ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ಪ್ರತಿ ಸದಸ್ಯರಿಗೆ ಸಿಯೆರಾ ಕಾರು ಗಿಫ್ಟ್ ಕೊಟ್ಟ ಟಾಟಾ

Published : Dec 16, 2025, 07:51 PM IST

ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ಪ್ರತಿ ಸದಸ್ಯರಿಗೆ ಸಿಯೆರಾ ಕಾರು ಗಿಫ್ಟ್ ಕೊಟ್ಟ ಟಾಟಾ, ಮಹಿಳಾ ತಂಡದ ಐತಿಹಾಸಿಕ ಸಾಧನೆಗೆ ಟಾಟಾ ಈ ಉಡೊಗೊರೆ ಘೋಷಿಸಿತ್ತು. ಇದೀಗ 21.29 ಲಕ್ಷ ರೂಪಾಯಿ ಬೆಲೆಯ ಟಾಟಾ ಸಿಯೆರಾ ಕಾರು ಗಿಫ್ಟ್ ಕೊಟ್ಟಿದೆ.

PREV
15
ಮಹಿಳಾ ತಂಡಕ್ಕೆ ಟಾಟಾ ಸಿಯೆರಾ ಉಡುಗೊರೆ

ಭಾರತ ಮಹಿಳಾ ತಂಡ ಇತ್ತೀಚೆಗೆ ಐಸಿಸಿ ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ಟೀಂ ಇಂಡಿಯಾ ಮಹಿಳಾ ತಂಡದ ಸಾಧನೆಯನ್ನು ದೇಶವೇ ಕೊಂಡಾಡಿದೆ. ಬಿಸಿಸಿಐ ವಿಶೇಷ ಬಹುಮಾನ ಮೊತ್ತ ಘೋಷಿಸಿದರೆ, ಹಲವು ರಾಜ್ಯಗಳು ಬಹುಮಾನ ಘೋಷಿಸಿದೆ. ಇದೀಗ ಟಾಟಾ ಸಂಸ್ಥೆ ಭಾರತ ಮಹಿಳಾ ತಂಡದ ಸದಸ್ಯರಿಗೆ ಹೊಚ್ಚ ಹೊಸ ಟಾಟಾ ಸಿಯೆರಾ ಕಾರು ಉಡುಗೊರೆಯಾಗಿ ನೀಡಿದೆ.

25
ಪ್ರತಿ ಸದಸ್ಯರಿಗೆ ಕಾರು

ಮಹಿಳಾ ತಂಡ ವಿಶ್ವಕಪ್ ಗೆಲ್ಲುತ್ತಿದ್ದಂತೆ, ಟಾಟಾ ಗ್ರೂಪ್ ತಂಡದ ಪ್ರತಿ ಸದಸ್ಯರಿಗೆ ಹೊಚ್ಚ ಹೊಸ ಟಾಟಾ ಸಿಯೆರಾ ಕಾರು ಉಡುಗೊರೆಯಾಗಿ ಘೋಷಿಸಿತ್ತು. ಇದೀಗ ಮಹಿಳಾ ತಂಡದ ಸದಸ್ಯರಿಗೆ ಗೌರವದ ಜೊತೆಗೆ ಅವರ ಇಷ್ಟದ ಬಣ್ಣದ ಟಾಟಾ ಸಿಯೆರಾ ಕಾರು ಉಡುಗೊರೆಯಾಗಿ ನೀಡಿದೆ.

35
ಎಲ್ಲರಿಗೂ ಟಾಪ್ ಮಾಡೆಲ್ ಸಿಯೆರಾ

ಟಾಟಾ ಸಂಸ್ಥೆಯ ಮತ್ತೊಂದು ವಿಶೇಷ ಅಂದರೆ ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ಪ್ರತಿಯೊಬ್ಬ ಸದಸ್ಯರಿಗೆ ಟಾಪ್ ಎಂಡ್ ಮಾಡೆಲ್ ಸಿಯೆರಾ ಕಾರು ಉಡುಗೊರೆಯಾಗಿ ನೀಡುತ್ತಿದೆ. ಇದರ ಎಕ್ಸ್ ಶೋ ರೂಂ ಬೆಲೆ 21.29 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಆನ್ ರೋಡ್ ಬೆಲೆ ಸರಿಸುಮಾರು 25 ಲಕ್ಷ ರೂಪಾಯಿ.

45
ಮಹಿಳಾ ತಂಡದ ಜೊತೆ ಟಾಟಾ ಚೇರ್ಮೆನ್ ಫೋಟೋ

ಭಾರತ ಮಹಿಳಾ ತಂಡಕ್ಕೆ ಕಾರು ಉಡುಗೊರೆಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಹಿಳಾ ತಂಡ, ಟಾಟಾ ಸಿಯೆರಾ ಕಾರಿನ ಜೊತೆ ಟಾಟಾ ಸನ್ಸ್ ಹಾಗೂ ಟಾಟಾ ಮೋಟಾರ್ಸ್ ಚೇರ್ಮನ್ ಎನ್ ಚಂದ್ರಶೇಖರನ್ ಫೋಟೋಗೆ ಫೋಸ್ ನೀಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಶೈಲೇಜ್‌ಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಹಿಳಾ ತಂಡದ ಜೊತೆ ಟಾಟಾ ಚೇರ್ಮೆನ್ ಫೋಟೋ

55
ಸೌತ್ ಆಫ್ರಿಕಾ ಮಣಿಸಿ ಟ್ರೋಫಿ ಗೆದ್ದ ಭಾರತ

ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ದ ಹೋರಾಟ ನೀಡಿತ್ತು. ನವೆಂಬರ್ 2ರಂದು ನಡೆದ ಪಂದ್ಯದಲ್ಲಿ ಶೆಫಾಲಿ ವರ್ಮಾ 87 ರನ್ ಸಿಡಿಸಿ ಅಬ್ಬರಿಸಿದರು. ಈ ಪಂದ್ಯದಲ್ಲಿ 52 ರನ್ ಅಂತರದ ಗೆಲುವು ದಾಖಲಿಸಿತು. ಇದೇ ಮೊದಲ ಬಾರಿಗೆ ಮಹಿಳಾ ತಂಡ ಟ್ರೋಫಿ ಸಂಭ್ರಮ ಆಚರಿಸಿತ್ತು.

ಸೌತ್ ಆಫ್ರಿಕಾ ಮಣಿಸಿ ಟ್ರೋಫಿ ಗೆದ್ದ ಭಾರತ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories