ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ

Published : Dec 16, 2025, 09:57 PM IST

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ, ಹೌದು, ಇದು ಟ್ಯಾಕ್ಸ್ ಕಡಿತ ಮಾಡಿ ನೀಡುವ ಮೊತ್ತವಲ್ಲ, 18 ಕೋಟಿಯಲ್ಲಿ ಮತ್ತೆ ತೆರಿಗೆ ಕಡಿತ, ಇತರ ಕಡಿತಗಳು ಸೇರಿಕೊಳ್ಳಲಿದೆ.

PREV
16
25.20 ಕೋಟಿ ರೂಪಾಯಿ

2026ರ ಐಪಿಎಲ್ ಟೂರ್ನಿಗೆ ಇಂದು ಮಿನಿ ಹರಾಜು ಪ್ರಕ್ರಿಯೆ ನಡೆದಿದೆ. ದುಬೈನಲ್ಲಿ ನಡೆದ ಈ ಹರಾಜಿನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.ಐಪಿಎಲ್ ಹರಾಜು ಇತಿಹಾಸದಲ್ಲೇ ಅತೀ ಗರಿಷ್ಠ ಮೊತ್ತಕ್ಕೆ ಕ್ಯಾಮರೂನ್ ಗ್ರೀನ್ ಹರಾಜಾಗಿದ್ದಾರೆ. ಎಲ್ಲಾ ದಾಖಲೆ ಪುಡಿ ಮಾಡಿರುವ ಕ್ಯಾಮರೂನ್ ಗ್ರೀನ್ ಬರೋಬ್ಬರಿ 25.20 ಕೋಟಿ ರೂಪಾಯಿಗೆ ಕೆಕೆಆರ್ ತಂಡದ ಪಾಲಾಗಿದ್ದಾರೆ.

26
ಕ್ಯಾಮರೂನ್ ಗ್ರೀನ್‌‌ಗೆ 18 ಕೋಟಿ ಮಾತ್ರ

ಆಸ್ಟ್ರೇಲಿಯಾ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಮುಗಿಬಿದ್ದಿತ್ತು. ಕೊನೆಗೆ ಕೆಕೆಆರ್ 25.20 ಕೋಟಿ ರೂಪಾಯಿ ಕೊಟ್ಟು ಕ್ಯಾಮರೂನ್ ಗ್ರೀನ್ ಖರೀದಿಸಿದೆ. ಆದರೆ ಕ್ಯಾಮರೂನ್ ಗ್ರೀನ್‌ಗೆ ಕೆಕೆಆರ್ ಫ್ರಾಂಚೈಸಿ ನೀಡುವುದು 18 ಕೋಟಿ ರೂಪಾಯಿ ಮಾತ್ರ.

36
7.20 ಕೋಟಿ ರೂ ತೆರಿಗೆ ಕಡಿತವಲ್ಲ

ಹಾಗಂತ ಇದು ತೆರಿಗೆ ಕಡಿತದ ಬಳಿಕ ಸಿಗುವ ಮೊತ್ತವಲ್ಲ. 18 ಕೋಟಿಯಲ್ಲಿ ಮತ್ತೆ ತೆರಿಗೆ ಕಡಿತಗೊಳ್ಲಲಿದೆ. ಕೆಕೆಆರ್ 25.20 ಕೋಟಿ ರೂಪಾಯಿ ಕ್ಯಾಮರೂನ್ ಗ್ರೀನ್‌‌ಗಾಗಿ ಖರ್ಚು ಮಾಡಲಿದೆ. ಆದರೆ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ 18 ಕೋಟಿ ಮಾತ್ರ. ಈ 18 ಕೋಟಿ ರೂಪಾಯಿಯಲ್ಲಿ ಮತ್ತೆ ತೆರಿಗೆ ಕಡಿತಗೊಳ್ಳಲಿದೆ.

46
ವಿದೇಶಿ ಆಟಾಗರರ ಮೊತ್ತ ಗರಿಷ್ಠ 18 ಕೋಟಿ ಮಾತ್ರ

ಐಪಿಎಲ್ ಗವರ್ನಿಂಗ್ ಕೌನ್ಸಿಲ್ ನಿಯಮದ ಪ್ರಕಾರ ವಿದೇಶಿ ಆಟಗಾರರ ಗರಿಷ್ಠ ಬಿಡ್ಡಿಂಗ್ ಮೊತ್ತ 18 ಕೋಟಿ ರೂಪಾಯಿ ಮಾತ್ರ. ಹೌದು ಕಳೆದ ವರ್ಷ ಬಿಸಿಸಿಐ ನಿಯಮ ಜಾರಿಗೆ ತಂದಿದೆ. ಅದೆಷ್ಟೇ ಕೋಟಿಗೆ ವಿದೇಶಿ ಆಟಗಾರರನ್ನು ಖರೀದಿಸಿದರೆ ಆಟಗಾರರಿಗೆ ಫ್ರಾಂಚೈಸಿ ಕೊಡುವ ಗರಿಷ್ಠ ಮೊತ್ತ 18 ಕೋಟಿ ರೂಪಾಯಿ ಮಾತ್ರ.

56
ಹಾಗಾದರೆ ಉಳಿದ ಮೊತ್ತದ ಕತೆ ಏನು?

ಐಪಿಎಲ್ ಹರಾಜಿನ ನಿಯಮದ ಪ್ರಕಾರ ವಿದೇಶಿ ಆಟಗಾರರಿಗೆ ಗರಿಷ್ಠ 18 ಕೋಟಿ ರೂಪಾಯಿ ನೀಡಲಾಗುತ್ತದೆ. ಇನ್ನುಳಿದ ಮೊತ್ತವನ್ನು ಫ್ರಾಂಚೈಸಿ ಬಿಸಿಸಿಐ ಪ್ಲೇಯರ್ ವೆಲ್‌ಫೇರ್ ಫಂಡ್‌ಗೆ ನೀಡಬೇಕು. ಅಂದರೆ ಇಲ್ಲಿ ಕ್ಯಾಮರೂನ್ ಗ್ರೀನ್‌‌ ಹರಾಜಿನಲ್ಲಿ 25.20 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಈ ಪೈಕಿ ವಿದೇಶಿ ಆಟಗಾರರ ಗರಿಷ್ಠ ಮೊತ್ತ 18 ಕೋಟಿ ರೂಪಾಯಿ ಕ್ಯಾಮರೂನ್ ಕೈಸೇರಲಿದೆ. ಇನ್ನುಳಿದ 7.20 ಕೋಟಿ ರೂಪಾಯಿ ಬಿಸಿಸಿಐ ಆಟಗಾರರ ಕ್ಷೇಮಾಭಿವೃದ್ಧಿ ಫಂಡ್‌ಗೆ ಜಮೆ ಮಾಡಬೇಕು.

ಹಾಗಾದರೆ ಉಳಿದ ಮೊತ್ತದ ಕತೆ ಏನು?

66
ಗರಿಷ್ಠ ಕ್ಯಾಪ್ 18 ಕೋಟಿ ವಿದೇಶಿ ಆಟಗಾರರಿಗೆ ಮಾತ್ರ

ಈ ನಿಯಮ ಕೇವಲ ವಿದೇಶಿ ಆಟಗಾರರಿಗೆ ಮಾತ್ರ ಅನ್ವಯವಾಗಲಿದೆ. ಗರಿಷ್ಠ ಕ್ಯಾಪ್ 18 ಕೋಟಿ ರೂಪಾಯಿ ದೇಶಿಯ ಆಟಗಾರರಿಗೆ ಅನ್ವಯವಾಗುವುದಿಲ್ಲ. ದೇಶಿ ಆಟಗಾರರು ಎಷ್ಟ ಕೋಟಿಗೆ ಹರಾಜಾಗುತ್ತಾರೋ ಅಷ್ಟು ಮೊತ್ತವನ್ನು ಪಡೆಯಲಿದ್ದಾರೆ. ಎಲ್ಲರಿಗೂ ಅನ್ವಯವಾಗುವ ತೆರಿಗೆ ಅನ್ವಯಾಗಲಿದೆ.

ಗರಿಷ್ಠ ಕ್ಯಾಪ್ 18 ಕೋಟಿ ವಿದೇಶಿ ಆಟಗಾರರಿಗೆ ಮಾತ್ರ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories