ಸಿಎಸ್‌ಕೆ ಹೊರಬಿದ್ದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಮಾಜಿ ಪ್ಲೇಯರ್ ವಿಜಯ್ ಶಂಕರ್

Published : May 22, 2026, 07:12 PM IST

ಐಪಿಎಲ್ ಹಾಗೂ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ ಆಲ್‌ರೌಂಡರ್ ವಿಜಯ್ ಶಂಕರ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ವಿಜಯ್, ಐಪಿಎಲ್ ಹಾಗೂ ದೇಸಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

PREV
15
ವಿಜಯ್ ಶಂಕರ್ ವಿದಾಯ

ಟೀಂ ಇಂಡಿಯಾ ಪರ ಏಕದಿನ ಹಾಗೂ ಟಿ20 ಮಾದರಿಯಲ್ಲಿ ಮಿಂಚಿದ ಆಲ್‌ರೌಂಡರ್ ವಿಜಯ್ ಶಂಕರ್ ಇದೀಗ ದೇಶಿ ಹಾಗೂ ಐಪಿಎಲ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ, ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಪ್ರಮುಖ ತಂಡಗಳ ಪರ ಆಡಿದ್ದ ವಿಜಯ್ ಶಂಕರ್ ದಿಢೀರ್ ವಿದಾಯ ಘೋಷಿಸಿದ್ದಾರೆ.

25
2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ವಿಜಯ್

ಕಳೆದ ಐಪಿಎಲ್ ಆವೃತ್ತಿಯಲ್ಲಿ ವಿಜಯ್ ಶಂಕರ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಆದರೆ ಈ ಬಾರಿ ವಿಜಯ್ ಶಂಕರ್ ಹರಾಜಿನಲ್ಲಿ ಮಾರಾಟವಾಗದೇ ಉಳಿದ ವಿಜಯ್ ಶಂಕರ್ ಇದೀಗ ಐಪಿಎಲ್ ಹಾಗೂ ದೇಶಿ ಕ್ರಿಕೆಟ್‌ನಿಂದ ವಿದಾಯ ಹೇಳಿದ್ದಾರೆ.

35
ವಿದೇಶಿ ಲೀಗ್ ಟೂರ್ನಿಗಳತ್ತ ಚಿತ್ತ

ಈ ಬಾರಿ ಸಿಎಸ್‌ಕೆ ತಂಡ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ವಿಜಯ್ ಶಂಕರ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ವಿದೇಶಿ ಲೀಗ್ ಟೂರ್ನಿಯಲ್ಲಿ ಕರಿಯರ್ ಆರಂಭಿಸುವ ಗುರಿ ಇಟ್ಟುಕೊಂಡಿರುವ ವಿಜಯ್ ಶಂಕರ್, ದಿಢೀರ್ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ.

45
ವಿಶ್ವಕಪ್ ತಂಡದಲ್ಲಿದ್ದ ವಿಜಯ್ ಶಂಕರ್

ಟೀಂ ಇಂಡಿಯಾ ಪರ ವಿಜಯ್ ಶಂಕರ್ 12 ಎಕದಿನ ಹಾಗೂ 9 ಟಿ20 ಪಂದ್ಯಗಳನ್ನುಆಡಿದ್ದಾರೆ. 2019 ವಿಶ್ವಕಪ್ ಟೂರ್ನಿಯಲ್ಲಿ ಆಲ್‌ರೌಂಡರ್ ಕೋಟಾದಲ್ಲಿ ವಿಜಯ್ ಆಯ್ಕೆಯಾಗಿದ್ದರು. ನಂ.4 ಕ್ರಮಾಂಕ ಹಾಗೂ ಬೌಲಿಂಗ್ ದೃಷ್ಟಿಯಿಂದ ವಿಜಯ್ ಆಯ್ಕೆ ಮಾಡಲಾಗಿತ್ತು.

55
ಸಿಎಸ್‌ಕೆಯಿಂದ ಆರಂಭಿಸಿ ಸಿಎಸ್‌ಕೆ ಮೂಲಕ ಅಂತ್ಯ

2013ರಲ್ಲಿ ವಿಜಯ್ ಶಂಕರ್ ಐಪಿಎಲ್ ಪಯಣ ಸಿಎಸ್‌ಕೆ ಮೂಲಕ ಆರಂಭಗೊಂಡಿತ್ತು. ಇದಾದ ಬಳಿಕ ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಬಳಿಕ ಮತ್ತೆ ಸಿಎಸ್‌ಕೆ ತಂಡ ಸೇರಿಕೊಂಡಿದ್ದರು. ಗುಜರಾತ್ ಟೈಟಾನ್ಸ್ ಟ್ರೋಫಿ ಗೆಲುವಿನ ತಂಡದಲ್ಲೂ ವಿಜಯ್ ಶಂಕರ್ ಭಾಗವಾಗಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories