ಪಾಕಿಸ್ತಾನ ಜೊತೆ ನೋ ಹ್ಯಾಂಡ್‌ಶೇಕ್ ಮುಂದುವರಿದಿದೆ. ಇದೀಗ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಹರ್ಮನ್‌ಪ್ರೀತ್ ಕೌರ್ , ಪಾಕ್ ನಾಯಕಿ ಜೊತೆ ಹ್ಯಾಂಡ್‌ಶೇಕ್ ನಿರಾಕರಿಸಿ ತೆರಳಿದ್ದಾರೆ.
ಟಿ20 ಮಹಿಳಾ ವಿಶ್ವಕಪ್ ಟೂರ್ನಿಯ ಭಾರತ ಪಾಕಿಸ್ತಾನ ಪಂದ್ಯದಲ್ಲಿ ನೋ ಹ್ಯಾಂಡ್‌ಶೇಕ್ ಘಟನೆ ಮರುಕಳಿಸಿದೆ. ಪೆಹಲ್ಗಾಂ ದಾಳಿ ಬಳಿಕ ಪಾಕಿಸ್ತಾನ ಜೊತೆಗಿನ ಎಲ್ಲಾ ವ್ಯವಹಾರ ಬಂದ್ ಆಗಿದೆ. ಕೇವಲ ಐಸಿಸಿ ವೇದಿಕೆ, ಒಲಿಂಪಿಕ್ಸ್, ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಮಾತ್ರ ಭಾರತ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಇದೀಗ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ದ್ವೇಷ ಮುಂದುವರಿದಿದೆ.
26
ಟಾಸ್ ಬಳಿಕ ಹ್ಯಾಂಡ್ ಶೇಕ್ ಮಾಡದೇ ತೆರಳಿದ ಕೌರ್
ಭಾರತ ಹಾಗೂ ಪಾಕಿಸ್ತಾನ ಪಂದ್ಯದಲ್ಲಿ ಭಾರತ ಮಹಿಳಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್ ಗೆದ್ದ ಬಳಿಕ ಸಾಮಾನ್ಯವಾಗಿ ಹ್ಯಾಂಡ್‌ಶೇಕ್ ಮಾಡಲಾಗುತ್ತದೆ. ಆದರೆ ಹರ್ಮನ್‌ಪ್ರೀತ್ ಕೌರ್ ತಮ್ಮ ನಿರ್ಧಾರ ತಿಳಿಸಿದ ಬಳಿಕ ನೇರವಾಗಿ ಪೆವಿಲಿಯನ್‌ನತ್ತ ತೆರಳಿದ್ದಾರೆ. ಪಾಕಿಸ್ತಾನ ನಾಯಕಿ ಫತಿಮಾ ಸನಾಗೆ ಶೇಕ್‌ಹ್ಯಾಂಡ್ ತಪ್ಪಿಸಿ ತೆರಳಿಸಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲೂ ಹ್ಯಾಂಡ್ ಶೇಕ್ ನಿರಾಕರಿಸಿದ್ದ ಕೌರ್
ಶ್ರೀಲಂಕಾದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಈ ವೇಳೆಯೂ ಹರ್ಮನ್‌ಪ್ರೀತ್ ಕೌರ್ ಪಾಕಿಸ್ತಾನ ನಾಯಕಿ ಜೊತೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ್ದರು. ಇದೀಗ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲೂ ಕೌರ್ ಗಟ್ಟಿ ನಿಲುವು ತೆಗೆದುಕೊಂಡಿದ್ದಾರೆ.
ಹ್ಯಾಂಡ್ ಶೇಕ್, ಜಿದ್ದಾಜಿದ್ದಿ, ಗಡಿ ಸಮಸ್ಯೆಗಳ ಕುರಿತು ಕೇಳಿದ ಪ್ರಶ್ನೆಗೆ ಹರ್ಮನ್‌ಪ್ರೀತ್ ಖಡಕ್ ಉತ್ತರ ನೀಡಿದ್ದರು. ಪಂದ್ಯಕ್ಕೂ ಮೊದಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೌರ್, ನಾವು ಇಲ್ಲಿಗೆ ಟಿ20 ವಿಶ್ವಕಪ್ ಟೂರ್ನಿ ಆಡಲು ಬಂದಿದ್ದೇವೆ. ಕ್ರಿಕೆಟ್ ಬಿಟ್ಟು ಬೇರೇನು ಮಾತನಾಡುವುದಿಲ್ಲ ಎಂದು ಖಡಕ್ ಉತ್ತರ ನೀಡಿದ್ದರು.
56
ಸೂರ್ಯಕುಮಾರ್ ಯಾದವ್ ಆರಂಭಿಸಿದ ಸಂಪ್ರದಾಯ
ಪೆಹಲ್ಗಾಂ ದಾಳಿ ಬಳಿಕ ಭಾರತ ಆಪರೇಶನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿತ್ತು. ಇದರ ಬೆನ್ನಲ್ಲೇ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾಗಿತ್ತು. ದುಬೈನಲ್ಲಿ ನಡೆದ ಈ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲ ಬಾರಿಗೆ ಪಾಕಿಸ್ತಾನ ನಾಯಕನಿಗೆ ಹ್ಯಾಂಡ್ ಶೇಕ್ ನಿರಾಕರಿಸಿದ್ದರು. ಇದು ಭಾರಿ ಸುದ್ದಿಯಾಗಿತ್ತು.
66
ಎಲ್ಲಾ ಕ್ರೀಡೆಯಲ್ಲಿ ಮುಂದುವರಿದೆ ನೋ ಹ್ಯಾಂಡ್ ಶೇಕ್
ಸೂರ್ಯಕುಮಾರ್ ಯಾದವ್ ಹೊರಹಾಕಿದ ಈ ಆಕ್ರೋಶ, ಪಾಕಿಸ್ತಾನ ವಿರುದ್ದ ಎಲ್ಲಾ ಕ್ರೀಡೆಯಲ್ಲೂ ಕಂಡಬಂದಿತ್ತು. ಫುಟ್ಬಾಲ್ ಸೇರಿದಂತೆ ಇತರ ಕ್ರೀಡೆಗಳಲ್ಲೂ ಪಾಕಿಸ್ತಾನ ಜೊತೆ ಶೇಕ್‌ಹ್ಯಾಂಡ್ ಮಾಡಲು ಭಾರತ ನಿರಾಕರಿಸಿತ್ತು. ಇದೀಗ ಹರ್ಮನ್‌ಪ್ರೀತ್ ಕೌರ್ ಕೂಡ ತಮ್ಮ ನಿಲುವು ಬದಲಿಸಿಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.