IND vs ZIM: ಎರಡನೇ ಟಿ20ಗೆ ಟೀಮ್ ಇಂಡಿಯಾ ಪ್ಲೇಯಿಂಗ್ 11 ಔಟ್! ತಾರಾ ಓಪನರ್‌ಗೆ ಶಾಕ್! ಯುವ ಬಿರುಗಾಳಿಗೆ ಒಲಿದ ಚಾನ್ಸ್!

Published : Jul 24, 2026, 11:27 PM IST

ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಬದಲಾವಣೆ ಸಾಧ್ಯತೆಯಿದೆ.  ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆ ಪ್ಲೇಯರ್‌ಗೆ ವಿಶ್ರಾಂತಿ ನೀಡಿ, ಅವರ ಸ್ಥಾನಕ್ಕೆ ಯುವ ಆಟಗಾರನಿಗೆ ಅವಕಾಶ ನೀಡುವ ನಿರೀಕ್ಷೆಯಿದೆ ಎಂದು ಮ್ಯಾನೇಜ್‌ಮೆಂಟ್‌ ತಿಳಿಸಿದೆ.

PREV
16
ಆಗಲಿದೆ ಭಾರೀ ಬದಲಾವಣೆ!

ಭಾರತ ಮತ್ತು ಜಿಂಬಾಬ್ವೆ ನಡುವಿನ ಚುಟುಕು ಸಮರದ ಕಾಳಗ ರೋಚಕ ಹಂತಕ್ಕೆ ತಲುಪಿದೆ. ಜುಲೈ 25, 2026ರಂದು ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲು ಸಜ್ಜಾಗಿವೆ. ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಸಂಜೆ 4:30ಕ್ಕೆ ಪಂದ್ಯ ಆರಂಭವಾಗಲಿದ್ದು, ಸಂಜೆ 4:00 ಗಂಟೆಗೆ ಟಾಸ್ ನಡೆಯಲಿದೆ. ಸರಣಿಯಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿರುವ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಭಾರೀ ಬದಲಾವಣೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಮೊದಲ ಪಂದ್ಯದ ಬಳಿಕ ಯುವ ಭಾರತೀಯ ಪಡೆ ತನ್ನ ಆರಂಭಿಕ ಕ್ರಮಾಂಕದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ತಂಡದ ಪ್ರಮುಖ ಸ್ಟಾರ್ ಓಪನರ್‌ ಒಬ್ಬರಿಗೆ ಕೊಕ್ ನೀಡಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

26
ತಾರಾ ಓಪನರ್ ಔಟ್!

ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಪ್ರಸ್ತುತ ತೀವ್ರ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದಾರೆ. ಮೈದಾನದಲ್ಲಿ ಸಿಡಿದೆದ್ದು ಎದುರಾಳಿ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಅವರ ಬ್ಯಾಟ್, ಕಳೆದ ಕೆಲವು ಪಂದ್ಯಗಳಿಂದ ಸಂಪೂರ್ಣವಾಗಿ ಸೈಲೆಂಟ್ ಆಗಿದೆ. ಕಳೆದ ಐದು ಪಂದ್ಯಗಳಲ್ಲಿ ಅವರು ಕೇವಲ 73 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲೂ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.

36
ನಿರಾಶೆ ಮೂಡಿಸಿದ್ದ ಶರ್ಮಾ!

ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲೂ ನಿರಾಸೆ ಮೂಡಿಸಿದ ಅಭಿಷೇಕ್ ಶರ್ಮಾ, ಕೇವಲ 8 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಷ್ಟೇ ಅಲ್ಲದೆ, ಪಂದ್ಯದ ವೇಳೆ ಅವರು ಗಾಯಕ್ಕೂ ತುತ್ತಾಗಿದ್ದು, ಬರೋಬ್ಬರಿ 15 ಓವರ್‌ಗಳ ಕಾಲ ಮೈದಾನದಿಂದ ಹೊರಗುಳಿಯಬೇಕಾಯಿತು. ಮುಂಬರುವ ಪ್ರಮುಖ ಸರಣಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಗಾಯದ ಸಮಸ್ಯೆ ಹೆಚ್ಚಾಗದಂತೆ ತಡೆಯಲು ಎರಡನೇ ಟಿ20 ಪಂದ್ಯದಲ್ಲಿ ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಲು ಬೋರ್ಡ್ ನಿರ್ಧರಿಸಿದೆ.

46
ಕಿರಿಯ ಪಟಾಲಂಗೆ ಒಲಿದ ಚಾನ್ಸ್!

ಅಭಿಷೇಕ್ ಶರ್ಮಾ ಅಲಭ್ಯತೆಯಿಂದಾಗಿ ಇದೀಗ ಯುವ ಪ್ರತಿಭೆ ಪ್ರಭಸಿಮ್ರನ್ ಸಿಂಗ್ ಅವರಿಗೆ ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ಸುವರ್ಣ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರಾಗಿರುವ ಪ್ರಭಸಿಮ್ರನ್ ಸಿಂಗ್, ವೈಭವ್ ಸೂರ್ಯವಂಶಿ ಅವರೊಂದಿಗೆ ಭಾರತೀಯ ಇನಿಂಗ್ಸ್ ಆರಂಭಿಸಲಿದ್ದಾರೆ.

56
ಸಿಂಹಸ್ವಪ್ನವಾಗಲಿದೆ ಹೊಸ ಜೋಡಿ!

ಈ ಹೊಸ ಹಾಗೂ ಯುವ ಓಪನಿಂಗ್ ಜೋಡಿ ಹರಾರೆ ಮೈದಾನದಲ್ಲಿ ಜಿಂಬಾಬ್ವೆ ಬೌಲರ್‌ಗಳಿಗೆ ಹೇಗೆ ಸಿಂಹಸ್ವಪ್ನವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.
ಪಂದ್ಯದ ಸಮಯ ಮತ್ತು ದಿನಾಂಕದ ವಿವರ!
ಪಂದ್ಯ: ಭಾರತ vs ಜಿಂಬಾಬ್ವೆ (ಎರಡನೇ T20)
ದಿನಾಂಕ: ಜುಲೈ 25, 2026
ಸ್ಥಳ: ಹರಾರೆ ಸ್ಪೋರ್ಟ್ಸ್ ಕ್ಲಬ್
ಟಾಸ್ ಸಮಯ: ಸಂಜೆ 04:00 ಗಂಟೆಗೆ
ಪಂದ್ಯ ಆರಂಭ: ಸಂಜೆ 04:30 ಗಂಟೆಗೆ

66
ಒದಗಲಿದೆಯಾ ಭರ್ಜರಿ ಆರಂಭ?

ತಂಡದಲ್ಲಿ ಈ ಪ್ರಮುಖ ಬದಲಾವಣೆಯಾಗುತ್ತಿದ್ದು, ಪ್ರಭಸಿಮ್ರನ್ ಮತ್ತು ವೈಭವ್ ಜೋಡಿ ಭಾರತಕ್ಕೆ ಯಾವ ರೀತಿ ಭರ್ಜರಿ ಆರಂಭ ಒದಗಿಸಲಿದೆ ಎಂಬುದನ್ನು ನೋಡಲು ಕ್ರಿಕೆಟ್ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories