ಐಪಿಎಲ್‌ನಲ್ಲಿ ಅಪ್ಪ ಸಚಿನ್ 40 ಕೋಟಿ ರೂ ಗಳಿಸಿದರೆ ಮಗ ಅರ್ಜುನ್ ತೆಂಡೂಲ್ಕರ್‌ಗೆ ಸಿಕ್ಕಿದ್ದೆಷ್ಟು?

Published : May 24, 2026, 04:15 PM IST

ಸಚಿನ್ ಪುತ್ರನಾದರೂ ಅರ್ಜುನ್ ತೆಂಡೂಲ್ಕರ್ ಈ ಬಾರಿಯ ಐಪಿಎಲ್‌ನಲ್ಲಿ ಕೊನೆಗೆ ಒಂದು ಚಾನ್ಸ್ ಪಡೆದುಕೊಂಡು ಮಿಂಚಿದ್ದಾರೆ. ಅರ್ಜುನ್ ಐಪಿಎಲ್ ಟೂರ್ನಿಯಿಂದ, ಪ್ರತಿ ಆವೃತ್ತಿಯಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ಫುಟ್ ಡಿಟೇಲ್.

PREV
15
ಕೊನೆಯ ಪಂದ್ಯದಲ್ಲಿ ಅವಕಾಶ

ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ 2026ರ ಐಪಿಎಲ್ ಟೂರ್ನಿಯಲ್ಲಿ ಕೊನೆಯ ಲೀಗ್ ಪಂದ್ಯದ ಮೂಲಕ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡರು. ಲಖನೌ ಸೂಪರ್ ಜೈಂಟ್ಸ್ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಅರ್ಜುನ್ ತೆಂಡಲ್ಕೂರ್‌ಗೆ ಅವಕಾಶ ನೀಡಿತ್ತು. ಈ ಪಂದ್ಯದಲ್ಲಿ ಅರ್ಜುನ್ 1 ವಿಕೆಟ್ ಕಬಳಿಸಿ 5 ರನ್ ಸಿಡಿಸಿದ್ದರು.

25
ಅರ್ಜುನ್ ತೆಂಡೂಲ್ಕರ್ ಲಖನೌ ಸ್ಯಾಲರಿ

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಅರ್ಜುನ್ ತೆಂಡೂಲ್ಕರ್ ಖರೀದಿಸಿತ್ತು. ಮೂಲ ಬೆಲೆ 20 ಲಕ್ಷ ರೂಪಾಯಿಗೆ ಅರ್ಜುನ್ ತೆಂಡೂಲ್ಕರ್ ಖರೀದಿಸಿತ್ತು. ಇತ್ತೀಚೆಗಷ್ಟೇ ಮದುವೆಯಾಗಿದ್ದ ಅರ್ಜುನ್ ತೆಂಡೂಲ್ಕರ್ ಒಂದು ಅವಕಾಶಕ್ಕಾಗಿ 13 ಪಂದ್ಯ ಕಾಯಬೇಕಾಯಿತು. ಅರ್ಜುನ್ ಪತ್ನಿ ಪ್ರತಿ ಪಂದ್ಯಕ್ಕೂ ಹಾಜರಾಗುತ್ತಿದ್ದರು. ಕೊನೆಗೂ ಪತ್ನಿ ಮುಂದೆ ಆಡೋ ಅವಕಾಶ ಅರ್ಜುನ್‌ಗೆ ಒಲಿದು ಬಂದಿತ್ತು.

35
ಅರ್ಜುನ್ ತೆಂಡೂಲ್ಕರ್ ಐಪಿಎಲ್ ಒಟ್ಟು ಸ್ಯಾಲರಿ

ಅರ್ಜುನ್ ತೆಂಡೂಲ್ಕರ್ 2021ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡರು. 2021ರಿಂದ 2025ರ ವರೆಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಅರ್ಜುನ್ ತೆಂಡೂಲ್ಕರ್, ಈ ಬಾರಿ ಲಖನೌ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡಿದ್ದರು. ಈ ಮೂಲಕ ಅರ್ಜುನ್ ಐಪಿಎಲ್‌ನಿಂದ ಗಳಿಸಿದ ಒಟ್ಟು ಸ್ಯಾಲರಿ 1.7 ಕೋಟಿ ರೂಪಾಯಿ

45
ಅರ್ಜುನ್ ತೆಂಡೂಲ್ಕರ್ ವೇತನ ಬ್ರೇಕ್ಅಪ್
  • 2021ರ ಐಪಿಎಲ್- 20 ಲಕ್ಷ ರೂ- ಮುಂಬೈ ಇಂಡಿಯನ್ಸ್
  • 2022ರ ಐಪಿಎಲ್- 30 ಲಕ್ಷ ರೂ- ಮುಂಬೈ ಇಂಡಿಯನ್ಸ್
  • 2023ರ ಐಪಿಎಲ್-30 ಲಕ್ಷ ರೂ- ಮುಂಬೈ ಇಂಡಿಯನ್ಸ್
  • 2024ರ ಐಪಿಎಲ್-30 ಲಕ್ಷ ರೂ-ಮುಂಬೈ ಇಂಡಿಯನ್ಸ್
  • 2025ರ ಐಪಿಎಲ್-30 ಲಕ್ಷ ರೂ-ಮುಂಬೈ ಇಂಡಿಯನ್ಸ್
  • 2026ರ ಐಪಿಎಲ್ -20 ಲಕ್ಷ ರೂ- ಲಖನೌ ಸೂಪರ್‌ಜೈಂಟ್ಸ್
55
ಸಚಿನ್ ತೆಂಡೂಲ್ಕರ್ ಐಪಿಎಲ್ ಸ್ಯಾಲರಿ

ಅಪ್ಪ ಸಚಿನ್ ತೆಂಡೂಲ್ಕರ್ ಐಪಿಎಲ್ ಟೂರ್ನಿಯಿಂದ ಬರೋಬ್ಬರಿ 40 ಕೋಟಿ ರೂಪಾಯಿ ಗಳಿಸಿದ್ದಾರೆ. 2008ರಿಂದ 2013ರ ವರೆಗೆ ಸಚಿನ್ ತೆಂಡೂಲ್ಕರ್ ಐಪಿಎಲ್ ಟೂರ್ನಿ ಆಡಿದ್ದರು. 2008-20ರ ವೇಳೆ ಪ್ರತಿ ಆವೃತ್ತಿಯಲ್ಲಿ ಸಚಿನ್ ತೆಂಡೂಲ್ಕರ್ 4.4 ಕೋಟಿ ರೂಪಾಯಿ ಪಡೆದ ಸಚಿನ್ ತೆಂಡೂಲ್ಕರ್, 2011 ರಿಂದ 2013ರ ವರಗೆ ಪ್ರತಿ ಆವೃತ್ತಿಯಿಂದ 8.28 ಕೋಟಿ ರೂಪಾಯಿ ಪಡೆದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories