ಪಾಕ್ ಎದುರಿನ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ಶಾಕ್! ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನಿಗೆ ಗಾಯ

Published : Sep 14, 2025, 09:45 AM IST

ದುಬೈ: 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಹೀಗಿರುವಾಗಲೇ ಭಾರತ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಪಾಕ್ ಎದುರಿನ ಪಂದ್ಯಕ್ಕೂ ಮುನ್ನ ಪ್ರಮುಖ ಆಟಗಾರನಿಗೆ ಗಾಯವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ. 

PREV
18
ಇಂಡೋ-ಪಾಕ್ ಕದನ

ಏಷ್ಯಾಕಪ್‌ನಲ್ಲಿಂದು ಪಾಕಿಸ್ತಾನದ ವಿರುದ್ಧ ಪಂದ್ಯವನ್ನಾಡಲಿರುವ ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ. ತಂಡದ ಆರಂಭಿಕ ಬ್ಯಾಟರ್‌ಗೆ ಪೆಟ್ಟಾಗಿದೆ ಎಂದು ವರದಿಯಾಗಿದೆ.

28
ಶುಭ್‌ಮನ್ ಗಿಲ್‌ಗೆ ಗಾಯ

ಅಭ್ಯಾಸದ ವೇಳೆ ಉಪನಾಯಕ ಮತ್ತು ಓಪನರ್ ಶುಭ್‌ಮನ್ ಗಿಲ್‌ಗೆ ಪೆಟ್ಟಾಗಿದೆ ಎಂದು ವರದಿಯಾಗಿದೆ. ಚೆಂಡಿನಿಂದ ಪೆಟ್ಟು ಬಿದ್ದ ಗಿಲ್‌ಗೆ ತಕ್ಷಣ ಫಿಸಿಯೋ ಚಿಕಿತ್ಸೆ ನೀಡಿದರು. ಆದರೂ ಗಿಲ್ ತುಂಬಾ ನೋವಿನಲ್ಲಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

38
ಸಮಾಲೋಚನೆ ನಡೆಸಿದ ಕೋಚ್

ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಗಿಲ್ ಜೊತೆ ದೀರ್ಘಕಾಲ ಮಾತನಾಡುತ್ತಿದ್ದರು. ಸಹ ಓಪನರ್ ಅಭಿಷೇಕ್ ಶರ್ಮಾ ಕೂಡ ಶುಭ್‌ಮನ್ ಗಿಲ್ ಜೊತೆಗಿದ್ದರು.

48
ಗಿಲ್‌ ಗಾಯ ಗಂಭೀರವಲ್ಲ

ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ನಂತರ ಶುಭ್‌ಮನ್ ಗಿಲ್ ಫಿಸಿಯೋ ಮೇಲ್ವಿಚಾರಣೆಯಲ್ಲಿ ಬ್ಯಾಟಿಂಗ್ ಅಭ್ಯಾಸ ಮುಂದುವರಿಸಿದರು. ಗಿಲ್ ಪೆಟ್ಟು ಗಂಭೀರವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

58
ಗಿಲ್ ಅಲಭ್ಯವಾದರೇ ಸಂಜು ಓಪನ್ನರ್

ಪೆಟ್ಟು ಗಂಭೀರವಾಗಿದ್ದರೆ ಇಂದು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಓಪನರ್ ಆಗಿ ಸಂಜು ಸ್ಯಾಮ್ಸನ್ ಆಡಬೇಕಾಗಬಹುದು. ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಓಪನರ್ ಆಗಿ ಆಡಿದ್ದ ಶುಭ್‌ಮನ್ ಗಿಲ್ 20 ರನ್ ಗಳಿಸಿ ಅಜೇಯರಾಗುಳಿದಿದ್ದರು.

68
ಟಿ20 ಕ್ರಿಕೆಟ್‌ಗೆ ಮರಳಿದ ಗಿಲ್

ಒಂದು ವರ್ಷದಿಂದ ಟಿ20 ತಂಡದಿಂದ ಹೊರಗುಳಿದಿದ್ದ ಶುಭ್‌ಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಉಪನಾಯಕ ಮತ್ತು ಓಪನರ್ ಆಗಿ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಟೀಂ ಇಂಡಿಯಾಗೆ ಮರಳಿದ್ದರು.

78
ಸಂಜುಗೆ ಹಿಂಬಡ್ತಿ

ಶುಭ್‌ಮನ್ ಗಿಲ್ ಓಪನರ್ ಆಗಿ ಆಡಿದ್ದರಿಂದ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಐದನೇ ಕ್ರಮಾಂಕಕ್ಕೆ ಹಿಂಬಡ್ತಿ ನೀಡಲಾಗಿತ್ತು. ಯುಎಇ ನೀಡಿದ್ದ 58 ರನ್‌ಗಳ ಗುರಿಯನ್ನು ಕೇವಲ 4.3 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತ್ತು. ಹೀಗಾಗಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ಗೆ ಇಳಿಯಲಿಲ್ಲ.

88
ಮಿಂಚಿದ ಅಭಿಷೇಕ್ ಶರ್ಮಾ

ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು. ನಂತರ ನಾಯಕ ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಯಾವುದೇ ಅಪಾಯವಿಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

Read more Photos on
click me!

Recommended Stories