1. ವಿರಾಟ್ ಕೊಹ್ಲಿ:
ಆರ್‌ಸಿಬಿ ತಂಡದ ಆರಂಭಿಕ ಬ್ಯಾಟರ್ ಹಾಗೂ ಆರೆಂಜ್ ಕ್ಯಾಪ್ ವಿಜೇತ ವಿರಾಟ್ ಕೊಹ್ಲಿಗೆ ಆರಂಭಿಕನಾಗಿ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಕೊಹ್ಲಿ 15 ಪಂದ್ಯಗಳನ್ನಾಡಿ 741 ರನ್ ಸಿಡಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು.
2. ಸುನಿಲ್ ನರೈನ್:
ಕೆಕೆಆರ್ ತಂಡವು ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸುನಿಲ್ ನರೈನ್‌ಗೂ ತಂಡದಲ್ಲಿ ಹರ್ಷಾ ಸ್ಥಾನ ನೀಡಿದ್ದಾರೆ. ನರೈನ್ ಬ್ಯಾಟಿಂಗ್‌ನಲ್ಲಿ 488 ರನ್ ಹಾಗೂ ಬೌಲಿಂಗ್‌ನಲ್ಲಿ 17 ವಿಕೆಟ್ ಕಬಳಿಸಿ ಮಿಂಚಿದ್ದರು.
3. ಸಂಜು ಸ್ಯಾಮ್ಸನ್:
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಸಂಜು 573 ರನ್ ಸಿಡಿಸಿದ್ದರು.
4. ರಿಯಾನ್ ಪರಾಗ್:
ರಾಜಸ್ಥಾನ ರಾಯಲ್ಸ್ ಪ್ಲೇ ಆಫ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಿಯಾನ್ ಪರಾಗ್, ತಂಡದ ನಂಬಿಗಸ್ಥ ಬ್ಯಾಟರ್ ಎನಿಸಿಕೊಂಡಿದ್ದರು. ಪರಾಗ್ 531 ರನ್ ಸಿಡಿಸಿ ಮಿಂಚಿದ್ದರು.
5. ನಿಕೋಲಸ್ ಪೂರನ್:
ಲಖನೌ ಸೂಪರ್ ಜೈಂಟ್ಸ್ ತಂಡದ ವಿಸ್ಪೋಟಕ ಮಧ್ಯಮ ಕ್ರಮಾಂಕದ ಬ್ಯಾಟರ್ ಪೂರನ್ ಕೂಡಾ ಸ್ಥಾನ ಪಡೆದಿದ್ದಾರೆ. ನಿಕೋಲಸ್ ಪೂರನ್ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 178.21ರ ಸ್ಟ್ರೈಕ್‌ರೇಟ್‌ನಲ್ಲಿ 499 ರನ್ ಸಿಡಿಸಿದ್ದರು.
6. ಆಂಡ್ರೆ ರಸೆಲ್:
ಕೆಕೆಆರ್ ತಂಡದ ಮತ್ತೋರ್ವ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್‌ಗೂ ಹರ್ಷಾ ತಮ್ಮ ಬಲಿಷ್ಠ ಐಪಿಎಲ್ ತಂಡದಲ್ಲಿ ಸ್ಥಾನ ನೀಡಿದ್ದಾರೆ. ರಸೆಲ್ 19 ವಿಕೆಟ್ ಕಬಳಿಸಿದ್ದಲ್ಲದೇ ಉಪಯುಕ್ತ ಸಂದರ್ಭದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕವೂ ಮಿಂಚಿದ್ದರು.
7. ದಿನೇಶ್ ಕಾರ್ತಿಕ್:
ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿರುವ ದಿನೇಶ್ ಕಾರ್ತಿಕ್, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಡಿಕೆ ವಿಕೆಟ್ ಕೀಪಿಂಗ್‌ನಲ್ಲೂ ತಮ್ಮ ಕೈಚಳಕ ತೋರಿದ್ದರು.
8. ಜಸ್ಪ್ರೀತ್ ಬುಮ್ರಾ:
ಮುಂಬೈ ಇಂಡಿಯನ್ಸ್ ತಂಡದ ಮಾರಕ ವೇಗಿ ಬುಮ್ರಾ ಕೇವಲ 13 ಪಂದ್ಯಗಳನ್ನಾಡಿ 20 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹರ್ಷ ಬೋಗ್ಲೆ ತಮ್ಮ ಬಲಿಷ್ಠ ಐಪಿಎಲ್ ತಂಡದಲ್ಲಿ ಬುಮ್ರಾಗೆ ಸ್ಥಾನ ನೀಡಿದ್ದಾರೆ.
9. ವರುಣ್ ಚಕ್ರವರ್ತಿ:
ಕೆಕೆಆರ್ ತಂಡದ ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 21 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು.
10. ಟ್ರೆಂಟ್ ಬೌಲ್ಟ್:
ರಾಜಸ್ಥಾನ ರಾಯಲ್ಸ್ ತಂಡದ ಮಾರಕ ಎಡಗೈ ವೇಗಿ ಟ್ರೆಂಟ್ ಬೌಲ್ಟ್ 16 ವಿಕೆಟ್ ಕಬಳಿಸಿ ಮಿಂಚಿದ್ದರು. ಪವರ್ ಪ್ಲೇನಲ್ಲೇ ಎದುರಾಳಿ ಬ್ಯಾಟರ್‌ಗಳನ್ನು ಕಾಡುವಲ್ಲಿ ಬೌಲ್ಟ್ ಯಶಸ್ವಿಯಾಗಿದ್ದರು.
11. ಟಿ ನಟರಾಜನ್:
ಸನ್‌ರೈಸರ್ಸ್ ಹೈದರಾಬಾದ್ ತಂಡದ ಎಡಗೈ ವೇಗಿ ಟಿ ನಟರಾಜನ್, ಟೂರ್ನಿಯಲ್ಲಿ 19 ವಿಕೆಟ್ ಕಬಳಿಸಿ ಮಿಂಚಿದ್ದರು. ಮತ್ತೊಮ್ಮೆ ನಟರಾಜನ್ ಡೆತ್ ಓವರ್‌ನಲ್ಲಿ ಶಿಸ್ತುಬದ್ದ ದಾಳಿ ನಡೆಸಿ ಗಮನ ಸೆಳೆದರು.