ಸಾಲ ಹೆಚ್ಚಾಗಿ ಮನೆ ಮಾರಾಟ, ಐಪಿಎಲ್‌ ಆಡಿ ಕುಟುಂಬವನ್ನು ಸಾಲದಿಂದ ಮುಕ್ತಿಗೊಳಿಸಿದ ಯುವ ಕ್ರಿಕೆಟಿಗ

Published : Jun 03, 2026, 11:07 PM IST

ಐಪಿಎಲ್ ಟೂರ್ನಿಯಲ್ಲಿ ಮಿಂಚಿದ ಯುವ ಕ್ರಿಕೆಟಿಗನ ಕರುಣಾಜನಕ ಕತೆ ಸ್ಪೂರ್ತಿ ನೀಡಲಿದೆ. ಸಾಲದಲ್ಲಿ ಮನೆ ಮಾರಿದ್ದ ಕುಟುಂಬ ಕೊನೆಗೆ ಐಪಿಎಲ್ ಮೂಲಕ ಮಿಂಚಿ ಇದೀಗ ಸಾಲ ತೀರಿಸುವ ಸಂಭ್ರಮದಲ್ಲಿದ್ದಾನೆ.

PREV
16
ಮೈತುಂಬಾ ಸಾಲದಲ್ಲೇ ಆಡಿದ್ದ ಯುವ ಕ್ರಿಕೆಟಿಗ

ಐಪಿಎಲ್ ಟೂರ್ನಿ ಹಲವು ಯುವ ಕ್ರಿಕೆಟಿಗರಿಗೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸುವ, ಪ್ರತಿಭೆ ಸಾಬೀತುಪಡಿಸುವ ವೇದಿಕೆ. ಇದರ ಜೊತೆಗೆ ಆರ್ಥಿಕವಾಗಿಯೂ ಸದೃಢರಾಗುವ, ತಮ್ಮ ಕನಸು ಪೂರೈಸುವ ವೇದಿಕೆಯಾಗಿದೆ. ಇದೇ ರೀತಿ ಮೈತುಂಬಾ ಸಾಲದ ನಡುವೆಯೂ ಪ್ರತಿಭೆ ತೋರಿ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ ಲಖನೌ ಸೂಪರ್ ಜೈಂಟ್ಸ್ ತಂಡದ ಮುಕುಲ್ ಚೌಧರಿಯ ಸ್ಪೂರ್ತಿಯ ಕತೆ ಇಲ್ಲಿದೆ.

26
ಸಿಕ್ಸರ್ ಮೂಲಕ ಮಿಂಚಿದ ಕ್ರಿಕೆಟಿಗ

ಕೆಕೆಆರ್ ವಿರುದ್ದ 27 ಎಸೆತದಲ್ಲಿ ಮುಕುಲ್ ಚೌಧರಿ ಸಿಕ್ಸರ್ ಮೂಲಕ 57 ರನ್ ಸಿಡಿಸಿ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಈ ಮೂಲಕ ಯುವ ಕ್ರಿಕೆಟಿಗ ಕೆಚ್ಚೆದೆಯ ಹೋರಾಟಕ್ಕೆ ಎಲ್ಲರು ಮೆಚ್ಚುಗೆ ಸೂಚಿಸಿದ್ದರು. ಆದರೆ ಈ ಯವ ಕ್ರಿಕೆಟಿಗ ಹಾಗೂ ಆತನ ಕುಟುಂಬ ಸಾಲದಲ್ಲಿ ಮುಳುಗಿತ್ತು.

