ಎಮೋಷನಲ್‌ ಥ್ರೋಬ್ಯಾಕ್ ಫೋಟೋ ಪೋಸ್ಟ್‌ ಮಾಡಿದ ಶೇನ್ ವಾರ್ನ್ ಮಾಜಿ ಪ್ರೇಯಸಿ!

Suvarna News   | Asianet News
Published : Mar 06, 2022, 05:17 PM ISTUpdated : Mar 07, 2022, 01:54 PM IST

ಮಾರ್ಚ್ 04, 2022 ರಂದು, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಶೇನ್ ವಾರ್ನ್ (Shane Warne) 52ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಇಡೀ ಜಗತ್ತು ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆಯ ನಿಧನಕ್ಕೆ ಸಂತಾಪ ಸೂಚಿಸಿದೆ. ಭಾರತದ ಹಲವು ಸಿನಿಮಾ ಹಾಗೂ ಕ್ರೀಡಾ ಸೆಲೆಬ್ರೆಟಿಗಳೂ ಸ್ವಿನ್‌ ಮಾಂತ್ರಿಕನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಲಿವುಡ್ ನಟಿ ಎಲಿಜಬೆತ್ ಹರ್ಲಿ ( Elizabeth Hurley) ತನ್ನ ಮಾಜಿ ಪ್ರೇಮಿ ಶೇನ್ ವಾರ್ನ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ, ಥ್ರೋ ಬ್ಯಾಕ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

PREV
18
ಎಮೋಷನಲ್‌ ಥ್ರೋಬ್ಯಾಕ್ ಫೋಟೋ  ಪೋಸ್ಟ್‌  ಮಾಡಿದ ಶೇನ್ ವಾರ್ನ್ ಮಾಜಿ ಪ್ರೇಯಸಿ!

ಶೇನ್ ವಾರ್ನ್ ಥಾಯ್ಲೆಂಡ್‌ನ ಕೊಹ್ ಸಮುಯಿಯಲ್ಲಿರುವ ವಿಲ್ಲಾದಲ್ಲಿ ವಿಹಾರ ಮಾಡುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು. ಶೇನ್ ವಾರ್ನ್ ಅವರ ಮಾಜಿ ಪ್ರೇಮಿ ಎಲಿಜಬೆತ್ ಹರ್ಲಿ ಅವರು ಶೇನ್ ವಾರ್ನ್ ಅವರ ಸಾವಿಗೆ  Instagram ಮೂಲಕ ಸಂತಾಪ ಸೂಚಿಸಿದ್ದಾರೆ. 

28

ಎಲಿಜಬೆತ್ ಹರ್ಲಿ ಥ್ರೋಬ್ಯಾಕ್ ಫೋಟೋ  ಜೊತೆ ಎಮೋಷನಲ್‌ ಪೋಸ್ಟ್‌ ಶೇರ್‌ ಮಾಡಿದ್ದಾರೆ. ಎಲಿಜಬೆತ್ ಹರ್ಲಿ ತನ್ನ ಮಾಜಿ ಪ್ರೇಯಸಿ ಶೇನ್ ವಾರ್ನ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಾ, 'my loved Lion heart' ಎಂದು ಹೇಳಿದ್ದಾರೆ.

38

ಎಲಿಜಬೆತ್ ಹರ್ಲಿ ಮತ್ತು ಶೇನ್ ವಾರ್ನ್ 2011 ರಿಂದ 2013 ರವರೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಅವರು ಬೇರೆಯಾದರು. ಶೇನ್ ವಾರ್ನ್ ಎಲಿಜಬೆತ್ ಹರ್ಲಿಯಿಂದ ಬೇರ್ಪಟ್ಟ ನಂತರ ಸಂದರ್ಶನವೊಂದರಲ್ಲಿ ವಾರ್ನ್ ನಟಿಯೊಂದಿಗಿನ ತನ್ನ ಸಂಬಂಧದ ಬಗ್ಗೆ ಮಾತನಾಡಿದ್ದರು.

48

ವಾರ್ನ್ ನಟಿಯೊಂದಿಗಿನ ತನ್ನ ಸಂಬಂಧದ ಬಗ್ಗೆ ಮಾತನಾಡುತ್ತಾ, ತಮ್ಮ ನಡುವೆ ಯಾವುದೇ ಕೆಟ್ಟ ಅಭಿಪ್ರಾಯವಿಲ್ಲ ಎಂದು ಬಹಿರಂಗಪಡಿಸಿದರು. ಆಸ್ಟ್ರೇಲಿಯನ್ ಸ್ಪಿನ್ನರ್ ಯಾರೂ ತಪ್ಪು ಮಾಡಿಲ್ಲ ಎಂದು ಹೇಳಿದ್ದರು.

58

ಎಲಿಜಬೆತ್ ಹರ್ಲಿ ಅವರು ಕ್ರಿಕೆಟಿಗನಿಗೆ ತಮ್ಮ ಪೋಸ್ಟ್‌ನಲ್ಲಿ ಅಂತಿಮ ನಮನ ಸಲ್ಲಿಸಿದರು. ಅವರು ಶೇನ್‌ ವಾರ್ನ್‌ ಅವರನ್ನು 'Lionheart' ಎಂದು ಉಲ್ಲೇಖಿಸಿದ್ದಾರೆ. ನಟಿ ತನ್ನ ಮತ್ತು ಶೇನ್ ವಾರ್ನ್ ಥ್ರೋಬ್ಯಾಕ್ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.
 


 

68

ಎಲಿಜಬೆತ್ ಶೇನ್ ವಾರ್ನ್‌ಗೆ ಗೌರವ ಸಲ್ಲಿಸುತ್ತಾ, 'ಸೂರ್ಯನು ಮೋಡದ ಹಿಂದೆ ಶಾಶ್ವತವಾಗಿ ಹೋದಂತೆ ನನಗೆ ಅನಿಸುತ್ತದೆ.  RIP ನನ್ನ ಪ್ರೀತಿಯ ಲಯನ್‌ಹಾರ್ಟ್ @shanewarne23'  ಎಂದು ಕ್ಯಾಪ್ಷನ್‌ ನೀಡಿದ್ದಾರೆ.

78

ಎಲಿಜಬೆತ್ ಹರ್ಲಿ ಮತ್ತು ಶೇನ್ ವಾರ್ನ್  2010ರ ದಶಕದ ಆರಂಭದಲ್ಲಿ ಇಬ್ಬರೂ ಒಟ್ಟಿಗೆ ಇದ್ದಾಗ ಹಿಂದಿನ ಕೆಲವು ಚಿತ್ರಗಳನ್ನು ಹಾಲಿವುಡ್ (Hollywood) ನಟಿ ಹಂಚಿಕೊಂಡಿದ್ದಾರೆ. 

88

2011 ರಲ್ಲಿ, ಕ್ರಿಕೆಟರ್‌ ಶೇನ್ ವಾರ್ನ್ ಮತ್ತು ಹಾಲಿವುಡ್‌ ನಟಿ ಎಲಿಜಬೆತ್ ಹರ್ಲಿ ತಮ್ಮ ಸಂಬಂಧದ ಅಧಿಕೃತ ಗೊಳಿಸಿದ್ದರು ಮತ್ತು ನಿಶ್ಚಿತಾರ್ಥವನ್ನು ಘೋಷಿಸಿದರು, ಆದರೆ ಅಂತಿಮವಾಗಿ, ಈ ಜೋಡಿ 2013ರಲ್ಲಿ ಬೇರ್ಪಟ್ಟಿತು.

Read more Photos on
click me!

Recommended Stories