ದುಬೈ: 2025ರ ಏಷ್ಯಾಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮುಗಿದು ಒಂದು ವಾರ ಕಳೆಯುತ್ತಾ ಬಂದಿದೆ. ಇನ್ನೂ ಆ ಪಂದ್ಯದ ಕುರಿತಂತ ಚರ್ಚೆ ನಿಂತಿಲ್ಲ. ಇದೀಗ ಭಾರತ-ಪಾಕ್ ಟಾಸ್‌ಗೂ ಕೇವಲ 4 ನಿಮಿಷ ಮೊದಲು ರೆಫ್ರಿಗೆ ಬಂದಿದ್ದ ಮೆಸೇಜ್ ರಿವೀಲ್ ಆಗಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಟೂರ್ನಿಯ ಮೊದಲ ಮುಖಾಮುಖಿಯ ವೇಳೆ ಮ್ಯಾಚ್ ರೆಫ್ರಿಯ 'ನೋ ಶೇಕ್‌ಹ್ಯಾಂಡ್' ವಿಚಾರ ಇದೀಗ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
29
ದುಬೈನಲ್ಲಿ ನಡೆದಿದ್ದ ಪಂದ್ಯ
ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಳೆದ ಸೆಪ್ಟೆಂಬರ್ 14ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತ್ತು.
39
ರೆಫ್ರಿ ಮೇಲೆ ಆರೋಪ ಮಾಡಿದ್ದ ಪಾಕ್
ಈ ಪಂದ್ಯಕ್ಕೂ ಮೊದಲು ಮ್ಯಾಚ್ ರೆಫ್ರಿಯಾಗಿದ್ದ ಆಂಡಿ ಫೈಕ್ರಾಫ್ಟ್, ಪಾಕಿಸ್ತಾನದ ನಾಯಕ ಸಲ್ಮಾನ್ ಅಘಾ ಅವರಿಗೆ ನೀವು ಭಾರತೀಯ ಆಟಗಾರರ ಜತೆ ಶೇಕ್ ಹ್ಯಾಂಡ್ ಮಾಡಬಾರದು ಎಂದು ಸೂಚಿಸಿದ್ದರು ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆರೋಪಿಸಿತ್ತು.
ಈ ವಿಚಾರವಾಗಿ ಆಂಡಿ ಪೈಕ್ರಾಫ್ಟ್ ಅವರನ್ನು ಏಷ್ಯಾಕಪ್ ಟೂರ್ನಿಯಿಂದ ಬಹಿಷ್ಕರಿಸಬೇಕು ಎಂದು ಐಸಿಸಿ ಬಳಿ ಪಿಸಿಬಿ ಬೇಡಿಕೆಯಿಟ್ಟಿತ್ತು. ಆದರೆ ಪಿಸಿಬಿ ಬೇಡಿಕೆಗೆ ಐಸಿಸಿ ಸೊಪ್ಪು ಹಾಕಿರಲಿಲ್ಲ.
59
ಪಿಸಿಬಿ ಬೇಡಿಕೆಗೆ ಕ್ಯಾರೇ ಎನ್ನದ ಐಸಿಸಿ
ಇದಾದ ಬಳಿಕ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಕೊನೆ ಪಕ್ಷ ಪಾಕ್ ಆಡುವ ಪಂದ್ಯದ ಮಟ್ಟಿಗಾದರೂ ಆಂಡಿ ಪೈಕ್ರಾಫ್ಟ್ ಅವರನ್ನು ಹೊರಗಿಡಿ ಎನ್ನುವ ಬೇಡಿಕೆಗೂ ಐಸಿಸಿ ಕ್ಯಾರೇ ಎಂದಿರಲಿಲ್ಲ.
69
ನೋ ಶೇಕ್‌ಹ್ಯಾಂಡ್ ಬಗ್ಗೆ ಮಹತ್ವದ ಅಪ್‌ಡೇಟ್
ಇದೆಲ್ಲದರ ನಡುವೆ 'ನೋ ಶೇಕ್‌ಹ್ಯಾಂಡ್' ವಿಚಾರವಾಗಿ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ESPNCricinfo ವರದಿಯ ಪ್ರಕಾರ, ಭಾರತ-ಪಾಕ್ ಮ್ಯಾಚ್ ಟಾಸ್ ಆರಂಭಕ್ಕೂ ಕೇವಲ 4 ನಿಮಿಷ ಮೊದಲೇ ಮ್ಯಾಚ್ ರೆಫ್ರಿಗೆ ಬಿಸಿಸಿಐನಿಂದ ಮಹತ್ವದ ಸಂದೇಶ ಬಂದಿತ್ತು ಎಂದು ವರದಿಯಾಗಿದೆ.
79
ಮ್ಯಾಚ್ ರೆಫ್ರಿಗೆ ಬಂದಿದ್ದ ಸಂದೇಶ
ಮ್ಯಾಚ್ ರೆಫ್ರಿ ಪೈಕ್ರಾಫ್ಟ್, ಟಾಸ್ ನಡೆಸಿಕೊಡಲು ಮೈದಾನಕ್ಕಿಳಿಯುತ್ತಿರುವಾಗ ಟಾಸ್‌ಗೂ 4 ನಿಮಿಷ ಮೊದಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವೆನ್ಯೂ ಮ್ಯಾನೇಜರ್ ರೆಫ್ರಿ ಬಳಿ ಬಂದು, ಈ ಪಂದ್ಯದಲ್ಲಿ ಯಾವುದೇ ಹ್ಯಾಂಡ್‌ಶೇಕ್ ಇರುವುದಿಲ್ಲ ಎಂದು ತಿಳಿಸಿದ್ದಾರೆ.
89
ಬಿಸಿಸಿಐ ಕಳಿಸಿದ ಸಂದೇಶವೇನು?
ಭಾರತ ಸರ್ಕಾರದ ಒಪ್ಪಿಗೆ ಮೇರೆಗೆ ಬಿಸಿಸಿಐನಿಂದ ಸ್ಪಷ್ಟ ಸಂದೇಶವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವೆನ್ಯೂ ಮ್ಯಾನೇಜರ್‌ಗೆ ಕಳಿಸಿತ್ತು. ಇದರ ಪ್ರಕಾರ ಉಭಯ ತಂಡಗಳ ನಾಯಕರಾದ ಸೂರ್ಯಕುಮಾರ್-ಸಲ್ಮಾನ್ ನಡುವೆ ಯಾವುದೇ ಹಸ್ತಲಾಘವ ಇರುವುದಿಲ್ಲ ಎಂದು ಖಡಕ್ ಮೆಸೇಜ್ ಕಳಿಸಿತ್ತು.
99
ಬಿಸಿಸಿಐ ಖಡಕ್ ಸಂದೇಶ
ಭಾರತ ಸರ್ಕಾರದ ಒಪ್ಪಿಗೆ ಮೇರೆಗೆ ಬಿಸಿಸಿಐನಿಂದ ಸ್ಪಷ್ಟ ಸಂದೇಶವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವೆನ್ಯೂ ಮ್ಯಾನೇಜರ್‌ಗೆ ಕಳಿಸಿತ್ತು. ಇದರ ಪ್ರಕಾರ ಉಭಯ ತಂಡಗಳ ನಾಯಕರಾದ ಸೂರ್ಯಕುಮಾರ್-ಸಲ್ಮಾನ್ ನಡುವೆ ಯಾವುದೇ ಹಸ್ತಲಾಘವ ಇರುವುದಿಲ್ಲ ಎಂದು ಖಡಕ್ ಮೆಸೇಜ್ ಕಳಿಸಿತ್ತು.