ಪಾಕಿಸ್ತಾನ ವಿರುದ್ದ ಟಿ20 ಮಹಿಳಾ ವಿಶ್ವಕಪ್ ಹೋರಾಟಕ್ಕೆ ಸಂಭಾವ್ಯ ಭಾರತ ಪ್ಲೇಯಿಂಗ್ 11 ಪ್ರಕಟ

Published : Jun 14, 2026, 05:58 PM IST

ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿಂದು ಬಿಗ್ ಮ್ಯಾಚ್. ಭಾರತ ಹಾಗೂ ಪಾಕಿಸ್ತಾನದ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ಯಾರಿಗಿದೆ ಚಾನ್ಸ್, ಪಂದ್ಯ ಆರಂಭ ಎಷ್ಟು ಗಂಟೆಗೆ, ಎಲ್ಲಿ ಲೈವ್ ಲಭ್ಯ? 

PREV
15
ಭಾರತ ಪಾಕಿಸ್ತಾನ ಮುಖಾಮುಖಿ

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಭಾರತ ಮಹಿಳಾ ತಂಡ ಭರ್ಜರಿ ಶುಭಾರಂಭದ ವಿಶ್ವಾಸದಲ್ಲಿದೆ. ಇಂದು (ಜೂ.14) ಸಂಜೆ 7ಕ್ಕೆ ಪಂದ್ಯ ಆರಂಭಗೊಳ್ಳುತ್ತಿದೆ.

25
ಭಾರತ ಪ್ಲೇಯಿಂಗ್ 11 (ಸಂಭಾವ್ಯ)

ಇಂದಿನ ಪಂದ್ಯಕ್ಕೆ ಭಾರತ ಮಹಿಳಾ ತಂಡದ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ

ಸ್ಮೃತಿ ಮಂಧನಾ, ಶೆಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೇಮಿಯ ರೋಡಿಗ್ರಸ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ರಿಚಾ ಘೋಷ್, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ/ ರೆಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೀ ಚರ್ನಿ, ನಂದಿನಿ ಶರ್ಮಾ

35
ಲೈವ್ ವೀಕ್ಷಣೆ ಎಲ್ಲಿ?

ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ರೋಚಕ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ ಪ್ರಸಾರ ಮಾಡುತ್ತಿದೆ. ಇನ್ನು ಜಿಯೋಸ್ಟಾರ್ ಮೂಲಕ ಲೈವ್ ಸ್ಟ್ರೀಮ್ ವೀಕ್ಷಣೆಗೆ ಲಭ್ಯವಿದೆ. ರೋಚಕ ಹೋರಾಟ ವೀಕ್ಷಿಸಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಪಾಕಿಸ್ತಾನ ವಿರುದ್ಧ ಯಾವುದೇ ಹೋರಾಟವಾದರೂ ಗೆಲುವು ಅನಿವಾರ್ಯ. ಅಭಿಮಾನಿಗಳ ಈಗಾಗಲೇ ಸಂಭ್ರಮ ಆಚರಿಸುತ್ತಿದ್ದಾರೆ.

45
ಭಾರತ ಮಹಿಳಾ ತಂಡಕ್ಕೆ ಕಠಿಣ ಸವಾಲು

ಭಾರತ ಹಾಗೂ ಪಾಕಿಸ್ತಾನಕ್ಕೆ ಇದು ಮೊದಲ ಪಂದ್ಯ. ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಭಾರತ ಮಹಿಳಾ ತಂಡ ಇಂಗ್ಲೆಂಡ್ ನೆಲದಲ್ಲಿ ಅಬ್ಬರಿಸು ವಿಶ್ವಾಸದಲ್ಲಿದೆ. ಭಾರತದ ಗುಂಪಿನಲ್ಲಿ ಬಲಿಷ್ಠ 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ, ಕಳೆದ ಬಾರಿ ರನ್ನರ್ ಅಪ್ ದಕ್ಷಿಣಾ ಆಫ್ರಿಕಾ ಕೂಡ ಇದೆ. ಹೀಗಾಗಿ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ.

55
ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ 11

ಮುನೀಬಾ ಅಲಿ, ಗುಲ್ ಫೆರೋಜ್, ಆಯೇಶಾ ಝಾಫರ್, ಸೈರಾ ಜಬೀನ್, ರಮೀನ್ ಶಮೀಮ್, ಅಲಿಯಾ ರಿಯಾಜ್, ಫಾತಿಮಾ ಸನಾ (ನಾಯಕ), ಇಯಮ್ ಫಾತಿಮಾ, ಡಿಯಾನ ಬೈಗ್, ನಶ್ರಾ ಸಂದು, ಸದಿಯಾ ಇಕ್ಬಾಲ್

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories