ಕ್ರಿಕೆಟಿಗರ ಫೇವರೇಟ್ ಲಂಡನ್, ವಿರಾಟ್, ರೋಹಿತ್ ನಂತರ ಶುಬ್ಮನ್‌ ಗಿಲ್ ಸರದಿ!

First Published | Dec 5, 2023, 4:31 PM IST

ವಿಶ್ವಕಪ್‌ ನಂತರ  ಭಾರತದ ತಂಡದ ಕೆಲವು ಆಟಗಾರರು ವಿರಾಮದಲ್ಲಿದ್ದಾರೆ. ಆ ಆಟಗಾರರು ಹಾಲಿಡೇ ಎಂಜಾಯ್‌ ಮಾಡುವುದು ಕಂಡು ಬಂದಿದೆ. ಅಷ್ಷಕ್ಕೂ ಈ ಕ್ರಿಕೆಟಿಗರು ವಿಹಾರಕ್ಕಾಗಿ ಆಯ್ಡುಕೊಂಡಿರುವ ಸ್ಥಳ ಯಾವುದು ಗೊತ್ತಾ?

ಸೋಶಿಯಲ್‌ ಮೀಡಿಯಾದಲ್ಲಿ  ಹೊರಬಿದ್ದಿರುವ ಪೋಟೋಗಳನ್ನು ನೋಡಿದರೆ, ಲಂಡನ್ ಭಾರತೀಯ ಕ್ರಿಕೆಟಿಗರ ನೆಚ್ಚಿನ ರಜಾ ತಾಣವಾಗಿದೆ ಎಂದೆನಿಸುವುದು ಸುಳ್ಳಲ್ಲ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ  ನಂತರ ಈಗ ಯುವ ಆಟಗಾರ ಶಬ್ಮನ್‌ ಗಿಲ್ ಇಂಗ್ಲೆಂಡ್‌ನ ರಾಜಧಾನಿಯನ್ನು ತಲುಪುತ್ತಿದ್ದಾರೆ.

Tap to resize

ಇತ್ತೀಚೆಗಷ್ಟೇ ಲಂಡನ್‌ಗೆ ಹಾಲಿಡೇಗೆ ತೆರಳಿದ್ದ ಶುಭಮನ್ ಗಿಲ್ ಅವರು ತಮ್ಮ ಆಪ್ತ ಸ್ನೇಹಿತರ ಜೊತೆ ಫೋಟೋಗೆ ಪೋಸ್ ನೀಡಿದ್ದು ಫೋಟೋಗಳು ಸಖತ್‌ ವೈರಲ್‌ ಆಗಿವೆ.

 ದಕ್ಷಿಣ ಆಫ್ರಿಕಾದ ಪ್ರಮುಖ ಪ್ರವಾಸದ ಮೊದಲು ಚೇತರಿಸಿಕೊಳ್ಳಲು ಗಿಲ್ ತನ್ನ ಸ್ನೇಹಿತರೊಂದಿಗೆ ಲಂಡನ್‌ಗೆ ಪ್ರಯಾಣ ಬೆಳೆಸಿದರು. ಗಿಲ್ ಅವರ ರಜೆಯ ಕೆಲವು ಫೋಟೋಗಳನ್ನು ಅವರ ಸ್ನೇಹಿತರೊಬ್ಬರಾದ ರಾಘವ್ ಶರ್ಮಾ ಅವರು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.

2023 ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲಿನ ಸಂದರ್ಭದಲ್ಲಿ ಅವರು ಕೊನೆಯದಾಗಿ ಮೈದಾನದಲ್ಲಿ ಕಾಣಿಸಿಕೊಂಡರು.

ಗಿಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆರಂಭದಲ್ಲಿ, ಡೆಂಗ್ಯೂ ಕಾರಣದಿಂದಾಗಿ ಅವರು ಕೆಲವು ಪಂದ್ಯಗಳನ್ನು ಕಳೆದು ಕೊಳ್ಳಬೇಕಾಯಿತು. 

ಅದರ ನಂತರ,  ಒಂಬತ್ತು ಪಂದ್ಯಗಳಲ್ಲಿ ಭಾಗವಹಿಸಿದ ಗಿಲ್‌ ನಾಲ್ಕು ಅರ್ಧ ಶತಕಗಳನ್ನು ಒಳಗೊಂಡಂತೆ 44.50 ರ ಸರಾಸರಿಯಲ್ಲಿ 354 ರನ್ ಗಳಿಸಿದರು

ಹಲವಾರು ಇತರ ಆಟಗಾರರ ಜೊತೆಗೆ  ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ T20I ಸರಣಿಗೆ ಶುಭಮನ್ ಗಿಲ್‌ಗೆ ವಿಶ್ರಾಂತಿ ನೀಡಲಾಯಿತು,  ಮುಂದಿನ ವಾರ, ಭಾರತವು ದಕ್ಷಿಣ ಆಫ್ರಿಕಾದ ಎಲ್ಲಾ ಮಾದರಿಯ ಪ್ರವಾಸದಲ್ಲಿ ಅವರು ಮತ್ತೆ ಆಡಲಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿದ್ದಾರೆ, ನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ಲಂಡನ್‌ ಪ್ರವಾಸದ  ನಂತರ ಮುಂಬೈಗೆ ಮರಳಿದ್ದಾರೆ.

Latest Videos

click me!