ಆರ್‌ಸಿಬಿಗೆ 2ನೇ ಟ್ರೋಫಿ ಗೆಲ್ಲಿಸಿಕೊಟ್ಟ ಮೂರೇ ದಿನಕ್ಕೆ ಟಿ20 ತಂಡದ ನಾಯಕನಾದ ರಜತ್ ಪಾಟಿದಾರ್

Published : Jun 03, 2026, 10:09 PM IST

ಆರ್‌ಸಿಬಿ ತಂಡಕ್ಕೆ ಸತತ 2ನೇ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರಜತ್ ಪಾಟೀದಾರ್ ಮತ್ತೊಂದು ಮಹತ್ವದ ಜವಾಬ್ದಾರಿ ನಿರ್ವಹಿಸಬೇಕಿದೆ. ಐಪಿಎಲ್ ಫೈನಲ್ ಬಳಿಕ ಮೂರೇ ದಿನದಲ್ಲಿ ಟಿ20 ನಾಯಕನಾಗಿ ತಂಡ ಸೇರಿಕೊಂಡಿದ್ದಾರೆ. 

PREV
16
ಆರ್‌ಸಿಬಿ ಯಶಸ್ವಿನ ನಾಯಕನಿಗೆ ಮತ್ತೊಂದು ಜವಾಬ್ದಾರಿ

ಆರ್‌ಸಿಬಿ ಯಶಸ್ವಿ ನಾಯಕ ರಜತ್ ಪಾಟಿದಾರ್ ಆರ್‌ಸಿಬಿ ತಂಡದ ಟ್ರೋಫಿ ಬರ ನೀಗಿಸಿದ್ದು ಮಾತ್ರವಲ್ಲ, ಸತತ 2ನೇ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ. 2025 ಹಾಗೂ 2026ರಲ್ಲಿ ಸತತ 2 ಬಾರಿ ಆರ್‌ಸಿಬಿ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. ಇದೀಗ ಟ್ರೋಫಿ ಗೆಲ್ಲಿಸಿಕೊಟ್ಟ ಮೂರೇ ದಿನಕ್ಕೆ ಮತ್ತೊಂದು ನಾಯಕತ್ವ ಜವಾಬ್ದಾರಿ ನಿರ್ವಹಿಸಬೇಕಿದೆ.

26
ಟಿ20 ತಂಡದ ನಾಯಕನಾಗಿ ಸೇರಿಕೊಂಡ ರಜತ್ ಪಾಟೀದಾರ್

ರಜತ್ ಪಾಟೀದಾರ್ ಟೀಂ ಇಂಡಿಯಾ ಸೇರಿಕೊಳ್ಳಬೇಕು ಅನ್ನೋ ಆಗ್ರಹಗಳು ಒಂದಡೆಯಾದರೆ, ಹಲವು ಮಾಜಿ ಕ್ರಿಕೆಟಿಗರು ಪಾಟೀದಾರ್‌ಗೆ ಟೀಂ ಇಂಡಿಯಾ ಅವಕಾಶ ಕುರಿತು ಮಾತನಾಡಿದ್ದಾರೆ. ಇದರ ನಡುವೆ ಆರ್‌ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್ ಇದೀಗ ಮಧ್ಯಪ್ರದೇಶ ಲೀಗ್ ಟೂರ್ನಿಯಲ್ಲಿ ಗ್ವಾಲಿಯರ್ ಚೀತಾಸ್ ತಂಡದ ನಾಯಕನಾಗಿ ತಂಡ ಮುನ್ನಡೆಸುತ್ತಿದ್ದಾರೆ. ಐಪಿಎಲ್ ಮುಗಿಸಿ ನೇರವಾಗಿ ಮಧ್ಯಪ್ರದೇಶ ಲೀಗ್ ಟೂರ್ನಿ ಸೇರಿಕೊಂಡಿರುವ ರಜತ್ ಪಾಟೀದಾರ್ ಮೇಲೆ ಗ್ವಾಲಿಯರ್ ತಂಡವನ್ನು ಚಾಂಪಿಯನ್ ಮಾಡುವ ಹೊಸ ಜವಾಬ್ದಾರಿಯೂ ಇದೆ.

36
ಸಂಚಲನ ಸೃಷ್ಟಿಸಲು ಸಜ್ಜಾಜ ಪಾಟಿದಾರ್

ಮಧ್ಯಪ್ರದೇಶ ಲೀಗ್ ಟೂರ್ನಿ ಸೇರಿಕೊಂಡ ರಜತ್ ಪಾಟೀದಾರ್ ಇದೀಗ ಅನುಭವಿ ಹಾಗೂ ಯುವ ಆಟಗಾರರ ಗ್ವಾಲಿಯರ್ ಚೀತಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಆರ್‌ಸಿಬಿಯಲ್ಲಿ ಸ್ಟಾರ್ ಕ್ರಿಕೆಟಿಗರನ್ನೇ ಮುನ್ನಡೆಸಿ ಯಶಶ್ವಿಯಾದ ರಜತ್ ಪಾಟೀದಾರ್ ಇದೀಗ ದೇಸಿ ಲೀಗ್ ಟೂರ್ನಿಯಲ್ಲಿ ಸಂಚಲನ ಸೃಷ್ಟಿಸಲು ರೆಡಿಯಾಗಿದ್ದಾರೆ.

46
ಕೂಲ್ ಕ್ಯಾಪ್ಟನ್ ಎಂದ ದಿನೇಶ್ ಕಾರ್ತಿಕ್

ರಜತ್ ಪಾಟೀದಾರ್ ತಾಳ್ಮೆಯ ನಾಯಕ ಎಂದು ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಸಂದರ್ಭವನ್ನು ತಾಳ್ಮೆಯಿಂದ ಅರ್ಥಮಾಡಿಕೊಂಡು ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಾಟೀದಾರ್ ಈ ಗುಣಗಳೋ ಸತತ 2 ಬಾರಿ ತಂಡವನ್ನು ಚಾಂಪಿಯನ್ ಮಾಡಿದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

56
ಧೋನಿ,ರೋಹಿತ್ ಸಾಲಿನಲ್ಲಿ ಪಾಟಿದಾರ್

ಐಪಿಎಲ್ ಟೂರ್ನಿಯಲ್ಲಿ ಹಲವು ಯಶಸ್ವಿ ನಾಯಕರಿದ್ದಾರೆ. ವಿಶೇಷ ಅಂದರೆ ರಜತ್ ಪಾಟೀದಾರ್ ಇದೀಗ ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾ ಸಾಲಿಗೆ ಸೇರಿಕೊಂಡಿದ್ದಾರೆ. ಸತತ 2 ಟ್ರೋಫಿ ಗೆದ್ದ ನಾಯಕರ ಪೈಕಿ ಧೋನಿ, ರೋಹಿತ್ ಇದೀಗ ರಜತ್ ಪಾಟೀದಾರ್ ಸೇರಿಕೊಂಡಿದ್ದಾರೆ.

66
ರಜತ್ ನಾಯಕನಾದ ಬಳಿಕ ಟ್ರೋಫಿ ಸಾಧನೆ

ಆರ್‌ಸಿಬಿ ಆರಂಭಿಕ ಸೀಸನ್‌ನಿಂದ 2024ರ ವರೆಗೆ ದಿಗ್ಗಜರು ತಂಡವನ್ನು ಮುನ್ನಡೆಸಿದ್ದಾರೆ. ವಿರಾಟ್ ಕೊಹ್ಲಿ, ಡೇನಿಯಲ್ ವೆಟೋರಿ, ಅನಿಲ್ ಕುಂಬ್ಳೆ, ಕಿವಿನ್ ಪೀಟರ್ಸನ್ ಸೇರಿದಂತೆ ಹಲವರು ತಂಡ ಮುನ್ನಡೆಸಿದ್ದಾರೆ. ಆದರೆ ರಜತ್ ಪಾಟದಾರ್ ನಾಯಕನಾದ ಬಳಿಕ ಆರ್‌ಸಿಬಿ ಟ್ರೋಫಿ ಕೊರತೆ ನೀಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories