ಟಿ20 ವಿಶ್ವಕಪ್ 2026: ಬಾಂಗ್ಲಾದೇಶವನ್ನು ಬೆಂಬಲಿಸಲು ಹೋಗಿ ಹಳ್ಳಕ್ಕೆ ಬೀಳುತ್ತಾ ಪಾಕಿಸ್ತಾನ?

Published : Jan 28, 2026, 05:35 PM IST

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೇಜರ್ ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ. ಬಾಂಗ್ಲಾದೇಶಕ್ಕೆ ಬೆಂಬಲಿಸಲು ಹೋಗಿ ಇದೀಗ ಪಾಕಿಸ್ತಾನವೇ ಹಳ್ಳಕ್ಕೆ ಬೀಳುವ ಪರಿಸ್ಥಿತಿಗೆ ಬಂದಂತೆ ಕಾಣುತ್ತಿದೆ. ಅಷ್ಟಕ್ಕೂ ಹೊಸ ಟ್ವಿಸ್ಟ್ ಏನು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ 

PREV
16
ತಾನೇ ಹಳ್ಳಕ್ಕೆ ಬೀಳುವ ಪರಿಸ್ಥಿತಿ ತಂದುಕೊಂಡ ಪಾಕ್!

ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಬಾಂಗ್ಲಾದೇಶವನ್ನು ಬೆಂಬಲಿಸುತ್ತಿರುವ ಪಾಕಿಸ್ತಾನ ತಂಡ ಒಂದು ವೇಳೆ ಟೂರ್ನಿಯನ್ನು ಬಹಿಷ್ಕರಿಸಿದರೆ, ಅದು ಯಾರನ್ನೋ ರಕ್ಷಿಸಲು ಹೋಗಿ ತಾನೇ ಹಳ್ಳಕ್ಕೆ ಬಿದ್ದಂತೆ. ಯಾಕೆಂದರೆ, ಪಾಕ್‌ ತಂಡ ಟೂರ್ನಿ ಬಹಿಷ್ಕರಿಸಿದರೆ ಬದಲಿ ತಂಡವಾಗಿ ಬಾಂಗ್ಲಾದೇಶವೇ ವಿಶ್ವಕಪ್‌ಗೆ ವಾಪಸ್‌ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

26
ಬಾಂಗ್ಲಾದೇಶ ಟಿ20 ವಿಶ್ವಕಪ್‌ನಿಂದ ಹೊರಬಿದ್ದರೂ ಪಾಕ್ ಬಾಂಗ್ಲಾವನ್ನು ಬೆಂಬಲಿಸುತ್ತಿದೆ

ಭಾರತದಲ್ಲಿ ಭದ್ರತೆ ಸಮಸ್ಯೆ ಇದೆ, ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಬೇಕು ಎಂದು ಪಟ್ಟುಹಿಡಿದಿದ್ದ ಬಾಂಗ್ಲಾ ಈಗ ಟೂರ್ನಿಯಿಂದಲೇ ಹೊರಬಿದ್ದಿದೆ. ಬದಲಾಗಿ ಸ್ಕಾಟ್ಲೆಂಡ್‌ ಟೂರ್ನಿಗೆ ಪ್ರವೇಶಿಸಿದೆ. ಹೀಗಿದ್ದೂ ಪಾಕ್, ಬಾಂಗ್ಲಾದೇಶ ಪರ ಬ್ಯಾಟ್ ಮಾಡುತ್ತಿದೆ.

36
ಪಾಕ್‌ಗೆ ಬೀಳಬಹುದು ದೊಡ್ಡ ಹೊಡೆತ!

ಮತ್ತೊಂದೆಡೆ ಬಾಂಗ್ಲಾಕ್ಕೆ ಬೆಂಬಲವಾಗಿ ನಿಂತಿರುವ ಪಾಕ್‌ ಕ್ರಿಕೆಟ್‌, ಟೂರ್ನಿಯನ್ನು ಬಹಿಷ್ಕರಿಸುವ ಬೆದರಿಕೆ ಒಡ್ಡುತ್ತಿದೆ. ಆದರೆ ತಂಡ ಟೂರ್ನಿ ಬಹಿಷ್ಕರಿಸುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಬಹಿಷ್ಕಾರ ನಿರ್ಧಾರ ತೆಗೆದುಕೊಂಡರೆ ಅದು ಪಾಕ್‌ಗೆ ಮುಳುವಾಗುವುದು ಖಚಿತ.

