ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮೊದಲ ಬಾರಿ ಟೈಟಲ್ ಗೆದ್ದ ನಂತರ $269 ಮಿಲಿಯನ್ ಬ್ರ್ಯಾಂಡ್ ಮೌಲ್ಯದೊಂದಿಗೆ ಐಪಿಎಲ್‌ನಲ್ಲಿ ಮುಂಬೈ ಮತ್ತು ಚೆನ್ನೈ ತಂಡಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಇದು ಸಾಧ್ಯವಾಗಿದ್ದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ.
ಐಪಿಎಲ್ 2025ರಲ್ಲಿ ಬ್ಯುಸಿನೆಸ್, ಬ್ರ್ಯಾಂಡ್ ಮೌಲ್ಯ ಭಾರೀ ಏರಿಕೆ
ವಿಶ್ವ ಪ್ರಸಿದ್ಧ ಹೂಡಿಕೆ ಬ್ಯಾಂಕ್ ಹೌಲಿಹಾನ್‌ನ ಇತ್ತೀಚಿನ ವರದಿಯ ಪ್ರಕಾರ, 2025 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವ್ಯವಹಾರ ಮೌಲ್ಯವು 13% ರಷ್ಟು ಏರಿಕೆಯಾಗಿ $18.5 ಬಿಲಿಯನ್‌ಗೆ (ಸುಮಾರು 1.6 ಲಕ್ಷ ಕೋಟಿ) ತಲುಪಿದೆ.
25
ಐಪಿಎಲ್ ಬ್ರ್ಯಾಂಡ್ ರ್‍ಯಾಂಕಿಂಗ್‌ನಲ್ಲಿ ಆರ್‌ಸಿಬಿ ಟಾಪ್
ಈ ವರದಿಯ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೊದಲ ಬಾರಿಗೆ ಅತ್ಯಂತ ಮೌಲ್ಯಯುತ ಐಪಿಎಲ್ ತಂಡವಾಗಿ ಗುರುತಿಸಿಕೊಂಡಿದೆ. 2025ರಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದ ನಂತರ ಆರ್‌ಸಿಬಿ ಬ್ರ್ಯಾಂಡ್ ಮೌಲ್ಯ $269 ಮಿಲಿಯನ್‌ಗೆ ಏರಿದೆ.
35
ಆರ್‌ಸಿಬಿ ನಂತರ ಮುಂಬೈ, ಚೆನ್ನೈ, ಕೆಕೆಆರ್
ಮುಂಬೈ ಇಂಡಿಯನ್ಸ್ $242 ಮಿಲಿಯನ್ ಬ್ರ್ಯಾಂಡ್ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ $235 ಮಿಲಿಯನ್‌ನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ $227 ಮಿಲಿಯನ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಆರ್‌ಸಿಬಿ ಅಗ್ರಸ್ಥಾನಕ್ಕೇರಲು ಹಲವು ಪ್ರಮುಖ ಅಂಶಗಳು ಕಾರಣವಾಗಿವೆ. ಮೈದಾನದಲ್ಲಿ ಉತ್ತಮ ಪ್ರದರ್ಶನ, ನಿಷ್ಠಾವಂತ ಅಭಿಮಾನಿ ಬಳಗ, ಸ್ಟಾರ್ ಆಟಗಾರರು ಮತ್ತು ಟೆಕ್ ಬ್ರ್ಯಾಂಡ್‌ಗಳೊಂದಿಗಿನ ಪಾಲುದಾರಿಕೆಗಳು ಪ್ರಮುಖ ಕಾರಣಗಳಾಗಿವೆ.
55
ಐಪಿಎಲ್ ಕೇವಲ ಕ್ರೀಡಾ ಲೀಗ್ ಅಲ್ಲ, ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಬ್ರ್ಯಾಂಡ್
ಹೌಲಿಹಾನ್ ವರದಿಯ ಪ್ರಕಾರ, ಐಪಿಎಲ್ ಈಗ ಕೇವಲ ಕ್ರೀಡಾ ಲೀಗ್ ಆಗಿ ಉಳಿದಿಲ್ಲ, ಬದಲಿಗೆ ಜಾಗತಿಕ ಮನರಂಜನಾ ಬ್ರ್ಯಾಂಡ್ ಆಗಿ ಬೆಳೆದಿದೆ. ಇದರ ಲಾಭದಾಯಕತೆಯು ಇಂಗ್ಲಿಷ್ ಪ್ರೀಮಿಯರ್ ಲೀಗ್ ಮತ್ತು ಎನ್‌ಬಿಎಯನ್ನು ಮೀರಿದೆ.