ಕೇವಲ 14 ಎಸೆತದಲ್ಲಿ ಹಾಫ್ ಸೆಂಚುರಿ, ಹಲವು ದಾಖಲೆ ಮುರಿದು ಯುವಿ ಸನಿಹಕ್ಕೆ ಬಂದ ಅಭಿಷೇಕ್

Published : Jan 25, 2026, 10:46 PM IST

ಕೇವಲ 14 ಎಸೆತದಲ್ಲಿ ಹಾಫ್ ಸೆಂಚುರಿ, ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20ಯಲ್ಲಿ ಅಭಿಷೇಕ್ ಶರ್ಮಾ ಹಲವು ದಾಖಲೆ ಬರೆದಿದ್ದಾರೆ. ಸೂರ್ಯಕುಮಾರ್ ದಾಖಲೆ ಮುರಿದರೆ, ಯುವಿ ವಿಶ್ವ ದಾಖಲೆ ಸಮೀಪ ತಲುಪಿದ್ದಾರೆ. 

PREV
15
ಅಭಿಷೇಕ್ ಶರ್ಮಾ 14 ಎಸೆತಗಳಲ್ಲಿ ಸಾಧನೆ

ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಟಿ20 ಪಂದ್ಯಗಳಲ್ಲಿ ಭಾರತೀಯ ಆಟಗಾರರ ಪೈಕಿ ಎರಡನೇ ವೇಗದ ಅರ್ಧಶತಕ ಬಾರಿಸಿ ದಾಖಲೆ ಪುಸ್ತಕ ಸೇರಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಶರ್ಮಾ ಹಾಫ್ ಸೆಂಚುರಿ ಸಿಡಿಸಿದ್ದಾರೆ. 

25
ಯುವರಾಜ್ ಸಿಂಗ್ ಮೊದಲ ಸ್ಥಾನ

ಟಿ20 ಪಂದ್ಯಗಳಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿದೆ. ಅವರು 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಇದು ವಿಶ್ವದಾಖಲೆಯಾಗಿದೆ. ಇದೀಗ ಅಭಿಷೇಕ್ ಶರ್ಮಾ, ಯವಿ ಸನಿಹಕ್ಕೆ ತಲುಪಿದ್ದಾರೆ. 

35
SKY ದಾಖಲೆ ಮುರಿದ ಅಭಿಷೇಕ್ ಶರ್ಮಾ

ಈ ಅರ್ಧಶತಕದೊಂದಿಗೆ, 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ 50 ರನ್ ಗಳಿಸುವುದರಲ್ಲಿ ಅಭಿಷೇಕ್, ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿದ್ದಾರೆ. ಅಭಿಷೇಕ್ 25 ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಒಂಬತ್ತು ಟಿ20 ಅರ್ಧಶತಕಗಳನ್ನು ಬಾರಿಸಿದ್ದಾರೆ. 

45
ಅತೀ ಕಡಿಮೆ ಎಸೆತದಲ್ಲಿ ಟಿ20 ಅರ್ಧಶತಕ ದಾಖಲೆ
  • ಯುವರಾಜ್ ಸಿಂಗ್ , 12 ಎಸೆತ vs ಇಂಗ್ಲೆಂಡ್ 2007
  • ಜಾನ್ ಫ್ರಾಂಕ್ಲಿನ್, 12 ಎಸೆತ vs ಜಿಂಬಾಬ್ವೆ 2025
  • ಕೊಲಿನ್ ಮುನ್ರೋ, 14 ಎಸೆತ vs ಶ್ರೀಲಂಕಾ 2016
  • ಅಭಿಷೇಕ್ ಶರ್ಮಾ , 14 ಎಸೆತ vs ನ್ಯೂಜಿಲೆಂಡ್ 2026
  • ಕ್ವಿಂಟನ್ ಡಿಕಾಕ್, 15 ಎಸೆತ vs ವೆಸ್ಟ್ ಇಂಡೀಸ್ 20223
55
ಭಾರತಕ್ಕೆ ಭರ್ಜರಿ ಗೆಲುವು, ಸರಣಿ ಕೈವಶ

3ನೇ ಟಿ20 ಪಂದ್ಯದಲ್ಲಿ ಭಾರತ ಸ್ಫೋಟಕ ಬ್ಯಾಟಿಂಗ್‌ನಿಂದ 154 ರನ್ ಟಾರ್ಗೆಟನ್ನು ಕೇವಲ 10 ಓವರ್‌ಗೆ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಅತೀ ಹೆಚ್ಚು ಎಸೆತ ಬಾಕಿ ಉಳಿಸಿ ಗೆಲುವು ಸಾಧಿಸಿದ ಸಾಧನೆಗೆ ಟೀಂ ಇಂಡಿಯಾ ಪಾತ್ರವಾಗಿದೆ.  5 ಪಂದ್ಯಗಳ ಟಿ20 ಸರಣಿಯಲ್ಲಿ ಆರಂಭಿಕ 3 ಪಂದ್ಯ ಗೆದ್ದಿರುವ ಭಾರತ ಈಗಾಗಲೇ ಸರಣಿ ಕೈವಶ ಮಾಡಿದೆ. ಇನ್ನೆರಡು ಪಂದ್ಯ ಬಾಕಿ ಉಳಿದಿದೆ 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories