ಆರ್ಸಿಬಿಗೆ ಇನ್ನೂ ಕಪ್ಪೇ ಸಿಕ್ಕಿಲ್ಲ, ಕೊಹ್ಲಿ ಹೇಳ್ತಾರಾ ನಿವೃತ್ತಿ? ಮಡದಿ ಮಕ್ಕಳೊಂದಿಗೆ ಆಗ್ತಾರಾ ಲಂಡನ್‌ಗೆ ಶಿಫ್ಟ್?

Published : Jul 08, 2024, 05:15 PM IST

ವಿರಾಟ್‌ ಕೊಹ್ಲಿ ಪತ್ನಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಪ್ರಸ್ತುತ ತಮ್ಮಿಬ್ಬರು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆ ಲಂಡನ್‌ನಲ್ಲಿಯೇ ಹೆಚ್ಚಾಗಿ ಕಾಲ ಕಳೆಯುತ್ತಾರೆ. ವಿರಾಟ್ ಕೊಹ್ಲಿ ವರ್ಲ್ಡ್‌ಕಪ್‌ ಮುಗಿದ ನಂತರ ಭಾರತಕ್ಕೆ ಮರಳಿದ ಕೂಡಲೇ ಅನುಷ್ಕಾ ಅವರನ್ನು ಭೇಟಿಯಾಗಲು ಲಂಡನ್‌ಗೆ ಹೊರಟರು. ಈಗ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶೀಘ್ರದಲ್ಲೇ ಲಂಡನ್‌ಗೆ ಶಾಶ್ವತವಾಗಿ ಶಿಫ್ಟ್ ಆಗಲಿದ್ದಾರೆ ಎಂದು ಅಭಿಮಾನಿಗಳು ಶಂಕಿಸಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿರುವ ಕೊಹ್ಲಿ, ಉಳಿದ ಕ್ರಿಕೆಟ್ ಫಾರ್ಮಾಟ್ಸ್‌ನಿಂದಲೂ ನಿವೃತ್ತಿ ಘೋಷಿಸುತ್ತಾರಾ?  

PREV
19
ಆರ್ಸಿಬಿಗೆ ಇನ್ನೂ ಕಪ್ಪೇ ಸಿಕ್ಕಿಲ್ಲ, ಕೊಹ್ಲಿ ಹೇಳ್ತಾರಾ ನಿವೃತ್ತಿ? ಮಡದಿ ಮಕ್ಕಳೊಂದಿಗೆ ಆಗ್ತಾರಾ ಲಂಡನ್‌ಗೆ ಶಿಫ್ಟ್?

ಟೀಮ್ ಇಂಡಿಯಾ T20 ವಿಶ್ವಕಪ್ ಎತ್ತಿಹಿಡಿದ ನಂತರ ವಿರಾಟ್ ಕೊಹ್ಲಿ ಇತ್ತೀಚೆಗೆ T20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಈಗ, ದಂಪತಿ 'ಸಾಮಾನ್ಯ' ಜೀವನವನ್ನು ನಡೆಲು ಶಾಶ್ವತವಾಗಿ ಲಂಡನ್‌ಗೆ ಸ್ಥಳಾಂತರಗೊಳ್ಳುತ್ತಾರೆ ಎಂದು ಅಭಿಮಾನಿಗಳು ಶಂಕಿಸಿದ್ದಾರೆ.

29

ಈಗಾಗಲೇ ಅನುಷ್ಕಾ ಶರ್ಮ ಮತ್ತು ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದರಿಂದ ಈ ಊಹಾಪೋಹಗಳು ಹರಿದಾಡುತ್ತಿದೆ.

39

2023ರಲ್ಲಿ, ವಿರಾಟ್ ತಮ್ಮ ಬ್ಯುಸಿ ವೇಳಾಪಟ್ಟಿಯಿಂದ ವಿರಾಮ ತೆಗೆದುಕೊಂಡು, ಲಂಡನ್‌ನಲ್ಲಿ ಅನುಷ್ಕಾ ಅವರೊಂದಿಗೆ ಸ್ವಲ್ಪ ಸಮಯ ಕಳೆದರು. ಲಂಡನ್‌ನ ರೆಸ್ಟೋರೆಂಟ್‌ನ ಹೊರಗೆ ಅನುಷ್ಕಾ ಮತ್ತು ವಿರಾಟ್ ಕಾಣಿಸಿಕೊಂಡಿರುವ  ಫೋಟೋ ವೈರಲ್ ಆಗಿತ್ತು. 
 

49

ವಿರಾಟ್‌ ಅವರ ಮಗ ಅಕಾಯ್‌ನ ಜನನವನ್ನು ಘೋಷಿಸಿದ ದಿನಗಳ ನಂತರ ಲಂಡನ್‌ನ ರೆಸ್ಟೋರೆಂಟ್‌ನಲ್ಲಿ ವಿರಾಟ್ ವಾಮಿಕಾ ಅವರೊಂದಿಗೆ ಕಾಣಿಸಿಕೊಂಡರು .ಇದು ಅಕಾಯ್ ಲಂಡನ್‌ನಲ್ಲಿ ಜನಿಸಿದನೆಂಬ ನಂಬಿಕೆಗೆ ಕಾರಣವಾಯಿತು.
 

59

ಇದಲ್ಲದೆ ಅನುಷ್ಕಾ ಶರ್ಮಾ ತನ್ನ ಎರಡನೇಯ ಗರ್ಭಾವಸ್ಥೆಯ ಹಲವು ತಿಂಗಳನ್ನು ಲಂಡನ್‌ನಲ್ಲಿ ಕಳೆದರು. ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದೂ, ತಮ್ಮ ಭವಿಷ್ಯವನ್ನು ಗುರುಯಾಗಿಸಿಕೊಂಡೆಂದು ಹೇಳಲಾಗುತ್ತಿದೆ.  

69

ವಿರಾಟ್ ಕೊಹ್ಲಿ ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು ತಪ್ಪಿ,ಸಿ ತಮ್ಮ ಎರಡನೇ ಮಗುವಿನ ಜನನಕ್ಕಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸಿದ್ದಾರೆ ಎಂದು ವರದಿಗಳು ಹೇಳಿದ್ದವು.

79

ವಿರಾಟ್ ಕೊಹ್ಲಿ ಅವರು ಯಾರೂ ಗುರುತಿಸಿದ ಲಂಡನ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ ಎಂದು ಆಗಾಗ್ಗೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಿಂದ ಅನುಷ್ಕಾ ಶರ್ಮಾ ಅನುಪಸ್ಥಿತಿಯು ಈ ಊಹಾಪೋಹಕ್ಕೆ ಕಾರಣವಾಗಿದೆ.

89

ಕಳೆದ ವರ್ಷ 'ತಾನು ಇನ್ನು ಮುಂದೆ ಹೆಚ್ಚು ಚಿತ್ರಗಳನ್ನು ಮಾಡಲು ಬಯಸುವುದಿಲ್ಲ ಮತ್ತು ಬದಲಿಗೆ ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತೇನೆ' ಎಂದು ಅನುಷ್ಕಾ ಹೇಳಿದರು. 

99

'ಎರಡು ತಿಂಗಳ ಕಾಲ ಸಾಮಾನ್ಯ ಜೀವನ ನೆಡೆಸಲು ನಾವು ದೇಶದಲ್ಲಿ ಇರಲಿಲ್ಲ. ನನಗೆ, ನನ್ನ ಕುಟುಂಬಕ್ಕೆ - ಇದು ಅತಿವಾಸ್ತವಿಕ ಅನುಭವ. ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶಕ್ಕಾಗಿ ದೇವರಿಗೆ ಹೆಚ್ಚು ಕೃತಜ್ಞ. ರಸ್ತೆಯಲ್ಲಿ ಇನ್ನೊಬ್ಬ ವ್ಯಕ್ತಿಯಾಗಿ ಗುರುತಿಸಿಕೊಳ್ಳದಿರುವುದು ಅದ್ಭುತ ಅನುಭವ' ಎಂದು ವಿರಾಟ್ ಕೊಹ್ಲಿ ಈ ವರ್ಷದ ಮಾರ್ಚ್‌ನಲ್ಲಿ ಹೇಳಿದರು.

Read more Photos on
click me!

Recommended Stories