ಪರ್ತ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆರಾಯ ಅಡ್ಡಿ ಪಡಿಸಿದ್ದರಿಂದ ಓವರ್‌ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯಕ್ಕೆ ಮಳೆರಾಯ ಮೊದಲ ಸಲ ಅಡ್ಡಿಪಡಿಸಿದ್ದರಿಂದ ಒಂದು ಓವರ್ ಕಡಿತಗೊಳಿಸಲಾಗಿತ್ತು.
26
ಇದಾದ ಬಳಿಕ ಮತ್ತೆ ಮಳೆ ಬಿರುಸಿನಿಂದ ಸುರಿಯಲಾರಂಭಿಸಿತು. ಹೀಗಾಗಿ ಸಾಕಷ್ಟು ಸಮಯ ವ್ಯರ್ಥವಾಯಿತು. ಒಂದು ಹಂತದಲ್ಲಿ ಮೋಡ ಹಾಗೂ ಮಳೆ ಸುರಿಯುವುದನ್ನು ಗಮನಿಸಿದರೆ, ಪಂದ್ಯ ನಡೆಯುವುದೇ ಅನುಮಾನವೇನೋ ಎನ್ನುವಂತೆ ಭಾಸವಾಗುತ್ತಿತ್ತು.
36
ಇನ್ನು ಇದೆಲ್ಲದರ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮಳೆ ಸುರಿಯುವುದು ನಿಂತಿದ್ದರಿಂದ ಮ್ಯಾಚ್ ಸಿಬ್ಬಂದಿ ಪಂದ್ಯ ಪುನರಾರಂಭಿಸುವುದಾಗಿ ಘೋಷಿಸಿದ್ದಾರೆ. ಇದೀಗ ಭಾರತೀಯ ಕಾಲಮಾನ 12. 20ಕ್ಕೆ ಪಂದ್ಯ ಪುನರಾರಂಭವಾಗಲಿದೆ.
ಮಳೆಯಿಂದಾಗಿ ಸಮಯ ವ್ಯರ್ಥವಾಗಿರುವುದರಿಂದ 50 ಓವರ್‌ಗಳ ಏಕದಿನ ಪಂದ್ಯವನ್ನು ಕೇವಲ 35 ಓವರ್‌ಗಳಿಗೆ ನಿಗದಿಪಡಿಸಲಾಗಿದೆ. ಪ್ರತಿ ಬೌಲರ್ ಗರಿಷ್ಠ ಏಳು ಓವರ್ ಬೌಲಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
56
ಇನ್ನು ಇನ್ನಿಂಗ್ಸ್ ಮಧ್ಯೆ ಕೇವಲ 20 ನಿಮಿಷ ಮಾತ್ರ ಬ್ರೇಕ್ ನೀಡಲು ನಿರ್ಧರಿಸಲಾಗಿದೆ. ಇದಷ್ಟೇ ಅಲ್ಲದೇ ಆಸ್ಟ್ರೇಲಿಯಾ ತಂಡವು ಪರಿಷ್ಕೃತ ಡೆಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ನೀಡುವ ಗುರಿಯನ್ನು ಬೆನ್ನತ್ತಬೇಕಿದೆ.
66
ಸದ್ಯ ಭಾರತ ತಂಡವು 11.5 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 37 ರನ್ ಗಳಿಸಿದೆ. ಇನ್ನುಳಿದ 23 ಓವರ್‌ಗಳಲ್ಲಿ ಇನ್ನೆಷ್ಟು ರನ್ ಕಲೆಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.