ಬೆಂಗಳೂರು: ಕಾಂತಾರ ಚಾಪ್ಟರ್ 1 ದೇಶಾದ್ಯಂತ ತಮ್ಮ ಅಮೋಘ ಪ್ರದರ್ಶನದ ಮೂಲಕ ಮುನ್ನುಗ್ಗುತ್ತಿದೆ. ಇನ್ನು ಇದೆಲ್ಲದರ ನಡುವೆ ಕೌನ್ ಬನೇಗಾ ಕರೋರ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಿಷಬ್ ಶೆಟ್ಟಿ, ಕ್ರಿಕೆಟ್ ಕುರಿತಾದ ಸಿಂಪಲ್ ಪ್ರಶ್ನೆಗೆ ಉತ್ತರಿಸಲಾಗದೇ ಎಡವಿದ್ದಾರೆ.
ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾಂತಾರ ಚಾಪ್ಟರ್ 1 ಸಿನಿ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತ ಹಾಗೂ ಭಾರತದಾಚೆಯೂ ಕಾಂತಾರ ಚಾಪ್ಟರ್ 1 ಸಿನಿಪ್ರಿಯರ ಹೃದಯ ಗೆದ್ದಿದೆ.
28
ಮುಂದುವರೆದ ಕಾಂತಾರ ಚಾಪ್ಟರ್ 1 ಆರ್ಭಟ
ಈಗಾಗಲೇ ಕಾಂತಾರ ಚಾಪ್ಟರ್ 1 ಹಲವು ದಾಖಲೆಗಳನ್ನು ಬ್ರೇಕ್ ಮಾಡಿ ಮುನ್ನುಗ್ಗುತ್ತಿರುವ ಬೆನ್ನಲ್ಲೇ, ರಿಷಬ್ ಶೆಟ್ಟಿ ಹಲವು ಸಂದರ್ಶನ ಹಾಗೂ ವಿವಿಧ ಶೋಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
38
ಕೌನ್ ಬನೇಗಾ ಕರೋರ್‌ಪತಿ 17ನೇ ಸೀಸನ್‌ನಲ್ಲಿ ಭಾಗವಹಿಸಿದ ರಿಷಬ್
ಇದೆಲ್ಲದರ ನಡುವೆ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋರ್‌ಪತಿ 17ನೇ ಸೀಸನ್‌ನಲ್ಲಿ ರಿಷಬ್ ಶೆಟ್ಟಿ ಪಾಲ್ಗೊಂಡು ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿ 12.50 ಲಕ್ಷ ರುಪಾಯಿ ಗೆಲ್ಲುವಲ್ಲಿ ಯಶಸ್ವಿಯಾದರು.
ಇನ್ನು ಮೊದಲ 12 ಪ್ರಶ್ನೆಗಳಿಗೆ ಉತ್ತರ ನೀಡಿದ್ದ ರಿಷಬ್ ಪಟ್ಟಿ, ಕ್ರಿಕೆಟ್ ಕುರಿತಾದ ಸಿಂಪಲ್ ಪ್ರಶ್ನೆಗೆ ಉತ್ತರ ನೀಡುವಲ್ಲಿ ಎಡವಿದ್ದಾರೆ. ಅಪ್ಪಟ ಕ್ರಿಕೆಟ್ ಪ್ರೇಮಿಯಾಗಿರುವ ರಿಷಬ್ ಶೆಟ್ಟಿ, ಏಷ್ಯಾಕಪ್ ಕುರಿತಾದ ಸಿಂಪಲ್ ಪ್ರಶ್ನೆಗೆ ತಪ್ಪು ಉತ್ತರ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
58
ಭಾರತ ಏಷ್ಯಾಕಪ್ ಚಾಂಪಿಯನ್
ಈ ಬಾರಿ ಸಾಕಷ್ಟು ವಿವಾದ ಹಾಗೂ ಕೆಚ್ಚೆದೆಯ ಹೋರಾಟಕ್ಕೆ ಸಾಕ್ಷಿಯಾಗಿದ್ದ 2025ರ ಏಷ್ಯಾಕಪ್ ಟೂರ್ನಿಯಲ್ಲಿ ಬದ್ದ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು
68
'ಸೂಪರ್ ಸಂಧೂಕ್' ರೌಂಡ್‌ನಲ್ಲಿ ಮುಗ್ಗರಿಸಿದ ರಿಷಬ್
'ಸೂಪರ್ ಸಂಧೂಕ್' ರೌಂಡ್‌ನಲ್ಲಿ ಭಾರತ ಪುರುಷ ಕ್ರಿಕೆಟ್ ತಂಡ ಮೊನ್ನೆ ಸೆಪ್ಟೆಂಬರ್‌ನಲ್ಲಿ ಗೆದ್ದ ಟ್ರೋಫಿ ಯಾವುದು? ಎನ್ನುವ ಪ್ರಶ್ನೆ ಎದುರಾಗಿತ್ತು.
A. ಏಷ್ಯಾಕಪ್ B. ವಿಶ್ವಕಪ್ C. ಟಿ20 ವಿಶ್ವಕಪ್ D. ಚಾಂಪಿಯನ್ಸ್ ಟ್ರೋಫಿ ಎಂಬ ಆಯ್ಕೆಗಳನ್ನು ನೀಡಲಾಗಿತ್ತು.
78
ತಪ್ಪಾಗಿ ಉತ್ತರ ನೀಡಿದ ರಿಷಬ್
ಈ ಪ್ರಶ್ನೆಗೆ ಸರಿಯಾದ ಉತ್ತರ ಕೊಡಲು ರಿಷಬ್ ಶೆಟ್ಟಿ ವಿಫಲವಾದರು. ಈ ಪ್ರಶ್ನೆಗೆ ಡಿವೈನ್ ಸ್ಟಾರ್, ಏಷ್ಯಾಕಪ್ ಎಂದು ಉತ್ತರ ಕೊಡುವ ಬದಲು ವಿಶ್ವಕಪ್ ಎಂದು ತಪ್ಪಾಗಿ ಉತ್ತರ ನೀಡಿದರು.
88
ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ರಿಷಬ್ ಶೆಟ್ಟಿ
ಸಿನಿಮಾ ಕೆಲಸ ಹಾಗೂ ಸಿನಿಮಾ ಪ್ರಮೋಷನ್‌ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದರಿಂದ ಬಹುಶಃ ರಿಷಬ್ ಶೆಟ್ಟಿ ಅವರು ಏಷ್ಯಾಕಪ್ ಕಡೆ ಗಮನ ಹರಿಸದೇ ಇರಬಹುದು. ಇಲ್ಲದಿದ್ದರೇ ಖಂಡಿತವಾಗಿಯೂ ರಿಷಬ್ ಶೆಟ್ಟಿ ಈ ಸಿಂಪಲ್ ಪ್ರಶ್ನೆಗೆ ಉತ್ತರ ನೀಡುತ್ತಿದ್ದರು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.