36
ಮನೆ ಸಾಲ, ನಿವೇಶನ ಸಾಲ

ಮುಕುಲ್ ಚೌಧರಿ ತಂದೆ ಶಿಕ್ಷಕ, ಅಜ್ಜ ನಿವೃತ್ತ ಸೈನಿಕ. ಸಾಲ ಹೆಚ್ಚಾದಾಗ ಇದ್ದ ಮನೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಬಳಿಕ ನಿವೃತ್ತ ಸೈನಿಕ ನೀಡಿದ ಹಣದಿಂದ ಸಣ್ಣ ನಿವೇಷನ ಖರೀದಿಸಿ ಸಾಲ ಮಾಡಿ ಮನೆ ಕಟ್ಟಿದ್ದರು. ಇದರ ಸಾಲ ತೀರಿಸಲು ಆಗದೆ ಮುಕುಲ್ ಚೌಧರಿ ಕುಟುಂಬ ಸಂಕಷ್ಟದಲ್ಲಿ ಸಿಲುಕಿತ್ತು. ಜಾಗ ಖರೀದಿ, ಮನೆ ಸಾಲ ಹೀಗೆ ಎಲ್ಲಾ ಸಾಲಗಳು ಕುಟುಂಬದ ಆತಂಕ ಹೆಚ್ಚಿಸಿತ್ತು

46
ಸ್ಯಾಲರಿ ಪಡೆದ ಮುಕುಲ್ ಚೌಧರಿ

ಸಾಲದ ನಡುವೆ ಮುಕುಲ್ ಚೌಧರಿ ಕ್ರಿಕೆಟ್ ಆಟ ಬಿಟ್ಟಿರಲಿಲ್ಲ. ಲಖನೌ ಸೂಪರ್ ಜೈಂಟ್ಸ್ 2.6 ಕೋಟಿಗೆ ಮುಕುಲ್ ಚೌಧರಿಯನ್ನು ಖರೀದಿಸಿತ್ತು. ಲಖನೌ ಸೂಪರ್ ಜೈಂಟ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಆದರೆ ಮುಕುಲ್ ಚೌಧರಿ ಹೋರಾಟ ಅತ್ಯುತ್ತಮವಾಗಿತ್ತು. ಇದೀಗ ಮುಕುಲ್ ಚೌಧರಿಗೆ ಲಖನೌ ತಂಡ ಸ್ಯಾಲರಿ ನೀಡಿದೆ.

56
ಎಲ್ಲಾ ಸಾಲದಿಂದ ಮುಕ್ತಿ

ಐಪಿಎಲ್ ಮುಗಿಸಿ ಮನೆಗೆ ಮರಳಿದ ಮುಕುಲ್ ಚೌಧರಿ ಪ್ರದರ್ಶನ ಜೊತೆಗೆ ಕುಟುಂಬ ಸಾಲದಿಂದ ಮುಕ್ತಿಗೊಳ್ಳುತ್ತಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಈಗ ನಾವು ಸಾಲದಿಂದ ಸಂಪೂರ್ಣ ಮುಕ್ತಿಯಾಗುತ್ತಿದ್ದೇವೆ. ಇದಕ್ಕಿಂದ ದೊಡ್ಡ ಖುಷಿ ಇನ್ನೇನಿದೆ ಎಂದು ಮುಕುಲ್ ಚೌಧರಿ ಹೇಳಿದ್ದಾರೆ.

66
ಸಾಲದ ದಿನಗಳಲ್ಲಿ ಸಂಕಷ್ಟ

ಐಪಿಎಲ್ ಟೂರ್ನಿ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ನಾನು ಯಾವತ್ತು ಋಣಿಯಾಗಿದ್ದೇನೆ. ನನ್ನ ಪ್ರತಿಭಗೆ ಅವಕಾಶ ನೀಡಿದರು. ಇದರಿಂದ ನನ್ನ ಹಾಗೂ ಕುಟುಂಬದ ಸಾಲವೂ ಮುಗಿಯುತ್ತಿದೆ. ಸಾಲದ ಹೊರೆಯಲ್ಲಿ ಸಂಕಷ್ಟದ ದಿನಗಳನ್ನು ಕಳೆದಿದ್ದೇನೆ ಎಂದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories