ಹಿಂದೆ ಬಿಕಿನಿಯಲ್ಲಿ ಮಿಂಚುತ್ತಿದ್ದ ಡಿಂಪಲ್‌ ಕಪಾಡಿಯಾ ಇಂದು ಮೇಕಪ್ ಇಲ್ಲದೆ ಗುರುತಿಸಲು ಕಷ್ಟ!

Published : Mar 06, 2022, 05:10 PM IST

ಬಾಲಿವುಡ್  ಜೀವನವು ಈಗ ಹೆಚ್ಚಿನ ಪ್ರಮಾಣದಲ್ಲಿ ಟ್ರ್ಯಾಕ್‌ಗೆ ಮರಳಿದೆ. ಸೆಲೆಬ್ರಿಟಿಗಳು ಈಗ ತಮ್ಮ ಮುಂಬರುವ ಯೋಜನೆಗಳ ಜೊತೆ ಬ್ಯುಸಿಯಾಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಸಿನಿಮಾಗಳ ಜೊತೆಗೆ ಕಮರ್ಷಿಯಲ್ ಶೂಟಿಂಗ್ ಮಾಡುತ್ತಿದ್ದಾರೆ. ಈ ನಡುವೆ, ಅಕ್ಷಯ್ ಕುಮಾರ್ ಅವರ ಅತ್ತೆ ಡಿಂಪಲ್ ಕಪಾಡಿಯಾ (Dimple Kapadia) ಬಾಂದ್ರಾದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಅವರನ್ನು ಗುರುತಿಸುವುದು. ಕಳೆದ ದಿನಗಳಲ್ಲಿ ಯಾವ ಸೆಲೆಬ್ರಿಟಿಗಳು ಎಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಇಲ್ಲಿದೆ.  

PREV
18
ಹಿಂದೆ ಬಿಕಿನಿಯಲ್ಲಿ ಮಿಂಚುತ್ತಿದ್ದ ಡಿಂಪಲ್‌ ಕಪಾಡಿಯಾ ಇಂದು ಮೇಕಪ್ ಇಲ್ಲದೆ ಗುರುತಿಸಲು ಕಷ್ಟ!

ಬಿಳಿ-ಕಂದು ಬಣ್ಣದ ಕೂದಲು, ಯಾವುದೇ ಮೇಕ್ಅಪ್ ಇಲ್ಲದೆ  ದೊಡ್ಡ ಫ್ರೇಮ್ ಗ್ಲಾಸ್‌ಗಳೊಂದಿಗೆ, ಹಿರಿಯ ನಟಿ ಡಿಂಪಲ್ ಕಪಾಡಿಯಾ ಕಾಣಿಸಿಕೊಂಡರು. ಕ್ಯಾಮೆರಾಮನ್‌ಗೆ ಪೋಸ್ ನೀಡುವುದನ್ನು ನಟಿ ತಪ್ಪಿಸಿಕೊಂಡರು. ಈ ವೇಳೆ ಅವರು ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. 
 

28

ಮಲೈಕಾ ಅರೋರಾ (Malaika Arora) ಬಾಂದ್ರಾದಲ್ಲಿನ ಸಲೂನ್‌ನ ಹೊರಗೆ ಮೇಕ್ಅಪ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರು ಕೂದಲನ್ನು ಕಟ್ಟದೆ ಹಾಗೇ ಬಿಟ್ಟಿದ್ದರು ಮತ್ತು ಮಾಸ್ಕ್ ಹಾಕಿಕೊಂಡಿದ್ದರು.

