2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸನ್‌ರೈಸರ್ಸ್ ಎದುರು ಫೈನಲ್‌ನಲ್ಲಿ ಕೆಕೆಆರ್ ಅನಾಯಾಸವಾಗಿ ಗೆಲುವಿನ ಕೇಕೆ ಹಾಕಿದೆ.
ಕಳೆದೊಂದು ದಶಕದಿಂದ ಐಪಿಎಲ್ ಟ್ರೋಫಿ ಬರ ಅನುಭವಿಸುತ್ತಾ ಬಂದಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಈ ಬಾರಿ ಗೌತಮ್ ಗಂಭೀರ್ ಮೆಂಟರ್‌ಶಿಪ್‌ನಲ್ಲಿ ಅಸಾಧಾರಣ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Deadline
ಇನ್ನು ಐಪಿಎಲ್ ಮುಗಿಯುತ್ತಿದ್ದಂತೆಯೇ ಕ್ರಿಕೆಟ್ ಅಭಿಮಾನಿಗಳ ಚಿತ್ತ ಜೂನ್ 01ರಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯತ್ತ ನೆಟ್ಟಿದೆ. ಟೀಂ ಇಂಡಿಯಾ ಕೂಡಾ ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಾ ಬಂದಿದೆ.
ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆಯೇ ಟೀಂ ಇಂಡಿಯಾ ಹೆಡ್ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಕೋಚ್ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಲಿದೆ.
ಈ ಕಾರಣಕ್ಕಾಗಿಯೇ ಬಿಸಿಸಿಐ ಕೆಲವು ಷರತ್ತುಗಳನ್ನು ವಿಧಿಸಿ, ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು ಮೇ 28ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು.
ಸದ್ಯ ಮೂಲಗಳ ಪ್ರಕಾರ ಸುಮಾರು 3000 ಅರ್ಜಿಸಲು ಬಿಸಿಸಿಐ ತಲುಪಿವೆ ಎನ್ನಲಾಗುತ್ತಿವೆ. ಈ ಪೈಕಿ ನರೇಂದ್ರ ಮೋದಿ, ಅಮಿತ್ ಶಾ, ಎಂ ಎಸ್ ಧೋನಿ ಹೆಸರಿನ ನಕಲಿ ಅರ್ಜಿಗಳು ಬಂದಿವೆ ಎಂದೆಲ್ಲಾ ವರದಿಯಾಗಿವೆ.
ಇದೆಲ್ಲದರ ನಡುವೆ ಬಿಸಿಸಿಐ ವಿದೇಶಿ ಕೋಚ್‌ಗಳಿಗಿಂತ ದೇಶಿ ಕೋಚ್‌ಗಳನ್ನೇ ಟೀಂ ಇಂಡಿಯಾ ಹೆಡ್ ಕೋಚ್ ಮಾಡಲು ಹೆಚ್ಚು ಒಲವು ಹೊಂದಿತ್ತು ಎಂದು ವರದಿಯಾಗಿದೆ.
ಈ ಪೈಕಿ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಅಮೋಘ ಪ್ರದರ್ಶನ ತೋರಿದ ಗೌತಮ್ ಗಂಭೀರ್ ಅವರನ್ನೇ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ಬಯಸಿದೆ ಎಂದೆಲ್ಲಾ ವರದಿಯಾಗಿತ್ತು.
'ತಮ್ಮನ್ನು ಕೋಚ್ ಅಗಿ ಸೆಲೆಕ್ಟ್ ಮಾಡುವ ಗ್ಯಾರಂಟಿ ನೀಡಿದರಷ್ಟೇ ತಾವು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುತ್ತೇನೆ' ಇಲ್ಲದಿದ್ದರೆ ತಾವು ನಾಮಾಕಾವಸ್ತೆಗಾಗಿ ಅರ್ಜಿ ಹಾಕುವುದಿಲ್ಲ ಎಂದು ಗೌತಿ ಖಡಕ್ ಆಗಿ ಕಂಡೀಷನ್ ಹಾಕಿದ್ದಾರಂತೆ.
ಸಾಮಾನ್ಯವಾಗಿ ಬಿಸಿಸಿಐ ತಮಗೆ ಬಂದ ಅರ್ಜಿಗಳನ್ನು ಪರಿಶೀಲಿಸಿ, ಈ ಪೈಕಿ ಕೆಲವು ಅಭ್ಯರ್ಥಿಗಳ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿ, ಆ ಬಳಿಕ ಅವರನ್ನು ಸಂದರ್ಶನ ಮಾಡಿ ಅಂತಿಮವಾಗಿ ಹೆಡ್ ಕೋಚ್ ನೇಮಿಸುವುದು ಸಂಪ್ರದಾಯ.
ಆದರೆ ಗಂಭೀರ್ ಅವರು ಹೇಳಿದಂತೆ ಬಿಸಿಸಿಐ ನೇರವಾಗಿ ಅವರನ್ನು ಹೆಡ್ ಕೋಚ್ ಮಾಡುತ್ತಾರೋ ಅಥವಾ ಬೇರೆ ಕೋಚ್‌ಗಳನ್ನು ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಬಿಸಿಸಿಐ ನೇಮಿಸಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.