ಮಹಿಳಾ ಕ್ರಿಕೆಟರ್‌ಗಳೇ ಪಲಾಶ್‌ಗೆ ಸರಿಯಾಗಿ ಥಳಿಸಿದ್ದರು ಎಂದ ಮಂಧಾನ ಬಾಲ್ಯ ಸ್ನೇಹಿತನ ವಿರುದ್ಧ10 ಕೋಟಿ ಮಾನನಷ್ಟ ಕೇಸ್

Published : Jan 25, 2026, 07:24 PM IST

ಗಾಯಕ ಪಲಾಶ್ ಮುಚ್ಚಲ್, ಸ್ಮೃತಿ ಮಂಧಾನ ಜೊತೆಗಿನ ತನ್ನ ಮದುವೆ ರದ್ದಾಗಲು ಕಾರಣವಾದ ರಹಸ್ಯವನ್ನು ಬಹಿರಂಗಪಡಿಸಿದ ಸ್ಮೃತಿಯ ಬಾಲ್ಯದ ಗೆಳೆಯ ವಿದ್ನ್ಯಾನ್ ಮಾನೆ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಘೋಷಿಸಿದ್ದಾರೆ.

PREV
16
ಸ್ಮೃತಿ ಮಂಧಾನ ಬಾಲ್ಯದ ಗೆಳೆಯನ ವಿರುದ್ಧ ಮಾನನಷ್ಟ ಮೊಕದ್ದಮೆ

ಸ್ಮೃತಿ ಮಂಧಾನ ಜೊತೆ ತನ್ನ ಮದುವೆ ಮುರಿದು ಬೀಳುವುದಕ್ಕೆ ಕಾರಣವಾದ ತನ್ನ ನವರಂಗಿ ಆಟವನ್ನು ಬಹಿರಂಗಪಡಿಸಿದ ಸ್ಮೃತಿ ಮಂಧಾನಳ ಬಾಲ್ಯದ ಗೆಳೆಯ ವಿದ್ನ್ಯಾನ್ ಮಾನೆ ವಿರುದ್ಧ 10 ಕೋಟಿ ರೂಪಾಯಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗಾಯಕ ಪಲಾಶ್ ಮುಚ್ಚಲ್ ಅವರು ಹೇಳಿಕೊಂಡಿದ್ದಾರೆ. ಸ್ಮೃತಿ ಮಂಧಾನ ಹಾಗೂ ಪಾಲಾಶ್ ಮುಚ್ಚಲ್ ಅವರ ಮದುವೆ ಕಳೆದ ಡಿಸೆಂಬರ್‌ನಲ್ಲಿ ಕೊನೆಕ್ಷಣದಲ್ಲಿ ರದ್ದಾಗಿತ್ತು.

26
ವಿದ್ನ್ಯಾನ್ ಮಾನೆ ವಿರುದ್ಧ 10 ಕೋಟಿ ರೂಪಾಯಿ ಮೌಲ್ಯದ ಮಾನನಷ್ಟ ಮೊಕದ್ದಮೆ

ಮದುವೆಗೆ ಕೆಲ ಕ್ಷಣಗಳಿರುವಾಗ ಬೇರೆ ಮಹಿಳೆಯ ಜೊತೆ ಪಲಾಶ್ ಮುಚ್ಚಲ್‌ನ ಪಲ್ಲಂಗದಾಟವನ್ನು ನೋಡಿದ ಸ್ಮೃತಿ ಮಂಧಾನ ಸ್ನೇಹಿತರಾದ, ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರರೇ ಸ್ವತಃ ಪಾಲಾಶ್ ಮುಚ್ಚಲ್‌ಗೆ ಥಳಿಸಿದ್ದರು ಎಂದು ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ವಿದ್ನ್ಯಾನ್ ಮಾನೆ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದರು. ಹೀಗೆ ತನ್ನ ಮದುವೆಗೆ ರದ್ದಾಗುವುದಕ್ಕೆ ಕಾರಣವಾದ ರಹಸ್ಯವನ್ನು ಮಾಧ್ಯಮಗಳ ಮುಂದೆ ಬಹಿರಂಗಡಪಡಿಸಿದ ಸ್ಮೃತಿ ಅವರ ಬಾಲ್ಯದ ಗೆಳೆಯ ಮತ್ತು ನಟ ಹಾಗೂ ನಿರ್ಮಾಪಕನೂ ಆಗಿರುವ ವಿದ್ನ್ಯಾನ್ ಮಾನೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪಾಲಾಶ್ ಮುಚ್ಚಲ್ ಇನ್‌ಸ್ಟಾಗ್ರಾಮ್‌ನಲ್ಲಿ ಘೋಷಿಸಿದ್ದಾರೆ.

36
ಪಲಾಶ್ ಮುಚ್ಛಲ್‌ ವಿರುದ್ಧ ವಂಚನೆ ಆರೋಪ ಮಾಡಿರುವ ವಿದ್ನ್ಯಾನ್ ಮಾನೆ

ಯಶಸ್ಸು ಕಾಣದ ಚಿತ್ರವೊಂದಕ್ಕೆ ಹೂಡಿಕೆ ಮಾಡುವ ನೆಪದಲ್ಲಿ ತನಗೆ 40 ಲಕ್ಷ ರೂಪಾಯಿಗಳ ವಂಚನೆಯ ಬಗ್ಗೆ ಪಲಾಶ್ ಮುಚ್ಛಲ್‌ಗೆ ಕಾನೂನು ನೋಟಿಸ್ ನೀಡಿದ ಸ್ವಲ್ಪ ಸಮಯದ ನಂತರ ವಿದ್ನ್ಯಾನ್ ಮಾನೆ ಈ ವಿಷಯ ಬಹಿರಂಗಪಡಿಸಿದ್ದಾರೆ. ಸ್ಮೃತಿ ಜೊತೆ ಮದುವೆ ರದ್ದಾದ ನಂತರ, ಪಾಲಾಶ್ ಮುಚ್ಛಲ್ ಅವರ ಇಡೀ ಕುಟುಂಬವು ತಮ್ಮ ಜೊತೆಗಿನ ಸಂಪರ್ಕವನ್ನು ಕಡಿತಗೊಳಿಸಿದ್ದರಿಂದಾಗಿ ತನ್ನ ಆರ್ಥಿಕ ಸ್ಥಿತಿ ಹದಗೆಟ್ಟಿತು ಎಂದು ಮಾನೆ ಆರೋಪಿಸಿದ್ದಾರೆ.

46
ಪಲಾಶ್‌ಗೆ ಟೀಂ ಇಂಡಿಯಾ ಮಹಿಳಾ ಕ್ರಿಕೆಟರ್‌ಗಳೇ ಬಾರಿಸಿದ್ದರು ಎಂದು ಹೇಳಿದ್ದ ವಿದ್ನ್ಯಾನ್ ಮಾನೆ

ಪಲಾಶ್ ಹಾಗೂ ಸ್ಮೃತಿ ಮದುವೆ ರದ್ದಾಗಲು ಕಾರಣವಾದ ನಾಟಕೀಯ ಘಟನೆಗಳನ್ನು ತಾನು ಕಣ್ಣಾರೆ ಕಂಡಿದ್ದಾಗಿ ಮಾನೆ ಹೇಳಿಕೊಂಡಿದ್ದಾರೆ. ಅವರ ಪ್ರಕಾರ, ಪಲಾಶ್ ಮುಚ್ಚಲ್ ಮತ್ತೊಬ್ಬ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಎಂದು ಹೇಳಿದ್ದರು. ಅವರು ಬಹಿರಂಗಪಡಿಸಿದ ಮತ್ತೊಂದು ಅತ್ಯಂತ ಆಸಕ್ತಿದಾಯಕ ವಿಚಾರವೆಂದರೆ ಸ್ಮೃತಿ ಮಂಧಾನ ಮದುವೆಗೆ ಭಾಗವಹಿಸುವುದಕ್ಕೆ ಬಂದಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ಸದಸ್ಯರೇ ಪಲಾಶ್‌ಗೆ ಸರಿಯಾಗಿ ಥಳಿಸಿದ್ದರು ಎಂಬುದು.

56
ಇನ್ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್

ಹೀಗಾಗಿ ಈಗ ಪಲಾಶ್ ಮುಚ್ಚಲ್ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ನಟ ನಿರ್ಮಾಪಕ ವಿದ್ನ್ಯಾನ್ ಮಾನೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ನನ್ನ ಪ್ರತಿಷ್ಠೆ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ತರುವ ಉದ್ದೇಶದಿಂದ ವಿದ್ನ್ಯಾನ್ ಮಾನೆ ಅವರು ಸುಳ್ಳು, ಅತಿರೇಕದ ಮತ್ತು ಅತ್ಯಂತ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ಸಾಂಗ್ಲಿ ಮೂಲದ ವಿದ್ಯಾನ್ ಮಾನೆ ಅವರಿಗೆ ನನ್ನ ವಕೀಲ ಶ್ರೇಯಂಶ್ ಮಿಥಾರೆ ಅವರು ₹10 ಕೋಟಿ ಮಾನನಷ್ಟದ ಕಾನೂನು ನೋಟಿಸ್ ಕಳುಹಿಸಿದ್ದಾರೆ ಎಂದು ಪಲಾಶ್ ಮುಚ್ಛಲ್ ತಮ್ಮ ವೈಯಕ್ತಿಕ ಖಾತೆಯಲ್ಲಿ ಪೋಸ್ಟ್ ಮಾಡಿದ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ನೀಡಲಾಗಿದೆ.

66
ಪಲಾಶ್ ಮುಚ್ಚಲ್‌ಗೆ ಭ್ರಮೆ ಎಂದ ನೆಟ್ಟಿಗರು

ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧಾನ ನಡುವಿನ ವಿವಾಹ ಮುರಿದು ಬಿದ್ದ ವಿಚಾರ ಮೊದಲಿಗೆ ಸೋಶಿಯಲ್ ಮೀಡಿಯಾ ರೆಡಿಟ್‌ಲ್ಲಿ ಸೋರಿಕೆಯಾಗಿತ್ತು. ಹಾಗೂ ಅದಕ್ಕೆ ಕಾರಣವಾದ ಹಾಗೂ ವಿದ್ನ್ಯಾನ್ ಮಾನೆ ಹೇಳಿದ ವಿಚಾರಗಳು ನಿಜವೆಂದು ಆಪ್ತ ಮೂಲಗಳು ಹೇಳಿವೆ. ಹೀಗಾಗಿ ಪಲಾಶ್ ಮುಚ್ಚಲ್ ತನ್ನ ರೆಫ್ಯೂಟೇಷನ್‌ಗೆ ಧಕ್ಕೆ ಆಗಿದೆ ಹೀಗಾಗಿ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದೇನೆ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಅವರನ್ನು ರೋಸ್ಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಎಂಥಹಾ ಘನತೆ ಪಲಾಶ್ ಭ್ರಮೆಯಲ್ಲಿದ್ದಂತೆ ಕಾಣಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರಿಗೆ ಏನು ಖ್ಯಾತಿ ಇತ್ತು ಸ್ಮೃತಿ ಮಂಧಾನ ಅವರಿಂದಲೇ ನನಗೆ ಇಂತಹವನೋರ್ವ ಇದ್ದಾನೆ ಎಂಬುದು ತಿಳಿಯಿತು. ಸತ್ಯವನ್ನು ಹೇಳಿದ್ದಕ್ಕಾಗಿ ಒಬ್ಬರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories