5. ಶೇನ್ ವಾಟ್ಸನ್: 4 ಶತಕ
ಆಸ್ಟ್ರೇಲಿಯಾದ ಆಲ್ರೌಂಡರ್ ಶೇನ್ ವಾಟ್ಸನ್ 2008ರಿಂದ 2020ರ ಅವಧಿಯಲ್ಲಿ ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಪಂದ್ಯಗಳನ್ನಾಡಿದ್ದಾರೆ.
ಐಪಿಎಲ್‌ನಲ್ಲಿ ಒಟ್ಟು 145 ಪಂದ್ಯಗಳನ್ನಾಡಿರುವ ವಾಟ್ಸನ್ ಒಟ್ಟು 2,809 ರನ್ ಬಾರಿಸಿದ್ದಾರೆ. ಇದರ ಜತೆಗೆ ಈ ಚುಟುಕು ಕ್ರಿಕೆಟ್ ಸಂಗ್ರಾಮದಲ್ಲಿ 4 ಶತಕಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
4. ಕೆ ಎಲ್ ರಾಹುಲ್: 4 ಶತಕ
ಕನ್ನಡಿಗ ಕೆ ಎಲ್ ರಾಹುಲ್ ಐಪಿಎಲ್‌ನಲ್ಲಿ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದು, ಇದೀಗ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ.
ಕೆ ಎಲ್ ರಾಹುಲ್ ಇದುವರೆಗೂ 118 ಐಪಿಎಲ್ ಪಂದ್ಯಗಳನ್ನಾಡಿ 46.77ರ ಬ್ಯಾಟಿಂಗ್ ಸರಾಸರಿಯಲ್ಲಿ 4,163 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಶತಕಗಳನ್ನು ಸಿಡಿಸಿದ್ದಾರೆ ಬಲಗೈ ಬ್ಯಾಟರ್.
3. ಜೋಸ್ ಬಟ್ಲರ್: 5 ಶತಕ
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಚಿರಪರಿಚಿತ ಹೆಸರು ಹಾಗೂ ವಿದ್ವಂಸಕ ಬ್ಯಾಟರ್ ಎನಿಸಿಕೊಂಡಿರುವ ಜೋಸ್ ಬಟ್ಲರ್ 2013ರಿಂದೀಚೆಗೆ ಐಪಿಎಲ್‌ನ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಬಟ್ಲರ್, ಇದೀಗ ರಾಜಸ್ಥಾನ ರಾಯಲ್ಸ್‌ನ ಸ್ಟಾರ್ ಆಟಗಾರರಾಗಿದ್ದಾರೆ. ಬಟ್ಲರ್ 96 ಐಪಿಎಲ್ ಪಂದ್ಯಗಳನ್ನಾಡಿ 3223 ರನ್ ಬಾರಿಸಿದ್ದಾರೆ. ಇದರಲ್ಲಿ 5 ಶತಕಗಳು ಸೇರಿವೆ.
2. ಕ್ರಿಸ್ ಗೇಲ್: 6 ಶತಕ
ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಐಪಿಎಲ್ ಕಂಡ ಡೇಂಜರಸ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಗೇಲ್, ಕೆಕೆಆರ್, ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಪರ ರನ್ ಮಳೆಯನ್ನೇ ಹರಿಸಿದ್ದಾರೆ.
ದೈತ್ಯ ಕ್ರಿಕೆಟಿಗ ಗೇಲ್ ಒಟ್ಟು 142 ಐಪಿಎಲ್ ಪಂದ್ಯಗಳನ್ನಾಡಿ 4965 ರನ್ ಸಿಡಿಸಿದ್ದಾರೆ. ಈ ಪೈಕಿ ಒಟ್ಟು 6 ಶತಕ ಸಿಡಿಸಿದ್ದಾರೆ. ಆರು ಶತಕಗಳಲ್ಲಿ 5 ಶತಕಗಳು ಆರ್‌ಸಿಬಿ ತಂಡದಲ್ಲಿದ್ದಾಗ ಬಂದಿವೆ ಎನ್ನುವುದು ವಿಶೇಷ.
1. ವಿರಾಟ್ ಕೊಹ್ಲಿ: 7 ಶತಕ
ಐಪಿಎಲ್ ಚೊಚ್ಚಲ ಆವೃತ್ತಿಯಿಂದಲೂ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಜತೆಗೆ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ ಕೂಡಾ ಕೊಹ್ಲಿ ಹೆಸರಿನಲ್ಲಿದೆ.
ಆರ್‌ಸಿಬಿ ಪರ ಐಪಿಎಲ್‌ನಲ್ಲಿ 237 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 7263 ರನ್ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಐಪಿಎಲ್‌ನಲ್ಲಿ 7 ಶತಕ ಸಿಡಿಸುವ ಮೂಲಕ ಅತಿಹೆಚ್ಚು ಐಪಿಎಲ್ ಶತಕ ಸಿಡಿಸಿದ ಬ್ಯಾಟರ್ ಎನ್ನುವ ದಾಖಲೆ ನಿರ್ಮಿಸಿದ್ದಾರೆ.