ಬಾಬು ವಿಠ್ಠಲ್ ನಲವಾಡೆ:
ಈ ವರ್ಷ ಫೆಬ್ರವರಿಯಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ತಹಸಿಲ್‌ನಲ್ಲಿ ಕ್ರಿಕೆಟ್ (Cricket) ಪಂದ್ಯ ಆಡುತ್ತಿದ್ದಾಗ ಒಬ್ಬ ಆಟಗಾರ ಹೃದಯಾಘಾತದಿಂದ ಸಾವನ್ನಪ್ಪಿದರು. ಆಟಗಾರನ ಹೆಸರು ಬಾಬು ವಿಠ್ಠಲ್ ನಲವಾಡೆ. ಇದರ ವೀಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಇದ್ದಕ್ಕಿದ್ದಂತೆ ನೆಲದ ಮೇಲೆ ಬಿದ್ದಿರುವುದು ಕಾಣಬಹುದಾಗಿದೆ. ಅಂಪೈರ್ ಆಟಗಾರನನ್ನು ಸಮೀಪಿಸಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.