ರಹಾನೆ ಬಳಿಕ ಅಜಿತ್ ಅಗರ್ಕರ್ ಮೇಲೆ ಮುಗಿಬಿದ್ದ ಕನ್ನಡಿಗ! ಆಯ್ಕೆ ಸಮಿತಿ ಮಾಡಿದ್ದು ನ್ಯಾಯನಾ?

Published : Oct 28, 2025, 01:36 PM IST

ಭಾರತ ಟೆಸ್ಟ್ ತಂಡದಿಂದ ಕೈಬಿಟ್ಟಿರುವುದಕ್ಕೆ ಅಜಿಂಕ್ಯ ರಹಾನೆ ಬಿಸಿಸಿಐ ಆಯ್ಕೆ ಸಮಿತಿ ಮೇಲೆ ಅಸಮಾಧಾನ ಹೊರಹಾಕಿದ್ದರು. ಇದೀಗ ಕನ್ನಡಿಗ ಕರುಣ್ ನಾಯರ್ ಕೂಡಾ ಅಜಿತ್ ಅಗರ್ಕರ್ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

PREV
15
ನಾನು ಅದಕ್ಕೆ ಅರ್ಹ: ಕರುಣ್ ನಾಯರ್

ಟೀಂ ಇಂಡಿಯಾ ಆಯ್ಕೆ ಸಮಿತಿಯ ನಿರ್ಧಾರಗಳ ಬಗ್ಗೆ ಕರುಣ್ ನಾಯರ್ ಮತ್ತು ಅಜಿಂಕ್ಯ ರಹಾನೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಯಾಕೆ ಆಯ್ಕೆ ಮಾಡುತ್ತಿಲ್ಲ ಎಂಬ ಚರ್ಚೆ ಜೋರಾಗಿದೆ.

25
ಆಸ್ಟ್ರೇಲಿಯಾದಲ್ಲಿ ನನ್ನ ಅವಶ್ಯಕತೆ ಇತ್ತು

'ನನ್ನ ಅನುಭವ ಆಸ್ಟ್ರೇಲಿಯಾದಲ್ಲಿ ಭಾರತ ತಂಡಕ್ಕೆ ಬೇಕಿತ್ತು. ವಯಸ್ಸು ಕೇವಲ ಒಂದು ಸಂಖ್ಯೆ, ಬದ್ಧತೆ ಮತ್ತು ಉತ್ಸಾಹ ಮುಖ್ಯ' ಎಂದು ರಹಾನೆ ಹೇಳಿದ್ದಾರೆ. ರಣಜಿಯಲ್ಲಿ 159 ರನ್ ಗಳಿಸಿದ ನಂತರ ಅವರು ಈ ಮಾತುಗಳನ್ನಾಡಿದ್ದಾರೆ.

35
ಸಂವಹನದ ಕೊರತೆಯ ಬಗ್ಗೆ ರಹಾನೆ ಅಸಮಾಧಾನ

'ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿದರೂ ಆಯ್ಕೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇಷ್ಟು ಕ್ರಿಕೆಟ್ ಆಡಿದ ನಂತರ ಈ ಪರಿಸ್ಥಿತಿ ಎದುರಾಗಿರುವುದು ಬೇಸರದ ಸಂಗತಿ' ಎಂದು ರಹಾನೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

45
ಆಯ್ಕೆ ಸಮಿತಿ ವಿರುದ್ಧ ನಾಯರ್ ತೀವ್ರ ವಾಗ್ದಾಳಿ

'ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗದಿರುವುದು ನಿರಾಸೆ ತಂದಿದೆ. ನಾನು ರನ್ ಗಳಿಸುವುದನ್ನು ಮುಂದುವರಿಸುತ್ತೇನೆ. ದೇಶಕ್ಕಾಗಿ ಮತ್ತೆ ಟೆಸ್ಟ್ ಆಡುವುದೇ ನನ್ನ ಗುರಿ' ಎಂದು ಕರುಣ್ ನಾಯರ್ ಹೇಳಿದ್ದಾರೆ.

55
ಆಯ್ಕೆಗಾರರ ನಿರ್ಧಾರಗಳ ಬಗ್ಗೆ ಇಬ್ಬರ ಪ್ರಶ್ನೆ

ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಹಾನೆ ಮತ್ತು ಕರುಣ್ ನಾಯರ್, ಯುವ ಆಟಗಾರರಿಗೆ ಅವಕಾಶ ನೀಡುತ್ತಿರುವ ಆಯ್ಕೆ ಸಮಿತಿಯ ನಿರ್ಧಾರಗಳನ್ನು ಪ್ರಶ್ನಿಸಿದ್ದಾರೆ. ವಯಸ್ಸಲ್ಲ, ಅನುಭವ ಮುಖ್ಯ ಎಂದಿದ್ದಾರೆ.

Read more Photos on
click me!

Recommended Stories