ಇಂಗ್ಲೆಂಡ್‌ ಟೂರ್‌ನಲ್ಲಿ ದಯನೀಯ ವೈಫಲ್ಯ ಕಂಡ ವೈಭವ್‌ ಸೂರ್ಯವಂಶಿಯನ್ನು ನೇಪಾಳಕ್ಕೆ ಕಳಿಸಲು ಬಿಸಿಸಿಐ ಸಿದ್ದತೆ!

Published : Jul 10, 2026, 09:01 PM IST

ಬಿಸಿಸಿಐ ಶೀಘ್ರದಲ್ಲೇ ಭಾರತ ‘ಎ’ ತಂಡವನ್ನು ನೇಪಾಳ ಪ್ರವಾಸಕ್ಕೆ ಕಳುಹಿಸಲು ಯೋಜಿಸುತ್ತಿದೆ. ಈ ಪ್ರವಾಸವು ನೇಪಾಳ ಕ್ರಿಕೆಟ್ ಅಭಿವೃದ್ಧಿಗೆ ಬೆಂಬಲ ನೀಡುವುದಲ್ಲದೆ, ಇಂಗ್ಲೆಂಡ್ ಪ್ರವಾಸದಲ್ಲಿ ವಿಫಲರಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಫಾರ್ಮ್ ಕಂಡುಕೊಳ್ಳಲು ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿದೆ.

PREV
16
ನೇಪಾಳಕ್ಕೆ ವೈಭವ್‌ ಸೂರ್ಯವಂಶಿ

ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ಯುವ ತಂಡವು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ 0-3 ಅಂತರದಿಂದ ಸರಣಿ ಕೈಚೆಲ್ಲಿ ಹಿನ್ನಡೆ ಅನುಭವಿಸಿದೆ. ಈ ಸರಣಿಯ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲೇ, ಬಿಸಿಸಿಐ (BCCI) ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಮುಂಬೈನಲ್ಲಿ ಮಹತ್ವದ ಸುಳಿವು ನೀಡಿದ್ದು, ಭಾರತ ‘ಎ’ (India A) ತಂಡವು ಶೀಘ್ರದಲ್ಲೇ ನೇಪಾಳ ಪ್ರವಾಸ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

26
ನೇಪಾಳ ಪ್ರವಾಸಕ್ಕೆ ಬಿಸಿಸಿಐ ಭರ್ಜರಿ ಸಿದ್ಧತೆ

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬ ಹೆಗ್ಗಳಿಕೆಯ ಬಿಸಿಸಿಐ, ಭಾರತೀಯ ಆಟಗಾರರನ್ನು ಶೀಘ್ರದಲ್ಲೇ ನೇಪಾಳ ಪ್ರವಾಸಕ್ಕೆ ಕಳುಹಿಸಲು ಯೋಜನೆ ರೂಪಿಸುತ್ತಿದೆ. ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಭಾರತ ‘ಎ’ ತಂಡದ ನೇಪಾಳ ಪ್ರವಾಸದ ಸಾಧ್ಯತೆಗಳ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ.

36
ನೇಪಾಳ ಕ್ರಿಕೆಟ್ ಅಭಿವೃದ್ಧಿಗೆ ಭಾರತದ ನೆರವು

ವರದಿಯ ಪ್ರಕಾರ, ನೇಪಾಳದಲ್ಲಿ ದಿನೇ ದಿನೇ ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಗಮನಿಸಿರುವ ಬಿಸಿಸಿಐ, ನೇಪಾಳ ಕ್ರಿಕೆಟ್ ಮಂಡಳಿಗೆ (CAN) ಸಂಪೂರ್ಣ ಬೆಂಬಲ ನೀಡಲು ಮುಂದಾಗಿದೆ. ಭಾರತ 'ಎ' ತಂಡವನ್ನು ನೇಪಾಳಕ್ಕೆ ಕಳುಹಿಸುವುದು ಅಲ್ಲಿನ ಕ್ರಿಕೆಟ್ ಮೂಲಸೌಕರ್ಯ ಹಾಗೂ ಕೌಶಲ್ಯ ಅಭಿವೃದ್ಧಿಗೆ ಬಿಸಿಸಿಐ ಇಡಲಿರುವ ಒಂದು ಪ್ರಮುಖ ಮತ್ತು ದೃಢವಾದ ಹೆಜ್ಜೆಯಾಗಿದೆ.

46
ಡಿಸೆಂಬರ್‌ನಲ್ಲಿ ಕೀರ್ತಿಪುರದಲ್ಲಿ ಮೂರು ಪಂದ್ಯಗಳ ಸರಣಿ

ಭಾರತ ‘ಎ’ ತಂಡವನ್ನು ತಮ್ಮ ದೇಶಕ್ಕೆ ಕಳುಹಿಸಿಕೊಡುವಂತೆ ನೇಪಾಳ ಕ್ರಿಕೆಟ್ ಮಂಡಳಿಯು ಬಿಸಿಸಿಐ ಅನ್ನು ಅಧಿಕೃತವಾಗಿ ಸಂಪರ್ಕಿಸಿತ್ತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ವರದಿಗಳ ಪ್ರಕಾರ, ಭಾರತ ‘ಎ’ ತಂಡವು ನೇಪಾಳದ ಕೀರ್ತಿಪುರದಲ್ಲಿ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಪಂದ್ಯಗಳು ಕ್ರಮವಾಗಿ ಡಿಸೆಂಬರ್ 9, 11 ಮತ್ತು 13 ರಂದು ಜರುಗಲಿವೆ.

56
ವೈಭವ್ ಸೂರ್ಯವಂಶಿಗೆ ಸಿಗಲಿದೆಯೇ ಮತ್ತೊಂದು ಅವಕಾಶ?

ಭಾರತ ‘ಎ’ ತಂಡ ನೇಪಾಳ ಪ್ರವಾಸ ಕೈಗೊಂಡರೆ, ಆ ತಂಡದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಹಿರಿಯರ (ಸೀನಿಯರ್) ಮಟ್ಟದಲ್ಲಿ ಅವರ ಪ್ರದರ್ಶನವನ್ನು ಗಮನಿಸಿದರೆ, ಅವರು ಮುಂಬರುವ ಉನ್ನತ ಹಂತದ ಸವಾಲುಗಳಿಗೆ ಇನ್ನೂ ಸಂಪೂರ್ಣವಾಗಿ ಸಾಗಲು ಸಿದ್ಧರಾಗಿಲ್ಲ ಎಂಬುದು ಸಾಬೀತಾಗಿದೆ. ಹೀಗಾಗಿ, ಅವರ ಫಾರ್ಮ್ ಮರಳಿ ಪಡೆಯಲು ಭಾರತ ‘ಎ’ ತಂಡದಲ್ಲಿ ಅವಕಾಶ ನೀಡಲು ಮಂಡಳಿ ಯೋಚಿಸುತ್ತಿದೆ.

66
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸೂರ್ಯವಂಶಿ ಕಳಪೆ ಪ್ರದರ್ಶನ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿ ಆಡಿದ ಮೂರೂ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಅವರು ಮೊದಲ ಟಿ20 ಪಂದ್ಯದಲ್ಲಿ 14 ರನ್, ಎರಡನೇ ಪಂದ್ಯದಲ್ಲಿ 13 ರನ್ ಮತ್ತು ಮೂರನೇ ಪಂದ್ಯದಲ್ಲಿ ಕೇವಲ 15 ರನ್ ಗಳಿಸಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ಈ ಕಳಪೆ ಫಾರ್ಮ್‌ನಿಂದಾಗಿ ನೇಪಾಳದಂತಹ ಉದಯೋನ್ಮುಖ ತಂಡಗಳ ವಿರುದ್ಧ ಆಡಿ ಅನುಭವ ಪಡೆಯುವುದು ಅವರಿಗೆ ಅಗತ್ಯವಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories