IPL 2026 ಪ್ಲೇ ಆಫ್‌ ಲೆಕ್ಕಾಚಾರ ಸಿಂಪಲ್; ರಾಜಸ್ಥಾನ ರಾಯಲ್ಸ್ ಸೋತರೇ? ಪಂಜಾಬ್‌ಗಿಂತ ಕೆಕೆಆರ್‌ಗಿದೆ ಬೆಸ್ಟ್‌ ಚಾನ್ಸ್

Published : May 24, 2026, 03:15 PM IST

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತವು ಇದೀಗ ಕ್ಲೈಮ್ಯಾಕ್ಸ್‌ ಬಳಿ ಬಂದು ನಿಂತಿದೆ. ಇಂದಿನ ಪಂದ್ಯಗಳ ಬಳಿಕ ಈ ಬಾರಿ ನಾಲ್ಕನೇ ತಂಡವಾಗಿ ಐಪಿಎಲ್ ಪ್ಲೇ ಆಫ್ ಪ್ರವೇಶಿಸುವುದು ಯಾವ ತಂಡ ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ. ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ ನೋಡೋಣ ಬನ್ನಿ. 

PREV
16
3 ತಂಡಗಳ ನಡುವೆ ಒಂದು ಸ್ಥಾನಕ್ಕಾಗಿ ಫೈಟ್

2026ರ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಇನ್ನೊಂದು ಸ್ಥಾನಕ್ಕಾಗಿ ಪಂಜಾಬ್ ಕಿಂಗ್ಸ್‌, ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ನೇರ ಪೈಪೋಟಿಯಿದೆ.

26
ಇಂದು ಪ್ಲೇ ಆಫ್ ನಾಲ್ಕನೇ ತಂಡದ ಬಗ್ಗೆ ಸ್ಪಷ್ಟ ಚಿತ್ರಣ

ಸದ್ಯ ಪಂಜಾಬ್ ಕಿಂಗ್ಸ್‌ 15 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೇ, ರಾಜಸ್ಥಾನ ರಾಯಲ್ಸ್ 14 ಅಂಕಗಳಿಸಿದ್ದು, ಇಂದು ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯುತ್ತಿದೆ. ಇನ್ನು ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ 13 ಅಂಕ ಗಳಿಸಿದ್ದು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇಂದು ನಡೆಯಲಿರುವ ಪಂದ್ಯಗಳ ಫಲಿತಾಂಶಗಳು ಪ್ಲೇ ಆಫ್ ಪ್ರವೇಶಿಸುವ ನಾಲ್ಕನೇ ತಂಡದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

36
ರಾಜಸ್ಥಾನ ರಾಯಲ್ಸ್ ಗೆದ್ದರೇ ಎಲ್ಲಾ ಲೆಕ್ಕಾಚಾರ ತಲೆಕೆಳಗೆ

ಇಂದು ಮುಂಬೈ ಇಂಡಿಯನ್ಸ್ ಎದುರು ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಗೆಲುವು ಸಾಧಿಸಿದರೆ, ನೇರವಾಗಿ ರಾಜಸ್ಥಾನ ರಾಯಲ್ಸ್ ತಂಡವು 16 ಅಂಕಗಳೊಂದಿಗೆ ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ. ಒಂದು ವೇಳೆ ರಾಜಸ್ಥಾನ ರಾಯಲ್ಸ್ ತಂಡವು ಇಂದು ಸೋತರೇ ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ.

46
ರಾಜಸ್ಥಾನ ರಾಯಲ್ಸ್ ಸೋತರೇ ಕೆಕೆಆರ್‌-ಪಂಜಾಬ್‌ಗೆ ಚಾನ್ಸ್!

ಒಂದು ವೇಳೆ ರಾಜಸ್ಥಾನ ರಾಯಲ್ಸ್ ತಂಡವು ಸೋಲು ಅನುಭವಿಸಿದರೆ, ಪ್ಲೇ ಆಫ್‌ನ ನಾಲ್ಕನೇ ಸ್ಥಾನಕ್ಕಾಗಿ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ನೇರ ಪೈಪೋಟಿ ಏರ್ಪಡಲಿದೆ. ಒಂದು ವೇಳೆ ಇಂದು ರಾಜಸ್ಥಾನ ರಾಯಲ್ಸ್ ಸೋತು, ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಕೋಲ್ಕತಾ ನೈಟ್ ರೈಡರ್ಸ್ ತಂಡವು ಸೋಲು ಅನುಭವಿಸಿದರೆ, ಪಂಜಾಬ್ ಕಿಂಗ್ಸ್‌ ತಂಡವು ಪ್ಲೇ ಆಫ್‌ಗೇರಲಿದೆ.

56
ಕೆಕೆಆರ್‌ಗಿಂತ ಪಂಜಾಬ್ ನೆಟ್‌ ರನ್‌ರೇಟ್ ಉತ್ತಮವಾಗಿದೆ

ಇನ್ನು ಕೆಕೆಆರ್‌ಗಿಂತ ಪಂಜಾಬ್‌ ನೆಟ್‌ರೇಟ್ ಹೆಚ್ಚಿದೆ. ಹೀಗಾಗಿ ಪಂಜಾಬ್ ತಂಡದ ನೆಟ್‌ ರನ್‌ರೇಟ್ ಹಿಂದಿಕ್ಕಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಪ್ಲೇ ಆಫ್‌ಗೇರಬೇಕಿದ್ದರೇ, ಡೆಲ್ಲಿ ಎದುರು ಭಾರೀ ಅಂತರದ ಗೆಲುವಿನ ಅಗತ್ಯವಿದೆ.

66
KKR ತಂಡ ಪ್ಲೇ ಆಫ್‌ ಲೆಕ್ಕಾಚಾರ ಏನು?

ಪಂಜಾಬ್ ಹಿಂದಿಕ್ಕಿ ಕೆಕೆಆರ್ ಪ್ಲೇ ಆಫ್‌ಗೇರಬೇಕಿದ್ದರೇ, ಡೆಲ್ಲಿ ಕ್ಯಾಪಿಟಲ್ಸ್ ಎದುರು ಕೆಕೆಆರ್ ಕನಿಷ್ಠ 77 ರನ್ ಅಂತರದ ಗೆಲುವು ಸಾಧಿಸಬೇಕಿದೆ. ಇಲ್ಲವೇ 180+ ರನ್ ಚೇಸ್ ಮಾಡಬೇಕಿದ್ದರೇ ಕನಿಷ್ಠ 12.4 ಓವರ್‌ಗಳಲ್ಲಿ ಕೆಕೆಆರ್ ಗುರಿ ರೀಚ್ ಆಗಬೇಕಿದೆ. ಹೀಗಾದಲ್ಲಿ ಮಾತ್ರ ಕೆಕೆಆರ್ ಪ್ಲೇ ಆಫ್‌ಗೇರಲು ಸಾಧ್ಯವಾಗಲಿದೆ. ಒಂದು ವೇಳೆ ಕೆಕೆಆರ್ ಡೆಲ್ಲಿ ಎದುರು ಸಣ್ಣ ಅಂತರದ ಗೆಲುವು ಸಾಧಿಸಿದರೆ, ಪಂಜಾಬ್ ನೆಟ್‌ ರನ್‌ರೇಟ್‌ ಆಧಾರದಲ್ಲಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories