ ಕೋಡ್ ಮೂಲಕವೂ ವೀಕ್ಷಿಸಬಹುದಾಗಿದೆ.

56
ಹಣಪಾವತಿಸಿ ನೋಡುವ ಪ್ಲಾಟ್‌ಫಾರಂ

ಸೋನಿ ಸ್ಪೋರ್ಟ್ಸ್‌ ಚಾನೆಲ್ ವೀಕ್ಷಿಸಲು ಹಾಗೂ ಸೋನಿ ಲೈವ್ ಮತ್ತು ಫ್ಯಾನ್‌ ಕೋಡ್ ಮೂಲಕ ಪಂದ್ಯಗಳನ್ನು ವೀಕ್ಷಿಸಲು ಹಣ ಪಾವತಿಸಿ ಸಬ್‌ಸ್ಕ್ರಿಪ್ಷನ್ ಪಡೆಯಬೇಕಾಗುತ್ತದೆ.

66
ಉಚಿತವಾಗಿ ಇಂಡೋ-ಪಾಕ್ ಮ್ಯಾಚ್ ನೋಡಿ

ಇನ್ನು ಡಿಡಿ ಸ್ಪೋರ್ಟ್ಸ್‌ನಲ್ಲಿ ಫ್ರಿ ಆಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಮ್ಯಾಚ್ ವೀಕ್ಷಿಸಬಹುದಾಗಿದೆ. ಇದು ಬಹುತೇಕ ಮಂದಿಗೆ ಗೊತ್ತಿಲ್ಲ. ಡಿಡಿ ಸ್ಪೋರ್ಟ್ಸ್‌ ಒಂದು ಫ್ರೀ ಚಾನೆಲ್ ಆಗಿದೆ.

Read more Photos on
click me!

Recommended Stories