ದುಬೈ: 2025ರ ಏಷ್ಯಾಕಪ್ ಟೂರ್ನಿಯು ಇದೀಗ ಗ್ರೂಪ್ ಹಂತದ ಕೊನೆಯ ಭಾಗಕ್ಕೆ ಬಂದಿದೆ. ಸೂಪರ್ 4 ಹಂತಕ್ಕೇರುವ ವಿಚಾರದಲ್ಲಿ 'ಬಿ' ಗುಂಪಿನಿಂದ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ನಿರೀಕ್ಷೆಯಂತೆಯೇ 'ಎ' ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡವು ಸೂಪರ್ 4 ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ.
29
ಇಂಡೋ-ಪಾಕ್ ಸೂಪರ್ 4ಗೆ ಲಗ್ಗೆ
ಭಾರತ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸೂಪರ್ 4 ಸ್ಥಾನ ಖಚಿತಪಡಿಸಿಕೊಂಡರೆ, ಪಾಕ್ ಎರಡು ಗೆಲುವು ಒಂದು ಸೋಲು ಸಹಿತ 4 ಅಂಕಗಳೊಂದಿಗೆ ಎರಡನೇ ಸ್ಥಾನಿಯಾಗಿ ಸೂಪರ್ 4 ಹಂತಕ್ಕೆ ಅರ್ಹತೆ ಗಳಿಸಿದೆ.
39
'ಬಿ' ಗುಂಪಿನ ಮೇಲೆ ಎಲ್ಲರ ಚಿತ್ತ
ಮೊದಲ 10 ಪಂದ್ಯಗಳ ಅಂತ್ಯದ ವೇಳೆಗೆ 'ಎ' ಗುಂಪಿನಿಂದ ಭಾರತ, ಪಾಕಿಸ್ತಾನ ಸೂಪರ್ 4ಗೆ ಅರ್ಹತೆ ಪಡೆದಿವೆ. ಆದರೆ 'ಬಿ' ಗುಂಪಿನಿಂದ ಸೂಪರ್ 4 ಹಂತಕ್ಕೇರೋರು ಯಾರು ಎನ್ನುವ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.
ಗ್ರೂಪ್ 'ಬಿ'ನಲ್ಲಿ ಹಾಂಕಾಂಗ್ ತಂಡವು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಇದೀಗ ಸೂಪರ್ 4 ಹಂತಕ್ಕೇರುವ ಎರಡು ಸ್ಥಾನಕ್ಕಾಗಿ ಆಫ್ಘಾನಿಸ್ತಾನ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
59
ಇಂದು ಆಫ್ಘಾನ್-ಲಂಕಾ ಫೈಟ್
ಇಂದು ಅಂದರೆ ಸೆಪ್ಟೆಂಬರ್ 18ರಂದು ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯ 'ಬಿ' ಗುಂಪಿನಿಂದ ಸೂಪರ್ 4 ಹಂತಕ್ಕೆ ಏರೋರು ಯಾರು ಎನ್ನುವ ಸ್ಪಷ್ಟ ಚಿತ್ರಣ ನೀಡಲಿದೆ.
69
ಸತತ ಎರಡು ಮ್ಯಾಚ್ ಗೆದ್ದಿರುವ ಶ್ರೀಲಂಕಾ
ಸದ್ಯ ಗ್ರೂಪ್ 'ಬಿ'ನಲ್ಲಿ ಶ್ರೀಲಂಕಾ ಸತತ ಎರಡು ಪಂದ್ಯ ಗೆದ್ದು ಅಗ್ರಸ್ಥಾನದಲ್ಲಿದೆ. ಇನ್ನು ಬಾಂಗ್ಲಾದೇಶ ಆಡಿದ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಎರಡು ಸೋಲು ಸಹಿತ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
79
ಬಾಂಗ್ಲಾಗಿಂತ ಆಫ್ಘನ್ ನೆಟ್ ರನ್‌ರೇಟ್ ಬೆಸ್ಟ್
ಇನ್ನು ಆಫ್ಘಾನಿಸ್ತಾನ ತಂಡವು ಎರಡು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಒಂದು ಸೋಲು ಸಹಿತ 2 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ ಆಫ್ಘಾನ್ ನೆಟ್ ರನ್‌ರೇಟ್ ಬಾಂಗ್ಲಾದೇಶಕ್ಕಿಂತ ಉತ್ತಮವಾಗಿದೆ.
89
ಶ್ರೀಲಂಕಾ ಜತೆಗೆ ಬಾಂಗ್ಲಾದೇಶಕ್ಕೂ ಇದೆ ಚಾನ್ಸ್
ಒಂದು ವೇಳೆ ಇಂದು ಆಫ್ಘಾನ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಗೆದ್ದರೇ, ಬಿ ಗುಂಪಿನಿಂದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಸೂಪರ್ 4 ಹಂತಕ್ಕೇರಲಿವೆ.
99
ಆಫ್ಘಾನಿಸ್ತಾನ ಲೆಕ್ಕಾಚಾರ
ಆದರೆ ಶ್ರೀಲಂಕಾ ಎದುರು ಆಫ್ಘಾನಿಸ್ತಾನ ಗೆಲುವು ಸಾಧಿಸಿದರೆ, ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ಸೂಪರ್ 4 ಹಂತಕ್ಕೇರಲಿದ್ದು, ಬಾಂಗ್ಲಾದೇಶ ಗ್ರೂಪ್ ಹಂತದಲ್ಲೇ ಹೊರಬೀಳಲಿದೆ.