ಪರ್ತ್: ಭಾರತ ಹಾಗೂ ಅಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಆದರೆ ಮಳೆಯಿಂದಾಗಿ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದೀಗ ಮೊದಲ ಪಂದ್ಯ ಮುಂದುವರೆಯುತ್ತಾ ಅಥವಾ ರದ್ದಾಗುತ್ತಾ ಎನ್ನುವ ಕುತೂಹಲ ಜೋರಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯವು ಪರ್ತ್‌ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು.
28
ಆಸೀಸ್ ವೇಗಿಗಳ ಮಾರಕ ದಾಳಿ
ಇನ್ನು ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಕಾಂಗರೂ ವೇಗಿಗಳು, ಪವರ್ ಪ್ಲೇನೊಳಗೆ ಭಾರತ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳನ್ನು ಬಲಿಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
38
ನಿರಾಸೆ ಮೂಡಿಸಿದ ರೋಹಿತ್-ಕೊಹ್ಲಿ
ಸುಮಾರು ಏಳು ತಿಂಗಳುಗಳ ಬಳಿಕ ಟೀಂ ಇಂಡಿಯಾ ಕೂಡಿಕೊಂಡ ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದರು. ರೋಹಿತ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ ಖಾತೆ ತೆರೆಯುವ ಮುನ್ನವೇ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.
ಇನ್ನು ಭಾರತ-ಆಸ್ಟ್ರೇಲಿಯಾ ಮ್ಯಾಚ್ ಮುಂದುವರೆಯುವುದು ಮಳೆರಾಯನಿಗೂ ಇಷ್ಟವಿಲ್ಲ ಎನ್ನುವಂತೆ ಕಾಣುತ್ತಿದೆ. ಮೊದಲಿಗೆ ಭಾರತೀಯ ಕಾಲಮಾನ 9.35ಕ್ಕೆ ಮೊದಲ ಬಾರಿಗೆ ಮಳೆ ಅಡ್ಡಿಪಡಿಸಿತು.
58
ಒಂದು ಓವರ್ ಕಡಿತಗೊಳಿಸಲಾಗಿತ್ತು
ಕೆಲಕಾಲ ತುಂತುರು ಮಳೆ ಸುರಿದ ಪರಿಣಾಮ ಒಂದು ಓವರ್ ಕಡಿತಗೊಳಿಸಲಾಯಿತು. ಇದಾದ ಬಳಿಕ 9.43ಕ್ಕೆ ಮತ್ತೆ ಭಾರತ-ಮ್ಯಾಚ್ ಆರಂಭವಾಯಿತು.
68
ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಲ ಕಳೆಯುತ್ತಿರುವ ಆಟಗಾರರು
ಇದಾಗಿ ಸರಿಯಾಗಿ ಮೂರು ಓವರ್ ಮುಗಿಯುತ್ತಿದ್ದಂತೆಯೇ ಮತ್ತೆ ಮಳೆ ಸುರಿಯಲಾರಂಭಿಸಿದೆ. ಬಿಟ್ಟು ಬಿಟ್ಟು ಬಿರುಸಿನಿಂದ ಮಳೆ ಸುರಿಯುತ್ತಿರುವುದರಿಂದ ಆಟಗಾರರು ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ.
78
ಪರ್ತ್‌ನಲ್ಲಿ ನಿರಂತರವಾಗಿ ಸುರಿಯುತ್ತಿದೆ ಮಳೆ
ಭಾರತೀಯ ಕಾಲಮಾನ 10.10ರಿಂದ ಶುರುವಾದ ಮಳೆರಾಯ 12 ಗಂಟೆಯಾದರೂ ನಿಂತಿಲ್ಲ. ನಿರಂತರವಾಗಿ ಮಳೆ ಸುರಿಯುತ್ತಿರುವುದನ್ನು ಗಮನಿಸಿದರೇ, ಬಹುತೇಕ ಮೊದಲ ಏಕದಿನ ಪಂದ್ಯ ರದ್ದಾಗುವ ಸಾಧ್ಯತೆ ದಟ್ಟವಾಗಿದೆ.
88
ಪಂದ್ಯ ಆರಂಭವಾಗೋದು ಡೌಟ್
ಆದರೆ ಈ ಬಗ್ಗೆ ಯಾವುದೇ ಮ್ಯಾಚ್ ಸಿಬ್ಬಂದಿ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ದಟ್ಟವಾದ ಮೋಡ ಮುಚ್ಚಿರುವುದರಿಂದ ಮೊದಲ ಪಂದ್ಯ ರದ್ದಾಗುವ ಸಾಧ್ಯತೆಯೇ ಹೆಚ್ಚಿದೆ ಎನ್ನಲಾಗುತ್ತಿದೆ.