ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಹರ್ಯಾಣ ಮಾರಕ ವೇಗಿ; ಯಾರು ಈ ಅನ್ಶೂಲ್ ಕಂಬೋಜ್?

Published : Jul 23, 2025, 04:46 PM IST

ಚೆನ್ನೈ ಸೂಪರ್ ಕಿಂಗ್ಸ್‌ನ ವೇಗಿ ಅನ್ಶೂಲ್ ಕಂಬೋಜ್ ಇಂಗ್ಲೆಂಡ್ ವಿರುದ್ಧದ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ್ದಾರೆ. ಅನ್ಶೂಲ್ ಕಂಬೋಜ್ ಯಾರು? ಈಗ ವಿವರಗಳನ್ನು ತಿಳಿದುಕೊಳ್ಳೋಣ. 

PREV
15
ಅಂಶುಲ್ ಕಾಂಬೋಜ್ ಟೆಸ್ಟ್‌ಗೆ ಪದಾರ್ಪಣೆ

ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಟೆಸ್ಟ್‌ಗಳ ಸರಣಿಯ ನಾಲ್ಕನೇ ಟೆಸ್ಟ್ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ತಂಡದ ಪರ ಹೊಸ ಆಟಗಾರ ಪದಾರ್ಪಣೆ ಮಾಡಿದ್ದಾರೆ. ದೇಶೀ ಕ್ರಿಕೆಟ್‌ನಲ್ಲಿ ಮಿಂಚಿದ ಅನ್ಶೂಲ್ ಕಂಬೋಜ್ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದಾರೆ.

25
ಬೌಲರ್‌ಗಳ ಗಾಯದಿಂದ ಅನ್ಶೂಲ್ ಕಂಬೋಜ್ ಗೆ ಅವಕಾಶ

ಆಕಾಶ್ ದೀಪ್ ಲಾರ್ಡ್ಸ್ ಟೆಸ್ಟ್‌ನ ನಾಲ್ಕನೇ ದಿನ ಗಾಯದಿಂದಾಗಿ ಮ್ಯಾಂಚೆಸ್ಟರ್ ಟೆಸ್ಟ್‌ಗೆ ದೂರ ಉಳಿದಿದ್ದಾರೆ. ಅರ್ಷದೀಪ್ ಸಿಂಗ್ ಕೂಡ ಗಾಯದಿಂದ ಬಳಲುತ್ತಿದ್ದಾರೆ. ಇದರಿಂದ ಅನ್ಶೂಲ್ ಕಂಬೋಜ್‌ಗೆ  ತಂಡದಲ್ಲಿ ಅವಕಾಶ ಸಿಕ್ಕಿದೆ.

35
ದೇಶೀ ಕ್ರಿಕೆಟ್‌ನಿಂದ ಭಾರತ A ತಂಡದವರೆಗೆ

ಅನ್ಶೂಲ್ ಕಂಬೋಜ್‌ ದೇಶೀ ಕ್ರಿಕೆಟ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಈ ವರ್ಷದ ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದರು.

45
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಅನ್ಶೂಲ್ ಕಂಬೋಜ್‌

ಮೊದಲು ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅನ್ಶೂಲ್ ಕಂಬೋಜ್‌ ಅವರನ್ನು 2025ರ ಮೆಗಾ ಹರಾಜಿನಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) 3.40 ಕೋಟಿ ರೂ.ಗೆ ಖರೀದಿಸಿತು.

55
ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಅನ್ಶೂಲ್ ಕಂಬೋಜ್‌ ದಾಖಲೆಗಳು

ಅನ್ಶೂಲ್ ಕಂಬೋಜ್‌ 2022ರ ಫೆಬ್ರವರಿಯಲ್ಲಿ ತಮ್ಮ ಮೊದಲ ಫಸ್ಟ್ ಕ್ಲಾಸ್ ಪಂದ್ಯದಲ್ಲಿ (ಹರಿಯಾಣ vs ತ್ರಿಪುರ) 29 ರನ್ ಗಳಿಸಿದರು. ಆದರೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

Read more Photos on
click me!

Recommended Stories