ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವ ಭಾರತ ತಂಡದ ಕನಸು ನುಚ್ಚುನೂರಾಗಿದೆ. ದಶಕದ ಬಳಿಕ ತವರಿನಲ್ಲಿ ಐಸಿಸಿ ಟ್ರೋಫಿ ಗೆಲ್ಲುವ ರೋಹಿತ್ ಶರ್ಮಾ ಪಡೆಯ ಕನಸು ಮರಿಚಿಕೆಯಾಗಿಯೇ ಉಳಿದಿದೆ. ಇನ್ನು ಮುಂದಿನ ಏಕದಿನ ವಿಶ್ವಕಪ್‌ಗೆ 4 ವರ್ಷವಿದೆ. 2027ರ ಏಕದಿನ ವಿಶ್ವಕಪ್ ಟೂರ್ನಿ ವೇಳೆಗೆ ಟೀಂ ಇಂಡಿಯಾದ ಈ ಅನುಭವಿ ಆಟಗಾರರ ವಯಸ್ಸು ಎಷ್ಟಾಗಲಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೀಗ 36 ವರ್ಷ. ಮುಂದಿನ 2027ರ ಏಕದಿನ ವಿಶ್ವಕಪ್ ವೇಳೆಗೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾಗೆ 40 ವಯಸ್ಸಾಗಿರಲಿದೆ.
27
2. ವಿರಾಟ್ ಕೊಹ್ಲಿ: 39 ವರ್ಷ
ಟೀಂ ಇಂಡಿಯಾ ರನ್ ಮಷೀನ್ ಹಾಗೂ 2023ರ ಏಕದಿನ ವಿಶ್ವಕಪ್ ಟೂರ್ನಿಯ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸಿದ ವಿರಾಟ್ ಕೊಹ್ಲಿಗೆ ಈಗ 35 ವರ್ಷಗಳಾಗಿದ್ದು, ಮುಂದಿನ ವಿಶ್ವಕಪ್ ಟೂರ್ನಿ ವೇಳೆಗೆ ಕೊಹ್ಲಿಗೆ 39 ವರ್ಷಗಳಾಗಿರಲಿದೆ.
37
3. ರವಿಚಂದ್ರನ್ ಅಶ್ವಿನ್: 41 ವರ್ಷ
ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೇವಲ ಒಂದು ಪಂದ್ಯವನ್ನಾಡಿದ್ದು, ಮುಂದಿನ ಏಕದಿನ ವಿಶ್ವಕಪ್ ಟೂರ್ನಿ ವೇಳೆಗೆ ಅಶ್ವಿನ್‌ಗೆ 41 ವರ್ಷ ವಯಸ್ಸಾಗಿರಲಿದೆ.
47
4. ರವೀಂದ್ರ ಜಡೇಜಾ: 38 ವರ್ಷ
ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ಜಡೇಜಾ, ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಭಾರತದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಜಡೇಜಾ ಅವರಿಗೆ 34 ವರ್ಷವಾಗಿದ್ದು, ಮುಂದಿನ ವಿಶ್ವಕಪ್ ವೇಳೆಗೆ ಜಡ್ಡುಗೆ 38 ವರ್ಷಗಳಾಗಿರಲಿದೆ.
57
5. ಸೂರ್ಯಕುಮಾರ್ ಯಾದವ್: 37 ವರ್ಷ
ಟೀಂ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಕಮಾಲ್ ಮಾಡಲು ವಿಫಲವಾಗಿದ್ದರು. 2027ರ ಏಕದಿನ ವಿಶ್ವಕಪ್ ಟೂರ್ನಿ ವೇಳೆಗೆ ಸೂರ್ಯನಿಗೆ 37 ವರ್ಷ ವಯಸ್ಸಾಗಿರಲಿದೆ.
67
6. ಮೊಹಮ್ಮದ್ ಶಮಿ: 37 ವರ್ಷ
ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ 2023ರ ವಿಶ್ವಕಪ್ ಟೂರ್ನಿಯಲ್ಲಿ ಮಾರಕ ದಾಳಿ ನಡೆಸುವ ಮೂಲಕ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಮುಂದಿನ ವಿಶ್ವಕಪ್ ವೇಳೆಗೆ ಶಮಿಗೆ 37 ವರ್ಷ ವಯಸ್ಸಾಗಿರಲಿದೆ.
77
ಈ ಮೇಲಿನ ಆರು ಅನುಭವಿ ಕ್ರಿಕೆಟಿಗರ ಪೈಕಿ ಯಾವೆಲ್ಲಾ ಕ್ರಿಕೆಟಿಗರು 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಲಿದ್ದಾರೆ ಎನ್ನುವುದನ್ನು ಕಾಮೆಂಟ್ ಮಾಡಿ.