ಸ್ಮೃತಿ ಮಂಧನಾ ಜೋಡಿಗೆ 5ನೇ ವಾರ್ಷಿಕೋತ್ಸವ: ಆರ್‌ಸಿಬಿಗೆ ಕಪ್‌ ಗೆದ್ದುಕೊಟ್ಟ ನಾಯಕಿಗೆ ಕ್ಯೂಟಿ ಎಂದ ಬಾಯ್‌ಫ್ರೆಂಡ್

Published : Jul 08, 2024, 02:29 PM ISTUpdated : Jul 08, 2024, 02:35 PM IST

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಕ್ರಿಕೆಟ್  ತಂಡದ ನಾಯಕಿ ಸ್ಮೃತಿ ಮಂಧನಾ ಇದೀಗ ತಮ್ಮ ಬಾಯ್‌ ಫ್ರೆಂಡ್ ಜತೆಗೆ 5ನೇ ವರ್ಷದ ಪ್ರೀತಿ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದರ ಜತೆಗೆ ಸ್ಮೃತಿ ಬಾಯ್‌ಫ್ರೆಂಡ್ 'ಮೈ ಕ್ಯೂಟಿ' ಎಂದು ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ.  

PREV
18
ಸ್ಮೃತಿ ಮಂಧನಾ ಜೋಡಿಗೆ 5ನೇ ವಾರ್ಷಿಕೋತ್ಸವ: ಆರ್‌ಸಿಬಿಗೆ ಕಪ್‌ ಗೆದ್ದುಕೊಟ್ಟ ನಾಯಕಿಗೆ ಕ್ಯೂಟಿ ಎಂದ ಬಾಯ್‌ಫ್ರೆಂಡ್

ಭಾರತ ಮಹಿಳಾ ಕ್ರಿಕೆಟ್ ತಂಡದ ಎಡಗೈ ಆರಂಭಿಕ ಬ್ಯಾಟರ್‌, ನ್ಯಾಷನಲ್ ಕ್ರಶ್ ಖ್ಯಾತಿಯ ಆರ್‌ಸಿಬಿ ತಂಡದ ನಾಯಕ ಸ್ಮೃತಿ ಮಂಧಾನ ಕದ್ದುಮುಚ್ಚಿ ತಮ್ಮ ಬಾಯ್‌ಫ್ರೆಂಡ್ ಜತೆ ಡೇಟಿಂಗ್ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿಯೇನೂ ಉಳಿದಿಲ್ಲ.
 

28

ಸ್ಮೃತಿ ಮಂಧನಾ ಹಾಗೂ ಪಾಲಾಶ್ ಮುಚ್ಚಲ್ ಇಬ್ಬರೂ ಸಾಕಷ್ಟು ಸಮಯದಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗಾಳಿಸುದ್ದಿ ಹರಿದಾಡುತ್ತಲೇ ಬಂದಿತ್ತು. ಆದರೆ ಇದೀಗ 5 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಲಾಶ್ ಮುಚ್ಚಲ್ ಈ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
 

38

ಕಳೆದ ವರ್ಷ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ವೇಳೆ ಸ್ಮೃತಿಗೆ ತಮ್ಮ ಬಾಯ್‌ಫ್ರೆಂಡ್ ಪಾಲಾಶ್ ಮುಚ್ಚಲ್ ಬಹಿರಂಗವಾಗಿಯೇ ಹಗ್ ಮಾಡಿ ಗಮನ ಸೆಳೆದಿದ್ದರು.

48

ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಸ್ಮೃತಿ ಮಂಧನಾ, ಖ್ಯಾತ ಮ್ಯೂಸಿಕ್ ಕಂಪೋಸರ್ ಪಾಲಾಶ್ ಮುಚ್ಚಲ್ ಅವರ ಪ್ರೀತಿಗೆ 5 ವರ್ಷ ತುಂಬಿದ್ದು, ಇದೀಗ ಈ ಇಬ್ಬರು ಜೋಡಿ ತಮ್ಮ 5ನೇ ಪ್ರೀತಿ ವಾರ್ಷಿಕೋತ್ಸವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಿದ್ದಾರೆ.

58

ಇದೀಗ ಸ್ಮೃತಿ ಮಂಧನಾ ಪ್ರಿಯಕರ ಪಾಲಾಶ್ ಮುಚ್ಚಲ್, ಇಬ್ಬರು ಪ್ರೀತಿ ಸೆಲಿಬ್ರೇಟ್ ಮಾಡುವ ಫೋಟೋ ಜತೆಗೆ ಮೈ ಕ್ಯೂಟಿ ಎನ್ನುವ ಕಮೆಂಟ್ ಮಾಡುವ ಮೂಲಕ ತಮ್ಮಿಬ್ಬರ ಪ್ರೀತಿಯನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ.

68

ಸೋಷಿಯಲ್ ಮೀಡಿಯಾವಾದ ಇನ್‌ಸ್ಟಾಗ್ರಾಂನಲ್ಲಿ ಸುಮಾರು 2 ಮಿಲಿಯನ್(20 ಲಕ್ಷ) ಫಾಲೋವರ್ಸ್ ಹೊಂದಿರುವ ಪಾಲಾಶ್ ಮುಚ್ಚಲ್, ತಮ್ಮ 5 ವರ್ಷದ ಲವ್ ಆನಿವರ್ಸರಿ ಫೋಟೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ನಾಲ್ಕೂವರೆ ಲಕ್ಷಕ್ಕೂ ಅಧಿಕ ಲೈಕ್ಸ್‌ ಬಂದಿವೆ.

78

29 ವರ್ಷದ ಪಾಲಾಶ್ ಮುಚ್ಚಲ್ ಓರ್ವ ಮ್ಯೂಸಿಕ್ ಕಂಪೋಸರ್ ಹಾಗೂ ಫಿಲ್ಮ್ ಮೇಕರ್ ಆಗಿದ್ದಾರೆ. ಟಿ ಸೀರಿಸ್‌, ಜೀ ಮ್ಯೂಸಿಕ್‌ಗಾಗಿ ಪಾಲಾಶ್ ಸುಮಾರು 40ಕ್ಕೂ ಅಧಿಕ ಮ್ಯೂಸಿಕ್ ವಿಡಿಯೋಗಳನ್ನು ಮಾಡಿದ್ದಾರೆ.

88
Smriti Mandhana Palash Muchhal

ಸದ್ಯ ಸ್ಮೃತಿ ಮಂಧನಾ ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಸ್ಮೃತಿ ಹಾಗೂ ಮುಚ್ಚಲ್ ಯಾವಾಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories