IPL 2021: ಪತ್ನಿಯರ ಬರ್ತ್‌ಡೇ ರೋಮ್ಯಾಂಟಿಕ್‌ ಆಗಿ ಸೆಲೆಬ್ರೆಟ್‌ ಮಾಡಿದ RCB ಪ್ಲೇಯರ್ಸ್‌!

First Published | Sep 30, 2021, 1:00 PM IST

ಐಪಿಎಲ್ (IPL) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ (RCB) ಬೆಂಗಳೂರು ತಂಡದ ಸ್ಟಾರ್ ಆಟಗಾರರಾದ ಎಬಿ ಡಿವಿಲಿಯರ್ಸ್ (AB de Villiers) ಮತ್ತು ಸ್ಪಿನ್ನರ್ ಯುಜ್ವೇಂದ್ರ ಚಾಹಲ್ (Yuzvendra Chahal) ಅವರ ಪತ್ನಿಯರ ಜನ್ಮದಿನವಾಗಿತ್ತು. ವಾಸ್ತವವಾಗಿ, ಸೆಪ್ಟೆಂಬರ್ 27 ರಂದು ಎಬಿ ಪತ್ನಿ ಡೇನಿಯಲ್ ಡಿ ವಿಲಿಯರ್ಸ್ (Danielle de Villiers) ಮತ್ತು ಚಾಹಲ್‌ ಪತ್ನಿ ಧನಶ್ರೀ ವರ್ಮಾ (Dhanashree Verma) ಅವರ ಜನ್ಮದಿನ. ಪತ್ನಿಯರ ಜನ್ಮದಿನದಂದು, ಆಟಗಾರರು ಅವರನ್ನು ರೊಮ್ಯಾಂಟಿಕ್‌ ಡೇಟ್‌ಗೆ  ಕರೆದೊಯ್ದರು. ಅವರು ತಮ್ಮ ಪತ್ನಿಯರೊಂದಿಗೆ ಹುಟ್ಟುಹಬ್ಬವನ್ನು ಹೇಗೆ ಎಂಜಾಯ್‌ ಮಾಡಿದ್ದಾರೆ. ಇಲ್ಲಿದೆ ನೋಡಿ ಫೋಟೋಗಳು.

ಸೋಮವಾರ ಸೆಪ್ಟೆಂಬರ್ 27 ರಂದು  ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಚಹಲ್ ಅವರ ಜನ್ಮದಿನವಾಗಿತ್ತು. ಈ ಸಂದರ್ಭದಲ್ಲಿ, ಚಹಲ್ ತನ್ನ ಪತ್ನಿಯೊಂದಿಗಿನ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿದ್ದು, ಅದರಲ್ಲಿ ಅವರು ತನ್ನ ಪತ್ನಿಯನ್ನು ಹಗ್‌ ಮಾಡಿರುವುದು  ಕಂಡುಬಂದಿದೆ. 

'ಜನ್ಮದಿನದ ಶುಭಾಶಯಗಳು ಮೈ ಲವ್‌ (My Love).  ನೀವು ಜೀವನ (live)ದಲ್ಲಿ ಅತ್ಯುತ್ತಮವಾದದ್ದಕ್ಕೆ ಅರ್ಹರು ಏಕೆಂದರೆ ಇದುವರೆಗಿನ ನನ್ನ ಜೀವನದಲ್ಲಿ ಸಂಭವಿಸಿದ ಬೆಸ್ಟ್ ನೀವು. ನನ್ನ ಜೀವನವನ್ನು ಬೆಳಗಿಸುವ ದೇವತೆಗೆ ಜನ್ಮದಿನದ ಶುಭಾಶಯಗಳು (Happy Birthday). ನಾನು ನಿಮಗೆ ಕೃತಜ್ಞನಾಗಿದ್ದೇನೆ,  ಮತ್ತೊಮ್ಮೆ ಪತ್ನಿಗೆ ಜನ್ಮದಿನದ ಶುಭಾಶಯಗಳು' ಎಂದು ಚಾಹಲ್‌ ಪತ್ನಿ ಧನಶ್ರೀಗೆ ವಿಶ್‌ ಮಾಡಿದ್ದಾರೆ.

Tap to resize

ಶ್ರೀಮತಿ ಚಾಹಲ್ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಅದೇ ಸಮಯದಲ್ಲಿ, ಧನಶ್ರೀ ಮತ್ತು ಚಾಹಲ್ ಅವರ ಲಕ್ಷಾಂತರ ಅಭಿಮಾನಿಗಳು ಅವರ ಹುಟ್ಟುಹಬ್ಬದಂದು ವಿಶ್‌ ಮಾಡಿದ್ದಾರೆ. 

ಚಹಲ್ ಪತ್ನಿಯಲ್ಲದೆ, ಎಬಿ ಡಿವಿಲಿಯರ್ಸ್ ಪತ್ನಿ ಡೇನಿಯಲ್ ಡಿವಿಲಿಯರ್ಸ್ ಕೂಡ ಸೋಮವಾರ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ರೋಮ್ಯಾಂಟಿಕ್ ರೀತಿಯಲ್ಲಿ, ಎಬಿ ತನ್ನ ಪತ್ನಿಯನ್ನು ರೂಫ್‌ ರೆಸ್ಟೋರೆಂಟ್‌ನಲ್ಲಿ ಡೇಟ್‌ಗೆ ಕರೆದೊಯ್ದರು. ಆ ಸಮಯದ  ತಮ್ಮ ಫೋಟೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

'ನನ್ನ ಸುಂದರ ಪತ್ನಿಗೆ ವಂದನೆಗಳು. ನೀವು ಸಂಪೂರ್ಣವಾಗಿ ಸರಿ. ನಾವು ನಾಲ್ವರು (ಎಬಿಡಿ ಮತ್ತು  3 ಮಕ್ಕಳು) ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ. ಹುಟ್ಟು ಹಬ್ಬದ ಶುಭಾಶಯಗಳು' ಎಂದು ಹುಟ್ಟುಹಬ್ಬದಂದು ಅವರ ಪತ್ನಿಗೆ ವಿಶ್‌ ಮಾಡಿದ್ದಾರೆ ಎಬಿ ಡಿ ವಿಲಿಯರ್ಸ್. 

https://kannada.asianetnews.com/cricket-sports/team-india-spinner-yuzvendra-chahal-dhanashree-verma-workout-session-together-video-goes-viral-kvn-qudsry

ಎಬಿ ಡಿ ವಿಲಿಯರ್ಸ್ ಜೊತೆಗೆ, ಅವರ ಪತ್ನಿ ಡೇನಿಯಲ್ ಕೂಡ ತಮ್ಮ ಹುಟ್ಟುಹಬ್ಬದ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಶಾಂಪೇನ್ ಬಾಟಲಿ ಓಪನ್‌ ಮಾಡುತ್ತಿರುವುದು ಕಂಡುಬರುತ್ತದೆ.

ಅದೇ ಸಮಯದಲ್ಲಿ, ಇನ್ನೊಂದು ಫೋಟೋದಲ್ಲಿ, ಡೇನಿಯಲ್ ಧನಶ್ರೀ ವರ್ಮಾ ಅವರಿಗೆ ಬರ್ತ್‌ಡೇ ವಿಶ್‌ ಮಾಡಿದ್ದಾರೆ. ಅವರ ಜೊತೆಗೆ ಫೋಟೋವನ್ನು ಹಂಚಿಕೊಳ್ಳುತ್ತಾ, ಡೇನಿಯಲ್ ಹೀಗೆ ಬರೆದಿದ್ದಾರೆ- 'ಇದಕ್ಕೂ ಮೊದಲು ನಾನು ನನ್ನ ಹುಟ್ಟು ಹಬ್ಬವನ್ನು ಯಾರೊಂದಿಗೂ ಶೇರ್‌ ಮಾಡಿರಲಿಲ್ಲ, ಆದರೆ ಈಗ ನಾನು ಅದನ್ನು ಅತ್ಯುತ್ತಮ ಹುಡುಗಿಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನೈಟ್ ಪಾರ್ಟಿಗಾಗಿ ಕಾಯಲು ಸಾಧ್ಯವಿಲ್ಲ'

ಎಬಿ ಡಿ ವಿಲಿಯರ್ಸ್ ಪತ್ನಿ ತುಂಬಾ ಸುಂದರವಾಗಿದ್ದಾರೆ ಮತ್ತು ಆಗಾಗ ಆಕೆ ತನ್ನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಡೇನಿಯಲ್  Instagram ನಲ್ಲಿ ಒಟ್ಟು 492k  ಅನುಯಾಯಿಗಳನ್ನು ಹೊಂದಿದ್ದಾರೆ.3 ಮಕ್ಕಳ ನಂತರವೂ ಸಾಕಷ್ಟು ಫಿಟ್ ಆಗಿರುವ ಡೇನಿಯಲ್‌ ಯಾವುದೇ ಸ್ಟಾರ್‌ಗಿಂತ ಕಡಿಮೆ ಇಲ್ಲ. 

Latest Videos

click me!