ನವಿ ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ಇದೀಗ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಸೆಮೀಸ್‌ಗೂ ಮುನ್ನ ಆರಂಭಿಕ ಬ್ಯಾಟರ್ ಪ್ರತಿಕಾ ರಾವಲ್ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಮತ್ತೋರ್ವ ಡೇಂಜರಸ್ ಆಟಗಾರ್ತಿ ತಂಡ ಕೂಡಿಕೊಂಡಿದ್ದಾರೆ.
ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಭಾನುವಾರ ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಮೊಣಕಾಲು ಮತ್ತು ಪಾದದ ಗಾಯಕ್ಕೆ ತುತ್ತಾಗಿದ್ದ ಭಾರತದ ತಾರಾ ಆಟಗಾರ್ತಿ ಪ್ರತೀಕಾ ರಾವಲ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.
29
ಸೆಮಿಫೈನಲ್‌ಗೂ ಮೊದಲು ಭಾರತಕ್ಕೆ ಹಿನ್ನಡೆ
ಟೂರ್ನಿ ಯಲ್ಲಿ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಪ್ರತೀಕಾ ತಂಡದಿಂದ ಹೊರಬಿದ್ದಿರುವುದರಿಂದ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ಗೂ ಮುನ್ನ ಭಾರತಕ್ಕೆ ಹಿನ್ನಡೆಯಾಗಿದೆ.
39
ಭರ್ಜರಿ ಫಾರ್ಮ್‌ನಲ್ಲಿದ್ದ ಪ್ರತಿಕಾ ರಾವಲ್
ಈ ಬಾರಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪ್ರತಿಕಾ ರಾವಲ್ ಒಂದು ಶತಕ ಹಾಗೂ ಒಂದು ಅರ್ಧಶತಕ ಸಹಿತ 51.33ರ ಬ್ಯಾಟಿಂಗ್ ಸರಾಸರಿಯಲ್ಲಿ 308 ರನ್ ಸಿಡಿಸಿದ್ದಾರೆ.
ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಪ್ರತಿಕಾಗೆ ಎರಡನೇ ಸ್ಥಾನ
ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು 365 ರನ್ ಸಿಡಿಸಿರುವ ಸ್ಮೃತಿ ಮಂಧನಾ ಮೊದಲ ಸ್ಥಾನದಲ್ಲಿದ್ದಾರೆ.
59
ಸ್ಮೃತಿ ಜತೆ ಶಫಾಲಿ ಓಪನ್ನರ್?
ಪ್ರತಿಕಾ ರಾವಲ್ ಸ್ಥಾನಕ್ಕೆ ಬದಲಿ ಆಟಗಾರ್ತಿ ಯಾಗಿ ಶಫಾಲಿ ವರ್ಮಾ ತಂಡವನ್ನು ಕೂಡಿಕೊಂಡಿದ್ದು, ಮಂಧನಾ ಜೊತೆ ಆರಂಭಿಕರಾಗಿ ಆಡುವ ನಿರೀಕ್ಷೆಯಿದೆ.
69
ಕೊನೆಯ ಕ್ಷಣದಲ್ಲಿ ತಂಡ ಕೂಡಿಕೊಂಡ ಶಫಾಲಿ
ಶಫಾಲಿ ವರ್ಮಾ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ ಸಂಭಾವ್ಯ ತಂಡದಲ್ಲೂ ಸ್ಥಾನ ಪಡೆದಿರಲಿಲ್ಲ. ಆದರೆ 21 ವರ್ಷದ ಸ್ಪೋಟಕ ಬ್ಯಾಟರ್ ಇದೀಗ ಕೊನೆಯ ಕ್ಷಣದಲ್ಲಿ ತಂಡ ಕೂಡಿಕೊಂಡಿದ್ದಾರೆ.
79
ದೊಡ್ಡ ಇನ್ನಿಂಗ್ಸ್ ಆಡುವ ಸಾಮರ್ಥ್ಯವಿರುವ ಆಟಗಾರ್ತಿ
ಶಫಾಲಿ ವರ್ಮಾ ಅಸ್ಥಿರ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದರೂ, ಯಾವುದೇ ಕ್ಷಣದಲ್ಲಿ ಬೇಕಿದ್ದರೂ ವಿಸ್ಪೋಟಕ ಇನ್ನಿಂಗ್ಸ್ ಆಡುವ ಸಾಮಾರ್ಥ್ಯ ಹೊಂದಿದ್ದಾರೆ.
89
ದೇಶಿ ಕ್ರಿಕೆಟ್‌ನಲ್ಲಿ ಅಬ್ಬರಿಸಿರುವ ಶಫಾಲಿ
ಶಫಾಲಿ ಇತ್ತೀಚೆಗಷ್ಟೇ ದೇಶಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಹರ್ಯಾಣ ಪರ ಕೇವಲ 115 ಎಸೆತಗಳಲ್ಲಿ 197 ರನ್‌ಗಳ ಸ್ಪೋಟಕ ಇನ್ನಿಂಗ್ಸ್ ಆಡಿದ್ದರು.
99
ಭಾರತ ಪರ ಇನ್ನಿಂಗ್ಸ್ ಆರಂಭಿಸ್ತಾರಾ ಶಫಾಲಿ
ಬಲಿಷ್ಠ ಆಸ್ಟ್ರೇಲಿಯಾ ಎದುರು ದಿಟ್ಟ ಹೋರಾಟ ಸಂಘಟಿಸಬೇಕಿದ್ದರೇ ಶಫಾಲಿ ವರ್ಮಾ ಇನ್ನಿಂಗ್ಸ್ ಅರಂಭಿಸಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ. ಶಫಾಲಿ ನೇರವಾಗಿ ಸೆಮೀಸ್‌ನಲ್ಲಿ ಭಾರತ ಪರ ಇನ್ನಿಂಗ್ಸ್ ಆರಂಭಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.