38

ಊರ್ವಶಿ ರೌಟೇಲಾ (Urvashi Rautela) ಜುಹುವಿನ ಸಲೂನ್‌ನ ಹೊರಗೆ ಕಾಣಿಸಿಕೊಂಡರು. ಈ  ಸಮಯದಲ್ಲಿ, ಅವರು ಹಳದಿ ಪ್ರಿಟೆಂಡ್‌ ಉಡುಗೆಯನ್ನು ಧರಿಸಿದ್ದರು. ಛಾಯಾಗ್ರಾಹಕರನ್ನು ನೋಡಿದ ಊರ್ವಶಿ ರೌಟೇಲಾ  ಫ್ಲೈಯಿಂಗ್ ಕಿಸ್ ಕೊಟ್ಟರು.

48

ಬಾಂದ್ರಾದ ಕೆಫೆಯೊಂದರ ಹೊರಗೆ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez)ಕಾಣಿಸಿಕೊಂಡಿದ್ದಾರೆ. ಬಹಳ ದಿನಗಳ ನಂತರ ನಟಿ ಹೊರಗೆ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಅವರು ಶಾರ್ಟ್‌ ಉಡುಗೆ ಧರಿಸಿದ್ದರು ಮತ್ತು ಸುರಕ್ಷತೆಗಾಗಿ ಮಾಸ್ಕ್ ಹಾಕಿದ್ದರು.

58

ಬಾಲಿವುಡ್‌ನ ಹ್ಯಾಂಡ್ಸ್‌ಮ್‌ ಹಂಕ್‌ ರಣಬೀರ್ ಕಪೂರ್ (Ranbir Kapoor) ಧರ್ಮ ಕಚೇರಿಯ ಹೊರಗೆ ಕಾಣಿಸಿಕೊಂಡರು. ಬಹಳ ದಿನಗಳಿಂದ ರಣಬೀರ್‌ ಕಪೂರ್‌ ಅವರ ಮದುವೆಯವಿಷಯಕ್ಕಾಗಿ ಸುದ್ದಿಯಲ್ಲಿದ್ದಾರೆ. ಆಲಿಯಾ ಜೊತೆಯ ನಟನ ಮದುವೆಗಾಗಿ ಫ್ಯಾನ್ಸ್‌ ಎದುರು ನೋಡುತ್ತಿದ್ದಾರೆ.

68

ಕೃತಿ ಸನನ್, ಕಪ್ಪು ಬಣ್ಣದ ಶಾರ್ಟ್ ಡ್ರೆಸ್‌ನಲ್ಲಿ ಕ್ಯಾಮರಾಮನ್‌ಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಈ ತಿಂಗಳ 18 ರಂದು ಬಿಡುಗಡೆಯಾಗಲಿರುವ ಬಚ್ಚನ್  ಪಾಂಡೆ ಚಿತ್ರದಲ್ಲಿ ಕೃತಿ ಅಕ್ಷಯ್ ಕುಮಾರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. 

78

ಬಾಂದ್ರಾದಲ್ಲಿ ರಶ್ಮಿ ದೇಸಾಯಿ  (Rashmi Desai) ಕಾಣಿಸಿಕೊಂಡಿದ್ದಾರೆ. ಆಕೆಯ ಕೂದಲು ಚೆಲ್ಲಾಪಿಲ್ಲಿಯಾಗಿ, ಶಾರ್ಟ್‌ ಡ್ರೆಸ್  ಹಾಕಿಕೊಂಡಿದ್ದನ್ನು ಫೋಟೋಗಳಲ್ಲಿ ಕಾಣಬಹುದು. ರಶ್ಮಿ ದೇಸಾಯಿ ಪಾಪಾರಾಜಿಗಳಿಗೆ ಪೋಸ್ ಕೊಟ್ಟಿದ್ದಾರೆ.

88

ರಾಹುಲ್ ವೈದ್ಯ (Rahul Vaidya) ಅವರು ಪತ್ನಿ ದಿಶಾ ಪರ್ಮಾರ್ (Disha Parmar) ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ದಂಪತಿಗಳು ನಗುತ್ತಾ ಫೋಟೋಗ್ರಾಫರ್‌ಗಳಿಗೆ ಪೋಸ್ ನೀಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories