IPL Mini-Auction History: List of Most Expensive Players from Cameron Green to Chris Morris ಪ್ರತಿ ವರ್ಷ ನಡೆಯುವ ಐಪಿಎಲ್ ಮಿನಿ ಹರಾಜು, ತಂಡದ ಡೈನಾಮಿಕ್ಸ್‌ಅನ್ನು ದೊಡ್ಡ ಪ್ರಮಾಣದಲ್ಲಿ ಬದಲಾಯಿಸುತ್ತದೆ.
ಅಬುಧಾಬಿಯಲ್ಲಿ ನಡೆಯುತ್ತಿರುವ ಹಾಲಿ ವರ್ಷದ ಐಪಿಎಲ್ ಮಿನಿ ಹರಾಜಿನಲ್ಲಿ ಆಸೀಸ್‌ನ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ 25.20 ಕೋಟಿ ರೂಪಾಯಿ ಮೊತ್ತಕ್ಕೆ ಕೆಕೆಆರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಕೂಡ ದೊಡ್ಡ ಮಟ್ಟದ ಪೈಪೋಟಿ ನಡೆಸಿತು. ಕೊನೆಗೆ ಆಂಡ್ರೆ ರಸೆಲ್ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಆರ್‌ಸಿಬಿ ಮಾಜಿ ಪ್ಲೇಯರ್ ಗ್ರೀನ್‌ರನ್ನು ಆಯ್ದುಕೊಳ್ಳಲು ತಂಡ ಯಶಸ್ವಿಯಾಗಿದೆ.
27
ಮಿಚೆಲ್ ಸ್ಟಾರ್ಕ್-24.75 ಕೋಟಿ (ಕೆಕೆಆರ್, 2024)
ಇನ್ನಿಂಗ್ಸ್‌ನ ಯಾವುದೇ ಹಂತದಲ್ಲಿ ಕರಾರುವಾಕ್ ಯಾರ್ಕರ್‌ಗಳನ್ನು ಎಸೆಯಬಲ್ಲ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್‌ರನ್ನು ಕಳೆದ ವರ್ಷದ ಮಿನಿ ಹರಾಜಿನಲ್ಲಿ ಕೆಕೆಆರ್ ದಾಖಲೆಯ 24.75 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಕಳೆದ ವರ್ಷಕ್ಕೂ ಮುನ್ನ ಅವರು ಕೊನೇ ಬಾರಿ ಐಪಿಎಲ್ ಆಡಿದ್ದು 2015ರಲ್ಲಿ. ಅಂದು ಅವರು ಆರ್‌ಸಿಬಿ ತಂಡದ ಭಾಗವಾಗಿದ್ದರು.
37
ಪ್ಯಾಟ್ ಕಮ್ಮಿನ್ಸ್-20.50 ಕೋಟಿ (ಸನ್‌ರೈಸರ್ಸ್, 2024)
ಕಳೆದ ವರ್ಷದ ಐಪಿಎಲ್ ಮಿನಿ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 20.50 ಕೋಟಿ ರೂಪಾಯಿಗೆ ಆಸೀಸ್ ಆಲ್ರೌಂಡರ್ ಪ್ಯಾಟ್ ಕಮ್ಮಿನ್ಸ್‌ರನ್ನು ಖರೀದಿಸಿತು. ಐಪಿಎಲ್ ಹರಾಜಿನಲ್ಲಿ 20 ಕೋಟಿಯ ಮಾರ್ಕ್ ದಾಟಿದ ಮೊದಲ ಆಟಗಾರ ಎನ್ನುವ ಇತಿಹಾಸ ಇವರದಾಗಿದೆ. ಸನ್‌ರೈಸರ್ಸ್ ಅಲ್ಲದೆ, ಮುಂಬೈ, ಚೆನ್ನೈ, ಆರ್‌ಸಿಬಿ ಕೂಡ ಇವರಿಗೆ ಬಿಡ್ ಮಾಡಿತ್ತು.
ಸ್ಯಾಮ್ ಕರ್ರನ್-18.50 ಕೋಟಿ (ಪಂಜಾಬ್ ಕಿಂಗ್ಸ್, 2023)
ಇಂಗ್ಲೆಂಡ್‌ನ ಎಡಗೈ ವೇಗದ ಬೌಲರ್ ಹಾಗೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಸ್ಯಾಮ್ ಕರ್ರನ್‌ಗೆ 2023ರ ಐಪಿಎಲ್ ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 18.50 ಕೋಟಿ ಖರ್ಚು ಮಾಡಿತು. ಆಗಷ್ಟೇ ಮುಗಿಸಿದ್ದ 2022ರ ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಆಟಗಾರ ಎನಿಸಿದ್ದರು.
57
ಕ್ಯಾಮರೂನ್ ಗ್ರೀನ್-17.50 ಕೋಟಿ (ಮುಂಬೈ, 2023)
ಹಾಲಿ ವರ್ಷದ ಐಪಿಎಲ್‌ನಲ್ಲಿ ದುಬಾರಿ ಮೊತ್ತಕ್ಕೆ ಮಾರಟವಾಗಿರುವ ಕ್ಯಾಮರೂನ್ ಗ್ರೀನ್ ಇದಕ್ಕೂ ಮುನ್ನ 2025ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 17.50 ಕೋಟಿ ರೂಪಾಯಿ ಮೊತ್ತಕ್ಕೆ ಮಾರಾಟವಾಗಿ ದಾಖಲೆ ಮಾಡಿದ್ದರು. 2022ರ ಐಪಿಎಲ್‌ಗೂ ಮುನ್ನ ಹಾರ್ದಿಕ್ ಪಾಂಡ್ಯರನ್ನು ಮುಂಬೈ ತಂಡ ರಿಲೀಸ್ ಮಾಡಿದ್ದ ಕಾರಣಕ್ಕೆ ಗ್ರೀನ್‌ಗೆ ಮುಂಬೈ ದೊಡ್ಡ ಮೊತ್ತಕ್ಕೆ ಬಿಡ್‌ಮಾಡಿತು.
67
ಬೆನ್ ಸ್ಟೋಕ್ಸ್-16.25 ಕೋಟಿ (ಸಿಎಸ್‌ಕೆ, 2023)
ಇಂಗ್ಲೆಂಡ್‌ನ ಆಲ್ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ 2023ರ ಐಪಿಎಲ್ ಮಿನಿ ಹರಾಜಿನಲ್ಲಿ 16.25 ಕೋಟಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ್ದರು. ಆರ್‌ಸಿಬಿ, ಆರ್‌ಆರ್, ಎಲ್‌ಎಸ್‌ಜಿ ಹಾಗೂ ಸನ್‌ರೈಸರ್ಸ್ ಬಿಡ್ಡಿಂಗ್ ವಾರ್ ಆರಂಭ ಮಾಡಿದ್ದರು. ಕೊನೆಗೆ ಬಂದ ಸಿಎಸ್‌ಕೆ, ಬೆನ್ ಸ್ಟೋಕ್ಸ್‌ರನ್ನು ಖರೀದಿಸುವಲ್ಲಿ ಯಶ ಕಂಡಿತು.
77
ಕ್ರಿಸ್ ಮೊರಿಸ್-16.25 ಕೋಟಿ (ಆರ್‌ಆರ್, 2021)
ನಿರಂತರವಾಗಿ ಗಂಟೆಗೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಹಾಗೂ ಕೆಳ ಕ್ರಮಾಂಕದಲ್ಲಿ ರನ್ ಬಾರಿಸುವ ಪ್ಲೇಯರ್ ಕ್ರಿಸ್ ಮೊರಿಸ್. ದಕ್ಷಿಣ ಆಫ್ರಿಕಾದ ಆಲ್ರೌಂಡರ್‌ಅನ್ನು ಆರ್‌ಸಿಬಿ ರಿಲೀಸ್ ಮಾಡಿತ್ತು. 2021ರ ಹರಾಜಿನಲ್ಲಿ ಕ್ರಿಸ್ ಮೊರಿಸ್ 16.25 ಕೋಟಿ ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿದರು. ಸೀಸನ್‌ನಲ್ಲಿಯೇ ಅವರು 11 ಪಂದ್ಯಗಳಿಂದ 15 ವಿಕೆಟ್ ಉರುಳಿಸಿದ್ದರು. ಆದರೆ, ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರು.