ವೈಭವ್ ಸೂರ್ಯವಂಶಿ ಮನೆಯಲ್ಲಿ ಎಲ್ಲರೂ ಸೆಲೆಬ್ರೆಟೀಸ್, ಅಭ್ಯಾಸಕ್ಕೆ ಮನೆಯ ಹಿಂದಿಂದೆ ಗ್ರೌಂಡ್

Published : Jun 17, 2026, 07:32 PM IST

15ರ ವಯಸ್ಸಿನಲ್ಲಿ ಭಾರತ ಎ ತಂಡದ ಪರ, ಶೀಘ್ರದಲ್ಲೇ ಸೀನಿಯರ್ ತಂಡ ಸೇರಿಕೊಳ್ಳಲಿರುವ ವೈಭವ್ ಸೂರ್ಯವಂಶಿ ಕುಟುಂಬ ಇದೀಗ ಭಾರಿ ಚರ್ಚೆಯಾಗುತ್ತಿದೆ. ವೈಭವ್ ಮನೆಯ ಹಿಂದೇ ಅಭ್ಯಾಸಕ್ಕೆ ಮೈದಾನವಿದೆ. ಇನ್‌ಸೈಡ್ ವೈಭವ್ ಹೋಮ್ ಕಹಾನಿ.

PREV
16
ವೈಭವ್ ಯಶಸ್ಸಿನ ಹಿಂದೆ ಕುಟುಂಬ

ವೈಭವ್ ಸೂರ್ಯವಂಶಿ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡ ಘಟನೆ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಪ್ರತಿಭೆ, ಬ್ಯಾಟಿಂಗ್ ಶೈಲಿ, ಎಂತಾ ಬೌಲರ್‌ಗಳನ್ನು ಚೆಂಡಾಡುವ ರೀತಿಗೆ ಭಾರಿ ಮೆಚ್ಚುಗೆ ಇದೆ. ಇದೇ ವೇಳೆ ವೈಭವ್ ಸೂರ್ಯವಂಶಿ ಯಶಸ್ಸಿನ ಹಿಂದೆ ಕುಟುಂಬದ ಸಹಕಾರವಿದೆ. ಇಷ್ಟೇ ಅಲ್ಲ ಮನೆಯ ಹಿಂಭಾಗದಲ್ಲೇ ಮೈದಾನವಿದ್ದು, ನಿರಂತರ ಅಭ್ಯಾಸವೂ ಯಶಸ್ಸಿಗೆ ಕಾರಣವಾಗಿದೆ.

26
ಮನೆಯ ಹಿಂಭಾಗದ ಮೈದಾನದಲ್ಲಿ ಅಭ್ಯಾಸ

ವೈಭವ್ ಸೂರ್ಯವಂಶಿ ಮನೆ ಬಿಹಾರದ ಸಮಸ್ತಿಪುರ್ ಜಿಲ್ಲೆಯ ಮೋತಿಪುರ್ ಗ್ರಾಮದಲ್ಲಿದೆ. ಎರಡು ಮಹಡಿಯ ಸರಳ ಮನೆ. ವೈಭವ್ ಪೋಷಕರು ಸಾಲ ಮಾಡಿ ಕಟ್ಟಿದ ಮನೆ. ಮಧ್ಯಮ ವರ್ಗದ ಕುಟುಂಬಕ್ಕೆ ಬೇಕಾದಂತೆ ಮನೆ ಕಟ್ಟಲಾಗಿದೆ. ಮನೆಯ ಹಿಂಭಾಗದಲ್ಲೇ ಮೈದಾನವಿದೆ. ಇದೇ ಮೈದಾನ ವೈಭವ್ ಅಭ್ಯಾಸದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ.

36
ಅಭ್ಯಾಸಕ್ಕಾಗಿ ಎಲ್ಲಾ ಸೌಲಭ್ಯ ನೀಡಿದ ವೈಭವ್ ತಂದೆ

ಮಕ್ಕಳ ಕ್ರಿಕೆಟ್ ಅಭ್ಯಾಸಕ್ಕಾಗಿ ವೈಭವ್ ತಂದ ಮನೆಯ ಪಕ್ಕದಲ್ಲೇ ನೆಟ್, ಟರ್ಫ್, ಫೀಲ್ಡ್, ಪಿಚ್ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಿದ್ದಾರೆ. ಈ ಮೂಲಕ ಮಕ್ಕಳು ಹೆಚ್ಚಿನ ಸಮಯ ಉಪಯುಕ್ತವಾಗಿ ಅಭ್ಯಾಸ ಮಾಡುತ್ತಾ ಕಳೆಯುವಂತೆ ಮಾಡಿದ್ದಾರೆ. ಇದರ ಪರಿಣಾಮ ವೈಭವ್ 15ರ ವಯಸ್ಸಿನಲ್ಲೇ ಟೀಂ ಇಂಡಿಯಾ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

46
ವೈಭವ್ ಕ್ರಿಕೆಟ್‌ಗಾಗಿ ಜಮೀನು ಮಾರಿದ್ದ ತಂದೆ

ವೈಭವ್ ಕ್ರಿಕೆಟ್ ಪ್ರತಿಭೆ ಹಾಗೂ ಆಸಕ್ತಿಗೆ ತಕ್ಕಂತೆ ಸೌಲಭ್ಯ ನೀಡಲು ವೈಭವ್ ತಂದೆಗೆ ಕಷ್ಟವಾಗಿತ್ತು. ಆರ್ಥಿಕ ಸಮಸ್ಯೆಗಳು ಎದುರಾಗಿತ್ತು. ಕ್ರಿಕೆಟ್ ಕಿಟ್ ಸೇರಿದಂತೆ ಇತರ ಸೌಲಭ್ಯಕ್ಕೆ ಪ್ರತಿ ದಿನ ಹಣ ಖರ್ಚು ಮಾಡಬೇಕಿತ್ತು. ಹೀಗಾಗಿ ತಮ್ಮ ಪೂರ್ವಜರಿಂದ ಬಂದಿದ್ದ ಆಸ್ತಿಯಲ್ಲಿ ಜಮೀನನ್ನು ಮಾರಾಟ ಮಾಡಿದ್ದರು. ಈ ಎಲ್ಲಾ ಹಣವನ್ನು ಮಕ್ಕಳ ಕ್ರಿಕೆಟ್‌ಗಾಗಿ ಹಾಕಿದ್ದಾರೆ.

56
ಬೆಳಗ್ಗೆ 3 ಗಂಟೆ ಎದ್ದು ಮಕ್ಕಳಿಗೆ ನೆರವಾಗುತ್ತಿದ್ದ ತಾಯಿ

ವೈಭವ್ ಸೂರ್ಯವಂಶಿ ಬೆಳಗ್ಗೆ 5 ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದರು. ಕ್ಲಬ್ ಕ್ರಿಕೆಟ್‌ಗೆ ತೆರಳುತ್ತಿದ್ದರು. ಹೀಗಾಗಿ ಮಗನ ಕರಿಯರ್‌ಗೆ ಸಮಸ್ಯೆಯಾಗಬಾರದು ಎಂದು ಬೆಳಗ್ಗೆ 3 ಗಂಟೆ ವೈಭವ್ ತಾಯಿ ಎದ್ದು ತಿಂಡಿ ತಯಾರಿಸುತ್ತಿದ್ದರು. ಪೋಷಕರ ತ್ಯಾಗದ ಪ್ರತಿಫಲ ಈಗ ಸಿಕ್ಕಿದೆ.

66
ಮುಂಬೈನಲ್ಲಿ ಮನೆ ಖರೀದಿಸಿರುವ ವೈಭವ್ ಸೂರ್ಯವಂಶಿ

ಐಪಿಎಲ್ ಟೂರ್ನಿಯಲ್ಲಿ 1.15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿರುವ ವೈಭವ್ ಸೂರ್ಯವಂಶಿ ಹಲವು ಪ್ರಾಯೋಜಕತ್ವದಿಂದಲೂ ಭಾರಿ ಆದಾಯಗಳಿಸುತ್ತಿದ್ದಾರೆ. ಈ ಸಂಭಾವನೆಗಳಿಂದ ಈ ಬಾರಿ ವೈಭವ್ ಸೂರ್ಯವಂಶಿ ಮುಂಬೈನಲ್ಲಿ 2.5 ಕೋಟಿಯಿಂ 3 ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories