ಈ ಒಬ್ಬ ಆಟಗಾರನ ಮೇಲೆ ಮೂರು ಫ್ರಾಂಚೈಸಿಗಳ ಕಣ್ಣು! ಯಾರಾ ಪಾಲಾಗ್ತಾರೆ ವಿಕೆಟ್ ಕೀಪರ್ ಬ್ಯಾಟರ್

Published : Oct 28, 2025, 02:44 PM IST

ಐಪಿಎಲ್ 2026ರ ಮಿನಿ ಹರಾಜು ಸದ್ಯದಲ್ಲೇ ನಡೆಯಲಿದೆ. ಸನ್‌ರೈಸರ್ಸ್ ಹೈದರಾಬಾದ್, ಇಶಾನ್ ಕಿಶನ್‌ರನ್ನು ಬಿಟ್ಟುಕೊಟ್ಟು, ರಾಜಸ್ಥಾನ ರಾಯಲ್ಸ್‌ನಿಂದ ಸಂಜು ಸ್ಯಾಮ್ಸನ್‌ರನ್ನು ಟ್ರೇಡ್ ವಿಂಡೋ ಮೂಲಕ ತೆಗೆದುಕೊಳ್ಳುವ ಯೋಚನೆಯಲ್ಲಿದೆ ಎಂದು ವರದಿಯಾಗಿದೆ.

PREV
15
ಐಪಿಎಲ್ 2026 ಮಿನಿ ಹರಾಜು

ಐಪಿಎಲ್ 2026ರ ಮಿನಿ ಹರಾಜು ಡಿಸೆಂಬರ್ 15ರೊಳಗೆ ನಡೆಯಲಿದೆ. ನವೆಂಬರ್ 15ರೊಳಗೆ ಫ್ರಾಂಚೈಸಿಗಳು ರಿಟೇನ್ ಮತ್ತು ರಿಲೀಸ್ ಪಟ್ಟಿಯನ್ನು ಸಲ್ಲಿಸಬೇಕು. ಈ ನಡುವೆ ಟ್ರೇಡ್ ವಿಂಡೋ ಆಕ್ಟಿವ್ ಆಗಿರುತ್ತೆ. ಈ ಟ್ರೇಡ್ ವಿಂಡೋದಲ್ಲಿ ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದು. ಆರೆಂಜ್ ಆರ್ಮಿ 11.25 ಕೋಟಿಗೆ ಖರೀದಿಸಿದ ಇಶಾನ್ ಕಿಶನ್‌ರನ್ನು ಟ್ರೇಡ್ ಮಾಡಲು ಯೋಚಿಸುತ್ತಿದೆ ಎನ್ನಲಾಗಿದೆ.

25
ಇಶಾನ್ ಕಿಶನ್ ಖರೀದಿಸಲು ಕಣ್ಣಿಟ್ಟ ಮೂರು ಫ್ರಾಂಚೈಸಿಗಳು

ನಿರೀಕ್ಷೆ ತಲುಪದ ಇಶಾನ್ ಕಿಶನ್‌ರನ್ನು ಟ್ರೇಡ್ ಮಾಡಿ, ಪರ್ಸ್ ಸ್ವಲ್ಪ ತುಂಬಿಸಿಕೊಳ್ಳಲು ಸನ್‌ರೈಸರ್ಸ್‌ ಪ್ಲಾನ್ ಮಾಡಿದೆ. ಮೂರು ತಂಡಗಳು ಟ್ರೇಡ್ ವಿಂಡೋ ಮೂಲಕ ಇಶಾನ್ ಕಿಶನ್‌ರನ್ನು ಖರೀದಿಸಲು ಆಸಕ್ತಿ ತೋರಿವೆ. ಇದರಲ್ಲಿ ಅವರ ಮಾಜಿ ತಂಡ ಮುಂಬೈ ಇಂಡಿಯನ್ಸ್ ಕೂಡ ಇದೆ ಎನ್ನುವುದು ವಿಶೇಷ.

35
ಇನ್ನೂ ತೀರ್ಮಾನ ಅಂತಿಮವಾಗಿಲ್ಲ

ಈ ಬಗ್ಗೆ ಸನ್‌ರೈಸರ್ಸ್‌ ಹೈದರಾಬಾದ್ ಮ್ಯಾನೇಜ್ಮೆಂಟ್ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದ್ರೆ ಇಶಾನ್ ಕಿಶನ್‌ರನ್ನು ಬಿಟ್ಟುಕೊಡುವ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ರಾಜಸ್ಥಾನ ರಾಯಲ್ಸ್‌ನಿಂದ ರಿಲೀಸ್ ಆಗಲಿರುವ ಸಂಜು ಸ್ಯಾಮ್ಸನ್‌ ಮೇಲೆ SRH ಕಣ್ಣಿಟ್ಟಿದೆ ಎನ್ನಲಾಗಿದೆ.

45
ಸಂಜು ಖರೀದಿಸುತ್ತಾ ಆರೆಂಜ್ ಆರ್ಮಿ?

ರಾಜಸ್ಥಾನ ರಾಯಲ್ಸ್ ರಿಲೀಸ್ ಮಾಡಲಿರುವ ಸಂಜು ಸ್ಯಾಮ್ಸನ್‌ ಮೇಲೆ ಸನ್‌ರೈಸರ್ಸ್‌ ಹೈದರಾಬಾದ್ ಕಣ್ಣಿಟ್ಟಿದೆ. ಸಂಜು ರಿಲೀಸ್ ಆದರೆ, ವಿಕೆಟ್ ಕೀಪರ್ ಮತ್ತು ಮಿಡಲ್ ಆರ್ಡರ್ ಬ್ಯಾಟರ್ ಆಗಿ ಬಳಸಿಕೊಳ್ಳಲು ಆರೆಂಜ್ ಆರ್ಮಿ ನೋಡುತ್ತಿದೆ. ಸಂಜು ಉತ್ತಮ ಬ್ಯಾಟರ್, ಬಿಗ್ ಹಿಟ್ಟರ್ ಮತ್ತು ನಾಯಕತ್ವವನ್ನೂ ನಿಭಾಯಿಸಬಲ್ಲರು.

55
ಸಂಜು ಹರಾಜಿಗೆ ಬಂದ್ರೆ ಖರೀದಿಸಲು ಸನ್‌ರೈಸರ್ಸ್ ರೆಡಿ

ಸಂಜು ಸ್ಯಾಮ್ಸನ್ ಟ್ರೇಡ್‌ಗೆ ಲಭ್ಯವಿದ್ದರೆ, ಯಾವುದೇ ಮೊತ್ತಕ್ಕೆ ಅವರನ್ನು ಖರೀದಿಸಲು SRH ಸಿದ್ಧವಿದೆ. ಈ ಟ್ರೇಡ್ ನಡೆದರೆ, ಐಪಿಎಲ್‌ನಲ್ಲಿ ದೊಡ್ಡ ಸರ್‌ಪ್ರೈಸ್ ಆಗಲಿದೆ. ಟ್ರಾವಿಸ್ ಹೆಡ್, ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮಾ ರಿಟೇನ್ ಲಿಸ್ಟ್‌ನಲ್ಲಿದ್ದಾರೆ.

Read more Photos on
click me!

Recommended Stories