46
ಸಿಗುತ್ತಾ ಟ್ವಿಸ್ಟ್‌?:

ಪಾಕ್‌ ತಂಡ ಈಗ ‘ಎ’ ಗುಂಪಿನಲ್ಲಿದೆ. ತಂಡದ ಎಲ್ಲಾ ಪಂದ್ಯಗಳು ಲಂಕಾದಲ್ಲಿ ನಿಗದಿಯಾಗಿದೆ. ಪಾಕ್‌ ತಂಡ ಟೂರ್ನಿ ಬಹಿಷ್ಕರಿಸಿದರೆ, ಬದಲಿ ತಂಡವಾಗಿ ಬಾಂಗ್ಲಾದೇಶ ಟೂರ್ನಿಗೆ ಪ್ರವೇಶಿಸಬಹುದು.

56
ಬಾಂಗ್ಲಾದೇಶಕ್ಕೆ ಸಿಗುತ್ತಾ ಮತ್ತೆ ಚಾನ್ಸ್?

ಬಾಂಗ್ಲಾಗೆ ಭಾರತದಲ್ಲಿ ಆಡಲು ಸಮಸ್ಯೆಯಿದೆ ಹೊರತು ಶ್ರೀಲಂಕಾದಲ್ಲಿ ಅಲ್ಲ. ಹೀಗಾಗಿ ಪಾಕ್‌ ಹೊರಬಿದ್ದರೆ, ಬಾಂಗ್ಲಾ ಕ್ರಿಕೆಟ್‌ ಮಂಡಳಿಯ ಬೇಡಿಕೆಯಂತೆ ಬಾಂಗ್ಲಾ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದು, ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

66
ಐಸಿಸಿಗೆ ನಷ್ಟವಾದ್ರೆ ಪಾಕ್‌ಗೂ ಸಂಕಷ್ಟ

ಭಾರತ-ಪಾಕ್‌ ಪಂದ್ಯ ಆರ್ಥಿಕವಾಗಿ ಐಸಿಸಿಗೆ ಬಹಳ ಪ್ರಾಮುಖ್ಯವಾದದ್ದು. ಈ ಪಂದ್ಯದ ಪ್ರಸಾರದಿಂದಲೇ ಬಹುಕೋಟಿ ಲಾಭ ಸಿಗಲಿದೆ. ಪ್ರಾಯೋಜಕರು, ಪ್ರಸಾರಕರು, ಜಾಹೀರಾತುದಾರರಿಗೂ ವಿಶ್ವಕಪ್‌ನಲ್ಲೇ ಈ ಪಂದ್ಯ ಹೆಚ್ಚು ಮಹತ್ವದ್ದು. ಒಂದು ವೇಳೆ ಪಾಕ್‌ ತಂಡ ಭಾರತ ವಿರುದ್ಧ ಆಡದಿದ್ದರೆ ಐಸಿಸಿಗೆ ಆರ್ಥಿಕ ನಷ್ಟವಾಗುವುದು ಖಚಿತ. ಪ್ರಸಾರಕರಿಗೂ ಇದರಿಂದ ನಷ್ಟ ಉಂಟಾಗಲಿದೆ. ಹಾಗಾಗಿ ಐಸಿಸಿ ಕೂಡ ಪಿಸಿಬಿ ಮೇಲೆ ಹಲವು ನಿರ್ಬಂಧ ಹೇರಬಹುದು. ವಾರ್ಷಿಕವಾಗಿ ನೀಡುವ ಲಾಭಾಂಶದಲ್ಲೂ ಪಾಕಿಸ್ತಾನಕ್ಕೆ ಹಣ ಕಡಿತಗೊಳಿಸುವ ಸಾಧ್ಯತೆ ಇದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories