ಈ ನಾಲ್ಕು ತಂಡಗಳು ಅಧಿಕೃತವಾಗಿ ಸೂಪರ್‌-4 ಹಂತಕ್ಕೆ ಲಗ್ಗೆ! ಭಾರತದ ಮ್ಯಾಚ್ ಯಾವಾಗೆಲ್ಲಾ ಇದೆ?

Published : Sep 19, 2025, 05:01 PM IST

ಬೆಂಗಳೂರು: 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಒಂದು ಪಂದ್ಯ ಬಾಕಿ ಇರುವಂತೆಯೇ ಸೂಪರ್ 4 ಹಂತದಲ್ಲಿ ಪಾಲ್ಗೊಳ್ಳುವ ಏಷ್ಯಾದ 4 ತಂಡಗಳು ಯಾವುವು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಇದೀಗ ಯಾವೆಲ್ಲಾ ತಂಡಗಳು ಏಷ್ಯಾಕಪ್‌ ಟೂರ್ನಿಗೆ ಅರ್ಹತೆ ಪಡೆದಿವೆ ನೋಡೋಣ ಬನ್ನಿ.

PREV
17
ಏಷ್ಯಾಕಪ್ 2025

2025ನೇ ಸಾಲಿನ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಂಟು ತಂಡಗಳ ಪೈಕಿ ಇದೀಗ ನಾಲ್ಕು ತಂಡಗಳು ಸೂಪರ್ 4 ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಇನ್ನುಳಿದ 4 ತಂಡಗಳು ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿವೆ.

27
'ಎ' ಗುಂಪಿನಿಂದ ಭಾರತ-ಪಾಕ್ ಅರ್ಹತೆ

'ಎ' ಗುಂಪಿನಿಂದ ನಿರೀಕ್ಷೆಯಂತೆಯೇ ಹಾಲಿ ಚಾಂಪಿಯನ್ ಭಾರತ ಮತ್ತು ಬದ್ದ ಎದುರಾಳಿ ಪಾಕಿಸ್ತಾನ ತಂಡಗಳು ಕ್ರಮವಾಗಿ ಮೊದಲೆರಡು ಸ್ಥಾನ ಪಡೆದು ಸೂಪರ್ 4 ಹಂತ ಪ್ರವೇಶಿಸಿವೆ.

37
'ಬಿ' ಗುಂಪಿನಿಂದ ಶ್ರೀಲಂಕಾ-ಬಾಂಗ್ಲಾದೇಶ ಅರ್ಹತೆ

'ಎ' ಗುಂಪಿನಿಂದ ನಿರೀಕ್ಷೆಯಂತೆಯೇ ಹಾಲಿ ಚಾಂಪಿಯನ್ ಭಾರತ ಮತ್ತು ಬದ್ದ ಎದುರಾಳಿ ಪಾಕಿಸ್ತಾನ ತಂಡಗಳು ಕ್ರಮವಾಗಿ ಮೊದಲೆರಡು ಸ್ಥಾನ ಪಡೆದು ಸೂಪರ್ 4 ಹಂತ ಪ್ರವೇಶಿಸಿವೆ.

47
ಭಾರತ 'ಎ' ಗುಂಪಿನ ಅಗ್ರಸ್ಥಾನಿ

ಭಾರತ ತಂಡವು ಇಂದು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಓಮಾನ್ ತಂಡವನ್ನು ಎದುರಿಸಲಿದೆ. ಇದಕ್ಕೂ ಮೊದಲೇ ಸತತ ಎರಡು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿಯೇ ಸೂಪರ್ 4 ಹಂತವನ್ನು ಪ್ರವೇಶಿಸಿದೆ.

57
ಭಾರತದ ಸೂಪರ್-4 ವೇಳಾಪಟ್ಟಿ

ಇದೀಗ ಭಾರತ ತಂಡವು ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಸೆಪ್ಟೆಂಬರ್ 21ರ ಭಾನುವಾರ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾರತೀಯ ಕಾಲಮಾನ ಸಂಜೆ 8 ಗಂಟೆಗೆ ಆರಂಭವಾಗಲಿದೆ.

67
ಭಾರತ-ಬಾಂಗ್ಲಾದೇಶ ಫೈಟ್: ಇಂಡೋ-ಪಾಕ್ ಕದನ

ಇನ್ನು ಇದಾದ ಬಳಿಕ ಟೀಂ ಇಂಡಿಯಾ, ಸೆಪ್ಟೆಂಬರ್ 24ರಂದು ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 8 ಗಂಟೆಗೆ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ.

77
ಭಾರತ-ಶ್ರೀಲಂಕಾ ಮುಖಾಮುಖಿ

ಭಾರತ ಪಾಲಿನ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಸೆಪ್ಟೆಂಬರ್ 26ರಂದು ನಿಗದಿಯಾಗಿದೆ. ಈ ಪಂದ್ಯವು ಸಂಜೆ 8 ಗಂಟೆಗೆ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ.

Read more Photos on
click me!

Recommended Stories