ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಸೂರ್ಯಕುಮಾರ್ ಕೈಬಿಟ್ಟ ಬಿಸಿಸಿಐ, ಸ್ಫೋಟಕ ವರದಿ ಬಯಲು

Published : Jun 03, 2026, 10:34 PM IST

ಟೀಂ ಇಂಡಿಯಾ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್‌ಗೆ ಕೊಕ್ ನೀಡಿದ್ದು ಮಾತ್ರವಲ್ಲ, ಟಿ20 ತಂಡಕ್ಕೆ ಆಟಗಾರನಾಗಿಯೂ ಆಯ್ಕೆ ಮಾಡುವ ಸಾಧ್ಯತೆಗಳಿಲ್ಲ. ಈ ಕುರಿತು ಸ್ಫೋಟಕ ವರದಿಯೊಂದು ಬಹಿರಂಗವಾಗಿದೆ. 

PREV
16
ಸೂರ್ಯಕುಮಾರ್ ಯಾದವ್‌ಗೆ ಕೊಕ್

ಐಪಿಎಲ್ ಟೂರ್ನಿ ಮುಕ್ತಯಾಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಆಯ್ಕೆ, ನಾಯಕತ್ವ, ಪ್ಲೇಯಿಂಗ್‌ನಲ್ಲೂ ಭಾರಿ ಬದಲಾವಣೆಯಾಗುತ್ತಿದೆ. ಇದೀಗ ಟಿ20 ನಾಯಕತ್ವದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಬಿಸಿಸಿಐ ಕೈಬಿಟ್ಟಿದೆ ಅನ್ನೋ ಮಾಹಿತಿ ಬಯಲಾಗಿದೆ. ಇಷ್ಟೇ ಅಲ್ಲ ಆಟಗಾರನಾಗಿಯೂ ಸೂರ್ಯಕುಮಾರ್ ಯಾದವ್ ಅವರನ್ನು ಪರಿಗಣಿಸದೇ ಇರಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವರದಿಯಾಗಿದೆ.

26
ಆಯ್ಕೆ ಸಮತಿಗೆ ಕೆಂಗಣ್ಣಿಗೆ ಗುರಿಯಾದ ಸೂರ್ಯಕುಮಾರ್

ರೋಹಿತ್ ಶರ್ಮಾ ನಿವೃತ್ತಿ ಬಳಿಕ 2024ರಲ್ಲಿ ಸೂರ್ಯಕುಮಾರ್ ಯಾದವ್‌ಗೆ ಟೀಂ ಇಂಡಿಯಾದ ಟಿ20 ನಾಯಕತ್ವ ನೀಡಲಾಗಿತ್ತು. 2026ರಲ್ಲಿ ಟಿ20 ಟ್ರೋಫಿ ಗೆದ್ದ ಭಾರತ ಐತಿಹಾಸಿಕ ಸಾಧನೆ ಮಾಡಿತ್ತು. ಆದರೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಇದೀಗ ಐಪಿಎಲ್‌ನಲ್ಲಿ ಸಂಪೂರ್ಣ ಕಳಪೆಯಾಗಿ ಆಯ್ಕೆ ಸಮಿತಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

36
ಹೊಸ ನಾಯಕನ ಅಡಿಯಲ್ಲಿ ಟಿ20

ಬಿಸಿಸಿಐ ಆಯ್ಕೆ ಸಮಿತಿ ಈಗಾಗಲೇ ಕೋಚ್ ಗೌತಮ್ ಗಂಭೀರ ಜೊತೆ ಈ ಕುರಿತು ಮಾತುಕತೆ ನಡೆಸಿದೆ. ಮುಂಬುರವ ಟಿ20 ಟೂರ್ನಿಗಳಲ್ಲಿ ಭಾರತ ತಂಡ ಹೊಸ ನಾಯಕತ್ವದಡಿಯಲ್ಲಿ ಆಡಲು ಮುಂದಾಗಿದೆ. ಈ ಕುರಿತು ಆಯ್ಕೆ ಸಮಿತಿ ಹಾಗೂ ಕೋಚ್ ಗಂಭೀರ್ ಒಲವು ತೋರಿದ್ದಾರೆ. ಇತ್ತ ಸೂರ್ಯಕುಮಾರ್ ಯಾದವ್ ಫಾರ್ಮ್ ಕೂಡ ತಂಡಕ್ಕೆ ಮುಳುವಾಗಿದೆ. ಹೀಗಾಗಿ ನಾಯಕತ್ವ ಬದಲಾವಣೆ ಅನಿವಾರ್ಯ ಎನ್ನುತ್ತಿದೆ ಬಿಸಿಸಿಐ ಎಂದು ವರದಿಯಾಗಿದೆ.

46
ಸೂರ್ಯಕುಮಾರ್ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ

ಸೂರ್ಯಕುಮಾರ್ ನಾಯಕತ್ವದಲ್ಲಿ ಟಿ20 ತಂಡ ಉತ್ತಮ ಪ್ರದರ್ಶನ ನೀಡಿದೆ. 2026ರ ಟಿ20 ವಿಶ್ವಕಪ್, ಸತತ 8 ದ್ವಿಪಕ್ಷೀಯ ಸರಣಿ ಗೆಲುವು, 2025ರ ಏಷ್ಯಾಕಪ್ ಟ್ರೋಫಿ ಗೆಲುವು ಸೇರಿದಂತೆ ಐತಿಹಾಸಿಕ ಗೆಲುವು ಸೂರ್ಯಕುಮಾರ್ ನಾಯಕತ್ವದಡಿ ಬಂದಿದೆ. ಆದರೆ ಸೂರ್ಯಕುಮಾರ್ ಬ್ಯಾಟಿಂಗ್ ಅಷ್ಟಾಗಿ ಸದ್ದು ಮಾಡಿಲ್ಲ.

56
ರೇಸ್‌ನಲ್ಲಿ ಶ್ರೇಯಸ್ ಅಯ್ಯರ್

ಸೂರ್ಯಕುಮಾರ್ ಯಾದವ್‌ಗೆ ಕೊಕ್ ನೀಡಿ ಟೀಂ ಇಂಡಿಯಾ ಟ20 ನಾಯಕತ್ವವನ್ನು ಶ್ರೇಯಸ್ ಅಯ್ಯರ್‌ಗೆ ನೀಡಲು ಆಯ್ಕೆ ಸಮಿತಿ ಒಲವು ತೋರಿದೆ. ಐಪಿಎಲ್ ಟೂರ್ನಿಯ ಆರಂಭಿಕ ಹಂತದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದರು. ಆದರೆ ಅಂತಿಮ ಹಂತದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

66
ಕೆಲವರ ಹೆಸರು ಮುಂಚೂಣಿಯಲ್ಲಿ

ಟೀಂ ಇಂಡಿಯಾ ಟಿ20 ನಾಯಕತ್ವಕ್ಕೆ ಶ್ರೇಯಸ್ ಅಯ್ಯರ್ ಜೊತೆ ಕೆಲ ಆಟಗಾರರ ಹೆಸರು ಕೇಳಿಬರುತ್ತಿದೆ. ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್ ಹೆಸರು ಕೇಳಿಬರುತ್ತಿದೆ. ಹೀಗಾಗಿ ಹೊಸ ನಾಯಕನ ಆಯ್ಕೆಯಲ್ಲಿ ತೀವ್ರ ಪೈಪೋಟಿ ಎದುರಾಗಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories